ಕಾಂಗ್ರೆಸ್‌ನ ಹಿರಿಯ ನಾಯಕಿ ಹಾಗೂ ಮಾಜಿ ಶಾಸಕಿ, ಕುಂದಾಪುರದ ಇಂದಿರಾಗಾಂಧಿ ಎಂದೇ ಖ್ಯಾತರಾಗಿದ್ದ ವಿನ್ನಿಫ್ರೆಡ್‌ ಫರ್ನಾಂಡಿಸ್‌ (91) ಅಲ್ಪಕಾಲದ ಅಸೌಖ್ಯದಿಂದಾಗಿ ಇಲ್ಲಿಗೆ ಸಮೀಪದ ಚರ್ಚ್ ರಸ್ತೆಯ ತಮ್ಮ ನಿವಾಸದಲ್ಲಿ ಮಂಗಳವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. 

ಕುಂದಾಪುರ(ಏ.29): ಕಾಂಗ್ರೆಸ್‌ನ ಹಿರಿಯ ನಾಯಕಿ ಹಾಗೂ ಮಾಜಿ ಶಾಸಕಿ, ಕುಂದಾಪುರದ ಇಂದಿರಾಗಾಂಧಿ ಎಂದೇ ಖ್ಯಾತರಾಗಿದ್ದ ವಿನ್ನಿಫ್ರೆಡ್‌ ಫರ್ನಾಂಡಿಸ್‌ (91) ಅಲ್ಪಕಾಲದ ಅಸೌಖ್ಯದಿಂದಾಗಿ ಇಲ್ಲಿಗೆ ಸಮೀಪದ ಚರ್ಚ್ ರಸ್ತೆಯ ತಮ್ಮ ನಿವಾಸದಲ್ಲಿ ಮಂಗಳವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.

ಮೃತರಿಗೆ ಮೂರು ಗಂಡು ಹಾಗೂ ಮೂರು ಹೆಣ್ಣು ಮಕ್ಕಳಿದ್ದಾರೆ. ಗುರುವಾರ ಬೆಳಗ್ಗೆ 10 ಗಂಟೆಗೆ ಕುಂದಾಪುರದ ಹೋಲಿ ರೋಜರಿ ಇಗರ್ಜಿಯಲ್ಲಿ ಅಂತ್ಯವಿಧಿ ನಡೆಯಲಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.

ಕೊಡಂಗಳ ನದಿಯಲ್ಲಿ ಪಿಪಿಇ ಪತ್ತೆ, ಕೊರೋನಾ ಭೀತಿ

ಮಂಗಳೂರಿನಲ್ಲಿ ಹುಟ್ಟಿದ್ದ ಅವರು ಉದ್ಯಮಿ ಲೂಯಿಸ್‌ ಎಂ. ಫರ್ನಾಂಡಿಸ್‌ ಅವರನ್ನು ವಿವಾಹವಾದ ಬಳಿಕ ಕುಂದಾಪುರದಲ್ಲಿ ನೆಲೆಸಿದ್ದರು. ಪ್ರಜಾ ಸೋಷಿಯಲಿಸ್ಟ್‌ ಪಕ್ಷದ (ಪಿಎಸ್‌ಪಿ) ಮೂಲಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದ ವಿನ್ನಿಫ್ರೆಡ್‌, 17 ವರ್ಷಗಳ ಕಾಲ ಪುರಸಭೆಯ ಅಧ್ಯಕ್ಷೆಯಾಗಿದ್ದರು.

1967 ರಿಂದ 1972 ರ ವರೆಗೆ ಪಿಎಸ್‌ಪಿ ಪಕ್ಷದಿಂದ ಹಾಗೂ 1972 ರಿಂದ 1977 ರವರೆಗೆ ಕಾಂಗ್ರೆಸ್‌ ಪಕ್ಷದಿಂದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಅವರು, 2001 ರಿಂದ 2007 ರವರೆಗೆ ಕಾಂಗ್ರೆಸ್‌ ಪಕ್ಷದ ವಿಧಾನ ಪರಿಷತ್‌ ಸದಸ್ಯೆಯಾಗಿದ್ದರು. ಕೇಂದ್ರದಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯ ದೂರವಾಣಿ ನಿಗಮದ ನಿರ್ದೇಶಕಿಯಾಗಿಯೂ ಆಗಿದ್ದರು.

ಮೊಬೈಲ್ ನೋಡುತ್ತಾ ಕಾಡಾನೆಗೆ ಡಿಕ್ಕಿ ಹೊಡೆದ ಭೂಪ!

ಕುಂದಾಪುರಕ್ಕೆ ಮಹಿಳಾ ಪೊಲೀಸ್‌ ಠಾಣೆ ತರುವಲ್ಲಿ ಸಾಕಷ್ಟುಮುತುವರ್ಜಿ ವಹಿಸಿದ್ದ ವಿನ್ನಿಫ್ರೆಡ್‌, ಈ ಠಾಣೆ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರವಾದ ಬಗ್ಗೆ ಪ್ರಬಲ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವರ್ಚಸ್ಸು ಹೊಂದಿದ್ದ ಅವರು ದೇವರಾಜ್‌ ಅರಸ್‌, ಗುಂಡೂರಾವ್‌, ಎಸ್‌.ಎಂ. ಕೃಷ್ಣ, ಟಿ.ಎ.ಪೈ, ರಂಗನಾಥ್‌ ಶೆಣೈ, ಆಸ್ಕರ್‌ ಫರ್ನಾಂಡಿಸ್‌, ಬಿ. ಜನಾರ್ದನ್‌ ಪೂಜಾರಿ, ಎಂ. ವೀರಪ್ಪ ಮೊಯಿಲಿ, ಕೆ. ಪ್ರತಾಪ್‌ಚಂದ್ರ ಶೆಟ್ಟಿಸೇರಿದಂತೆ ಅನೇಕ ಮುಖಂಡರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.