ಸಿನಿಮಾ ಹಾಡು ಕೇಳ್ತಾರಾ ಮೋದಿ ? ಅಲಿಯಾ ಭಟ್ ಪ್ರಶ್ನೆಗೆ ಪ್ರಧಾನಿ ಉತ್ತರವೇನು?
ರಜೆ ಪಡೆಯದೇ ಪ್ರತಿ ದಿನ 16ಕ್ಕೂ ಹೆಚ್ಚು ಗಂಟೆ ಕೆಲಸ ಮಾಡುವ ಪ್ರಧಾನಿ ಅನ್ನೋ ಹೆಗ್ಗಳಿಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ. ಆದರೆ ಇದರ ನಡುವೆ ಮೋದಿ ಸಿನಿಮಾ ಹಾಡುಗಳನ್ನು ಕೇಳುತ್ತಾರ? ಈ ಕುರಿತು ಸ್ವತಃ ಮೋದಿ ಉತ್ತರಿಸಿದ್ದಾರೆ.
ಮುಂಬೈ(ಡಿ.12) ಪ್ರಧಾನಿ ನರೇಂದ್ರ ಮೋದಿ ಕಾರ್ಯನಿರ್ವಹಿಸುವ ಶೈಲಿ ವಿಭಿನ್ನ. ಬಿಡುವಿಲ್ಲದೆ ಕೆಲಸ ಮಾಡುತ್ತಾರೆ. ಸರಣಿ ಸಭೆ, ಪ್ರಯಾಣ, ಏನೇ ಇದ್ದರೂ ಪ್ರತಿ ದಿನ ಮಾಡಬೇಕಾದ ಕೆಲಸಕ್ಕೆ ಧಕ್ಕೆ ಮಾಡುವುದಿಲ್ಲ. ಮುಂದಕ್ಕೆ ಹಾಕುವುದಿಲ್ಲ. ವಿಶ್ರಾಂತಿ ಪಡೆಯದೇ ಕೆಲಸ ಮಾಡುವ ಪ್ರಧಾನಿ ಅನ್ನೋ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ಈ ಬಿಡುವಿಲ್ಲದ ಕೆಲಸದ ನಡುವೆ ಪ್ರಧಾನಿ ಮೋದಿ ಸಿನಿಮಾ ಹಾಡುಗಳನ್ನು ಕೇಳುತ್ತಾರಾ? ಮೋದಿಗೆ ಮ್ಯೂಸಿಕ್ ಕೇಳುವ ಅಭ್ಯಾಸ ಇದೆಯಾ ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿಯನ್ನು ಕೆಲ ಬಾಲಿವುಡ್ ಸೆಲೆಬ್ರೆಟಿಗಳು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ನಟಿ ಅಲಿಯಾ ಭಟ್ ಈ ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಮೋದಿ ಉತ್ತರಿಸಿದ್ದಾರೆ.
ಮೋದಿ ಜೊತೆಗಿನ ಮಾತುಕತೆಯಲ್ಲಿ ಅಳಿಯಾ ಭಟ್, ನೀವು ಯೋಧರ ಜೊತೆ ನಿಂತು ನಾನು ಅಭಿನಯಿಸಿದ ಸಿನಿಮಾ ಹಾಡೊಂದನ್ನು ಹಾಡಿರುವ ವಿಡಿಯೋ ಕ್ಲಿಪ್ ನೋಡಿದ್ದೇನೆ. ಮ್ಯೂಸಿಕ್ ಭಾಷೆ ಬೇಕಿಲ್ಲ. ಎಲ್ಲರನ್ನೂ ಒಗ್ಗೂಡಿಸುತ್ತದೆ. ಭಾರತದ ಹಾಡುಗಳನ್ನು ಕೇಳುವಾಗ ಜನರು ಭಾವನಾತ್ಮಕವಾಗಿ ಕನೆಕ್ಟ್ ಆಗುತ್ತಾರೆ ಎಂದು ಅಲಿಯಾ ಭಟ್ ಹೇಳಿದ್ದಾರೆ. ಇದೇ ಕುರಿತು ನನ್ನಲ್ಲಿ ಒಂದು ಪ್ರಶ್ನೆ ಇದೆ. ನಿಮಗೆ ಮ್ಯೂಸಿಕ್ ಕೇಳಲು ಸಮಯ ಸಿಗುತ್ತಾ? ಕೇಳುವ ಅಭ್ಯಾಸ ಇದೆಯಾ ಎಂದು ಅಲಿಯಾ ಭಟ್ ಪ್ರಶ್ನಿಸಿದ್ದಾರೆ.
ಮದ್ವೆಗೂ ಮುನ್ನ ಕಪೂರ್ ಫ್ಯಾಮಿಲಿ ಜೊತೆ ಆಲಿಯಾ ಬಾಂಧವ್ಯ ಹೇಗಿತ್ತು?
ಅಲಿಯಾ ಭಟ್ ಪ್ರಶ್ನೆಗೆ ಉತ್ತರಿಸಿದ ಮೋದಿ, ನಾನು ಮ್ಯೂಸಿಕ್ ಕೇಳುತ್ತೇನೆ. ಕಾರಣ ನನಗೆ ಇಷ್ಟ. ನನಗೆ ಸಮಯ ಸಿಕ್ಕಾಗ ಹಾಡುಗಳನ್ನು ಕೇಳಿ ಆನಂದಿಸುತ್ತೇನೆ ಎಂದು ಮೋದಿ ಉತ್ತರಿಸಿದ್ದಾರೆ. ಈ ಮೂಲಕ ಮೋದಿ ಸಂಗೀತ ಕೇಳುವ ಅಭ್ಯಾಸ ಇದೆ ಅನ್ನೋದನ್ನು ಸ್ಪಷ್ಟಪಡಿಸಿದ್ದಾರೆ. ಆದರೆ ತಾವು ಕೇಳುವ ಹಾಡುಗಳ ಕುರಿತು ಯಾವುದೇ ಮಾಹಿತಿ ನೀಡಿಲ್ಲ.
ಬಾಲಿವುಡ್ ದಿಗ್ಗದ ರಾಜ್ ಕಪೂರ್ 100ನೇ ವರ್ಷಾಚರಣೆ ಪ್ರಯುಕ್ತ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಾಗೂ ಬಾಲಿವುಡ್ ಸೆಲೆಬ್ರೆಟಿಗಳು ಭೇಟಿಯಾಗಿದ್ದರೆ. ರಣಬೀರ್ ಕಪೂರ್, ಸಹೋದರಿ ರಿಧಿಮಾ ಕಪೂರ್, ತಾಯಿ ರಿತು ಕಪೂರ್, ನಟಿ ಕರಿಷ್ಮಾ ಕಪೂರ್, ಕರೀನ್ ಕಪೂರ್, ಅರ್ಮಾನ್, ಆಧಾರ್ ಜೈನ್, ಸೈಫ್ ಆಲಿ ಖಾನ್, ರಿಮಾ ಜೈನ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಮೋದಿ ಭೇಟಿಯಾಗಿದ್ದಾರೆ.
ಭೇಟಿ ಬಳಿಕ ಮಾತನಾಡಿದ ರಣಬೀರ್ ಕಪೂರ್, ಇದು ಅತ್ಯಂತ ವಿಶೇಷ ದಿನ. ಪ್ರಧಾನಿ ಮೋದಿ ಅವರು ರಾಜ್ ಕಪೂರ್ ಗೌರವ ಸಲ್ಲಿಸಿದ್ದಾರೆ. ರಾಜ್ ಕಪೂರ್ ಸಲುವಾಗಿ ಮೋದಿಯನ್ನು ಭೇಟಿ ಮಾಡುವ ಅವಕಾಶ ಒದಗಿ ಬಂದಿತ್ತು. ಅತ್ಯಮ್ಯೂಲ್ಯ ಸಮಯವನ್ನು ನಮಗೆ ನೀಡಿದ್ದರೆ. ನಾವು ಕೆಲ ಉತ್ತಮ ಸಮಯವನ್ನು ಮೋದಿ ಜೊತೆ ಕಳೆದಿದ್ದೇವೆ ಎಂದು ರಣಬೀರ್ ಕಪೂರ್ ಹೇಳಿದ್ದಾರೆ. ಮೋದಿಯನ್ನು ಭೇಟಿ ಮಾಡುತ್ತೇವೆ ಎಂದಾಗ ಇಡೀ ಕುಟುಂಬ ನವರ್ಸ್ ಆಗಿತ್ತು. ಮಾತನಾಡಲು ಹಿಂಜರಿಕೆಯಾಗಿತ್ತು. ಆದರೆ ಮೋದಿ ಆತ್ಮೀಯಾವಾಗಿ ಮಾತನಾಡಿದ್ದಾರೆ. ಅವರ ಆತ್ಮೀಯತೆಯಿಂದ ನಾವು ಮಾತನಾಡಲು ಸಾಧ್ಯವಾಯಿತು ಎಂದು ರಣಬೀರ್ ಕಪೂರ್ ಹೇಳಿದ್ದಾರೆ.