ಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಪುತ್ರನಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಯಾವುದೇ ಲಕ್ಷಣಗಳಿಲ್ಲದಿದ್ದರೂ ಅವರು ಈಗ ಕ್ವಾರೆಂಟೈನ್‌ನಲ್ಲಿರುವುದಾಗಿ ವಕ್ತಾರರು ತಿಳಿಸಿದ್ದಾರೆ.

ಡಾನ್‌ಗೆ ಕೊರೋನಾ ಪಾಸಿಟಿವ್ ದೃಢ ಪಟ್ಟಿದೆ. ಅವರು ಖಾಸಗಿ ನಿವಾಸದಲ್ಲೇ ಕ್ವಾರಂಟೈನ್ ಆಗಿದ್ದಾರೆ ಎಂದು ಟ್ರಂಪ್ ಪುತ್ರನ ವಕ್ತಾರರು ಮಾಹಿತಿ ನೀಡಿದ್ದಾರೆ.

Fact Check: ಕೊರೋನಾ ಸೋಂಕಿತರು ಐಸೋಲೇಶನ್‌ಗೆ ಒಳಪಡುವ ಅಗತ್ಯವಿಲ್ಲ ಎಂದಿತಾ WHO?

ಕೊರೋನಾ ಗೈಡ್‌ಲೈನ್ಸ್‌ಗಳನ್ನು ಪಾಲಿಸುತ್ತಿದ್ದ ಟ್ರಂಪ್ ಪುತ್ರನಿಗೆ ಯಾವುದೇ ಕೊರೋನಾ ಲಕ್ಷಣಗಳಿರಲಿಲ್ಲ. ಟ್ರಂಪ್ ಪುತ್ರನಿಗೆ ಕೊರೋನಾ ಪಾಸಿಟಿವ್ ದೃಢೊಪಟ್ಟ ಬೆನ್ನಲ್ಲೇ ವೈಟ್‌ಹೌಸ್‌ಗೆ ಸಂಬಂಧಿಸಿದ ಹಲವರಿಗೆ ಪಾಸಿಟಿವ್ ದೃಢಪಟ್ಟಿದೆ. ಇದರಲ್ಲಿ ಮಲೇನಿಯಾ ಟ್ರಂಪ್, ಅವರ ಕಿರಿಯ ಪುತ್ರ ಬಾರನ್ ಕೂಡಾ ಸೇರಿದ್ದಾರೆ.

ಪಾಕ್ ಜನರ ಮೇಲೆ ಚೀನಾ ಕೊರೋನಾ ಲಸಿಕೆ ಪ್ರಯೋಗ

ಇತ್ತೀಚೆಗಷ್ಟೇ ಶ್ವೇತ ಭವನದ ಸಹಾಯಕರಾದ ಆಂಡ್ರ್ಯೂ ಗಿಲಾನಿ ಹಾಗೂ ಅಧ್ಯಕ್ಷರ ಖಾಸಗಿ ಲಾಯರ್ ಅವರ ಪುತ್ರನಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಕೊರೋನಾಗೆ ಸಂಬಂಧಿಸಿ ಟ್ರಂಪ್ ಆಡಳಿತದ ನಿಲುವುಗಳ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ.