ಹೇಳಲಾರದ ಸಮಸ್ಯೆಯಿಂದ  ಬಳಲುತ್ತಿರುವೆ ಎಂದು ನಟ ಮಮ್ಮುಟ್ಟಿ ಪುತ್ರ,  ನಟ ದುಲ್ಕರ್ ಸಲ್ಮಾನ್ ಕಣ್ಣೀರಿಟ್ಟಿದ್ದಾರೆ. ಅವರಿಗೆ ಆಗಿದ್ದೇನು? 

ಮಲಯಾಳಂ, ತಮಿಳು, ತೆಲುಗು (Telugu) ಹಿಂದಿ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟ ದುಲ್ಕರ್​ ಕುಮಾರ್​ ಈಚೆಗಷ್ಟೇ ಸ್ಯಾಂಡಲ್​ವುಡ್​ನಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ಸೂಪರ್​ಸ್ಟಾರ್​ ಮುಮ್ಮಟ್ಟಿ ಅವರ ಮಗನಾಗಿರುವ ದುಲ್ಕರ್​ ಸಲ್ಮಾನ್​ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರೋದ್ಯಮವು ನಿರ್ಮಿಸುತ್ತಿರುವ ಎಲ್ಲಾ ಸಿನಿಮಾಗಳನ್ನು ನಾನು ಇಷ್ಟಪಟ್ಟಿದ್ದೇನೆ ಅಷ್ಟೇ ಅಲ್ಲದೆ ಕನ್ನಡದ ನಟರು, ನಿರ್ದೇಶಕರೂ ನನಗೆ ಪರಿಚಯ. ಅವರ ಜತೆಗೂ ನಟನೆಯ ವಿಚಾರದ ಬಗ್ಗೆ ಮಾತನಾಡುತ್ತಿರುತ್ತೇನೆ ಎಂದು ಕನ್ನಡ ಚಿತ್ರದಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ನಟ ಯಶ್‌ ಮತ್ತು ದುಲ್ಖರ್‌ ಸಲ್ಮಾನ್‌ (Dulkar Salman) ಆಪ್ತ ಸ್ನೇಹಿತರು. ಈ ಇಬ್ಬರು ಕಲಾವಿದರು ಮುಖತಃ ಮಾತಿಗೆ ಸಿಕ್ಕಿದ್ದು ಕೆಲವೇ ಬಾರಿಯಾದರೂ, ಸಿನಿಮಾಗಳ ವಿಚಾರದಲ್ಲಿ ಒಬ್ಬರಿಗೊಬ್ಬರು ಸಾಥ್‌ ನೀಡಿದ ಉದಾಹರಣೆಗಳಿವೆ. ಬಹುಭಾಷಾ ನಟನಾಗಿರುವ ದುಲ್ಕರ್​ ಅವರಿಗೆ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಭಿಲಾಷ್ ಜೋಶಿ ನಿರ್ದೇಶನದ ‘ಕಿಂಗ್ ಆಫ್ ಕೋಥಾ’ ಸಿನಿಮಾದಲ್ಲಿ ದುಲ್ಕರ್ ನಟಿಸುತ್ತಿದ್ದಾರೆ. ಜೀ ಸ್ಟುಡಿಯೋಸ್ ಸಹಯೋಗದಲ್ಲಿ ದುಲ್ಕರ್ ತಮ್ಮ ಪ್ರೊಡಕ್ಷನ್ ಹೌಸ್ ವ್ಯಾಪೋರಿಯರ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಇದರ ಮಧ್ಯೆಯೇ ನಿನ್ನೆ ನಟ ದುಲ್ಕರ್​ ಅವರು, ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿ, ಕಣ್ಣೀರಿಟ್ಟಿದ್ದಾರೆ. ಇದನ್ನು ನೋಡಿ ಫ್ಯಾನ್ಸ್​ (Fans) ಶಾಕ್​ ಆಗಿದ್ದಾರೆ. ಈ ವಿಡಿಯೋಗೆ ಸಹಸ್ರಾರು ಪ್ರಶ್ನೆಗಳ ಸುರಿಮಳೆಯಾಗುತ್ತಿದ್ದಂತೆಯೇ ನಟ ಈ ಪೋಸ್ಟ್​​ ಡಿಲೀಟ್​​ ಮಾಡಿದ್ದಾರೆ. ಅಷ್ಟಕ್ಕೂ ನಟ ದುಲ್ಕರ್​ ಅವರಿಗೆ ಆಗಿದ್ದೇನು ಎನ್ನುವ ಚಿಂತೆಯಲ್ಲಿ ಅಭಿಮಾನಿಗಳು ಇದ್ದಾರೆ.

ಕತ್ರಿನಾ ಕೈಫ್ ಜೊತೆ ಬಲವಂತದ ಕಿಸ್ ಅನುಭವ ಹೇಳಿಕೊಂಡ ನಟ ಶಾರುಖ್ ಖಾನ್​​!

ವಿಡಿಯೋದಲ್ಲಿ ನಟ ದುಲ್ಕರ್​ ಅವರು, ತಮ್ಮ ಮನಸ್ಸಿನ ವಿಚಾರಗಳನ್ನು ತಿಳಿಸಿ ಕಣ್ಣೀರಾಗಿದ್ದಾರೆ. ಅವರಿಗೆ ಕೆಲವು ದಿನಗಳಿಂದ ನಿದ್ದೆ ಬರುತ್ತಿಲ್ಲವಂತೆ. ಇದಕ್ಕೆ ತಾವು ಅನುಭವಿಸುತ್ತಿರುವ ಮಾನಸಿಕ ಹಿಂಸೆಯೇ ಕಾರಣ ಎಂದು ನಟ ಹೇಳಿದ್ದಾರೆ. ಅವರ ಮಾತಿನಲ್ಲಿಯೇ ಹೇಳುವುದಾದರೆ, ‘ಕೆಲವು ದಿನಗಳಿಂದ ನಿದ್ದೆ ಬರುತ್ತಿಲ್ಲ. ಸಂದರ್ಭಗಳು ಎಂದಿಗೂ ಒಂದೇ ರೀತಿ ಇರುವುದಿಲ್ಲ. ನಾನು ಮೊದಲ ಬಾರಿಗೆ ಈ ರೀತಿಯ ಅನುಭವವನ್ನು ಅನುಭವಿಸುತ್ತಿದ್ದೇನೆ. ಸಿಕ್ಕಾಪಟ್ಟೆ ಗೊಂದಲದಲ್ಲಿ ಇದ್ದೇನೆ. ಇದರಿಂದ ಹೊರಕ್ಕೆ ಬರಲು ಸಾಧ್ಯವಾಗುತ್ತಿಲ್ಲ' ಎಂದು ಮನದಾಳದ ನೋವು ತೆರೆದಿಟ್ಟಿದ್ದಾರೆ. ನಾನು ಇನ್ನೂ ಏನನ್ನೋ ಹೇಳಲು ಬಯಸುತ್ತೇನೆ. ಆದರೆ ಅದನ್ನು ಹೇಳಲು ಆಗುತ್ತಿಲ್ಲ. ನನ್ನ ಮನಸ್ಸಿನಲ್ಲಿ ಇರುವ ಈ ನೋವನ್ನು ಹೇಳುವುದೋ, ಬೇಡವೋ ತಿಳಿಯುತ್ತಿಲ್ಲ. ಆದರೆ ಈ ನೋವಿನಿಂದ ಹೊರಕ್ಕೆ ಬರಲಾರದ ಹಂತವನ್ನು ನಾನು ತಲುಪಿದ್ದೇನೆ ಎನ್ನಿಸುತ್ತಿದೆ. ನಾನು ಅದನ್ನು ಹೇಳಲಾರದೇ ತೊಳಲಾಡುತ್ತಿದ್ದೇನೆ ಎಂದು ನಟ ಕಣ್ಣೀರಾಗಿದ್ದಾರೆ.

ಈ ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​ (Fans shock) ಆಗಿದ್ದು, ಏನಾಯಿತು ಎಂದು ಪ್ರಶ್ನಿಸುತ್ತಿದ್ದಾರೆ. ನಿಮ್ಮ ಸಮಸ್ಯೆ ಏನು, ಎಲ್ಲಾ ಮನುಷ್ಯರಿಗೆ ಸಮಸ್ಯೆ ಇದ್ದದ್ದೇ. ಯಾರೂ ಇದಕ್ಕೆ ಹೊರತಾಗಿಲ್ಲ. ವಿನಾಕಾರಣ ಮನಸ್ಸಿಗೆ ನೋವು ಮಾಡಿಕೊಳ್ಳಬೇಡಿ ಎಂದು ಹಲವರು ನಟನಿಗೆ ಸಮಾಧಾನ ಮಾಡುತ್ತಿದ್ದಾರೆ. ಅಂದಹಾಗೆ ದುಲ್ಕರ್ ಸಲ್ಮಾನ್ 2022ರಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಒಂದೇ ವರ್ಷದಲ್ಲಿ ನಾಲ್ಕು ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದರು. ತಮಿಳಿನಲ್ಲಿ ಹೇ ಸಿನಾಮಿಕಾ, ತೆಲುಗು ಭಾಷೆಯಲ್ಲಿ ಸೀತಾ ರಾಮಮ್, ತಮಿಳಿನಲ್ಲಿ ಸಲ್ಯೂಟ್‌ ಹಾಗೂ ಹಿಂದಿಯಲ್ಲಿ Chup: The Revenge Of The Artist ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 2019ರಲ್ಲಿ ದಿ ಜೋಯಾ ಫ್ಯಾಕ್ಟರಿಯಲ್ಲಿ ನಟಿಸಿ ಸುಮಾರು ಮೂರು ವರ್ಷಗಳ ನಂತರ ಹಿಂದಿ ಸಿನಿಮಾಗೆ ಕಮ್ ಬ್ಯಾಕ್ ಮಾಡಿದ್ದರು. ಸಾಮಾನ್ಯವಾಗಿ ದುಲ್ಕರ್ ಸಲ್ಮಾನ್ ಏನೇ ಮಾಡಿದ್ದರೂ ವೈರಲ್ ಆಗುತ್ತದೆ. ಕಳೆದ ಬಾರಿ, ನೆಟ್ಟಿಗರ ವಿರುದ್ಧ ಗರಂ ಆಗಿದ್ದ ನಟ, ನಾನು ಯಾವ ರೀತಿ ಸಿನಿಮಾ ಮಾಡಬೇಕು ಯಾರ ಜೊತೆ ಮಾಡಬೇಕು ಹೇಗಿರಬೇಕು ಎಂದು ಬಿಟ್ಟಿ ಸಲಹೆ ನೀಡಲು ಮುಂದಿರುತ್ತಾರೆ ಎಂದಿದ್ದರು.

ಬ್ಲೌಸ್ ಹಾಕದೆ ಸೀರೆ ಧರಿಸಿದ ಆಲಿಯಾ ಭಟ್; ರಣವೀರ್‌ ಸಿಂಗ್ ಜೊತೆ ಫೋಟೋ ಲೀಕ್!

Scroll to load tweet…