Asianet Suvarna News Asianet Suvarna News

ಬಾಹುಬಲಿ ಅದ್ಬುತ ಅನುಭವ ಎಂದ ನಿರ್ದೇಶಕ ಎಸ್.ಎಸ್.ರಾಜಮೌಳಿ!

'ಬಾಹುಬಲಿ' ಸಿನಿಮಾ ಹೊಸ ಅಧ್ಯಾಯದೊಂದಿಗೆ ಅನಿಮೇಟೆಡ್ ಫಾರ್ಮೆಟ್‌ದಲ್ಲಿ ಹೇಳಲು ಯೋಜನೆ ಸಿದ್ದಗೊಂಡಿದೆ ಎಂಬುದು ಗೊತ್ತೇ ಇದೆ. 

Director SS Rajamouli Shares A Message For Fans Ahead Of Baahubali gvd
Author
First Published May 13, 2024, 12:52 PM IST

'ಬಾಹುಬಲಿ' ಸಿನಿಮಾ ಹೊಸ ಅಧ್ಯಾಯದೊಂದಿಗೆ ಅನಿಮೇಟೆಡ್ ಫಾರ್ಮೆಟ್‌ದಲ್ಲಿ ಹೇಳಲು ಯೋಜನೆ ಸಿದ್ದಗೊಂಡಿದೆ ಎಂಬುದು ಗೊತ್ತೇ ಇದೆ. ಈ ಅನಿಮೇಷನ್ ಬಾಹುಬಲಿ ಪ್ರೋಮೋ ಕೂಡ ರಿಲೀಸ್ ಆದ್ದು, ನಿರ್ದೇಶಕ ಎಸ್​ಎಸ್​ ರಾಜಮೌಳಿ ಅವರೇ ಎ ಗ್ರಾಫಿಕ್ ಇಂಡಿಯಾ ಮತ್ತು ಆರ್ಕ ಮೀಡಿಯಾ ವರ್ಕ್ಸ್ ಪ್ರೊಡಕ್ಷನ್ ಅಡಿಯಲ್ಲಿ ಶರದ್‌ ದೇವರಾಜನ್ ಜೊತೆ ಸೇರಿ ನಿರ್ಮಾಣ ಮಾಡಿದ್ದಾರೆ. ಈ ಅನಿಮೇಷನ್ ಬಾಹುಬಲಿಗೆ ಜೀವನ್.ಜೆ.ಕಾಂಗ್-ನವೀನ್ ಜಾನ್ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಈ ಅನಿಮೇಷನ್ ಬಾಹುಬಲಿ ಬಗ್ಗೆ ಮಾತನಾಡಿರೋ ರಾಜಮೌಳಿ ನಾವು ಬಹುಬಲಿ ಜಗತ್ತನ್ನು ವಿಸ್ತರಿಸುವ ಕಥೆಯನ್ನು ರಚಿಸಿದ್ದೇವೆ. ಮಾಹಿಷ್ಮತಿಯ ಯೋಧರು ತಮ್ಮ ತಾಯ್ನಾಡನ್ನು ಉಳಿಸಲು ಒಂದಾದಾಗ ಸಾಮ್ರಾಜ್ಯಗಳ ನಡುವೆ ಮಹಾ ಘರ್ಷಣೆ ಉಂಟಾಗುವುದನ್ನು ಇದರಲ್ಲಿ ವೀಕ್ಷಿಸಬಹುದು ಎಂದಿದ್ದಾರೆ.

ಹೊಸ ರಿಯಾಲಿಟಿ ಶೋಗೆ ಸ್ಟಾರ್​ ಸುವರ್ಣ ಸಿದ್ಧತೆ: ಕನ್ನಡಿಗರ ಅಚ್ಚು ಮೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯು ಇದೀಗ ವೀಕ್ಷಕರಿಗೆ ಮಧ್ಯಾಹ್ನದ ಮನರಂಜನೆಯನ್ನು ಇನ್ನಷ್ಟು ದುಪ್ಪಟ್ಟುಗೊಳಿಸಲು "ಸುವರ್ಣ ಗೃಹಮಂತ್ರಿ" ಎಂಬ ಹೊಸದೊಂದು ರಿಯಾಲಿಟಿ ಶೋ ಅನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಇದೊಂದು ವಿಭಿನ್ನ ರೀತಿಯ ರಿಯಾಲಿಟಿ ಶೋ. ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡೋ ಗೃಹಿಣಿಯರನ್ನು ಹೆಣ್ಮಕ್ಕಳನ್ನು ಯಾರೂ ಗುರುತಿಸುವುದಿಲ್ಲ, ಮನೆ ಮಂದಿಯನ್ನು ಅವ್ರು ಎಷ್ಟೇ ಚೆನ್ನಾಗಿ ನೋಡ್ಕೊಂಡ್ರು 'ಥ್ಯಾಂಕ್ ಯು' ಅಂತನೂ ಯಾರೂ ಹೇಳಲ್ಲ.

ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ಗಂಡ-ಹೆಂಡ್ತಿಯ ಅನ್ಯೂನ್ಯತೆಯ ಬಗ್ಗೆ ತಿಳಿದು, ಅವರಿಗೆ ಸನ್ಮಾನಿಸಿ, ಮಾತುಕತೆ ನಡೆಸಿ ಆಟದ ಜೊತೆ ರೇಷ್ಮೆ ಸೀರೆ, ಚಿನ್ನ, ಬೆಳ್ಳಿ ಹಾಗೂ ಮತ್ತಷ್ಟು ಬೆಲೆಬಾಳುವ ಬಹುಮಾನಗಳನ್ನು ನೀಡುವುದೇ "ಸುವರ್ಣ ಗೃಹಮಂತ್ರಿ" ಕಾರ್ಯಕ್ರಮ. ಇದೇ ಮೊದಲ ಬಾರಿಗೆ ಜನಪ್ರಿಯ ನಿರೂಪಕ ಮುರಳಿ ಸ್ಟಾರ್ ಸುವರ್ಣ ವಾಹಿನಿಗೆ ಲಗ್ಗೆಯಿಟ್ಟಿದ್ದು, 'ಸುವರ್ಣ ಗೃಹಮಂತ್ರಿ' ಕಾರ್ಯಕ್ರಮದ ಸಾರಥಿಯಾಗಿ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸದ್ಯ 'ಸುವರ್ಣ ಗೃಹಮಂತ್ರಿ'ಯ ಪ್ರೋಮೋ ಬಿಡುಗಡೆ ಆಗಿದೆ. ಇದೇ ಸೋಮವಾರದಿಂದ ಮಧ್ಯಾಹ್ನ 1 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

46ನೇ ವಸಂತಕ್ಕೆ ಕಾಲಿಟ್ಟ ಮಿತ್ರ: ಬಹುಮುಖ ಪ್ರತಿಭೆ ನಟ ಮಿತ್ರ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಿತ್ರ ಅವರು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅದೆಂಥದ್ದೆ ಪಾತ್ರ ಕೊಟ್ಟರು ನುಂಗಿ ನೀರು ಕೊಡಿಯೋ ಮಿತ್ರ ಕರ್ನಾಟಕದ ಪ್ರಚಂಡ ಕುಳ್ಳ ದಿವಂಗತ ದ್ವಾರಕೀಶ್ ಅವರನ್ನ ಸ್ಫೂರ್ತಿಯನ್ನಾಗಿಸಿಕೊಂಡು‘ರಾಗ‘ ಅನ್ನೋ ಸಿನಿಮಾ ನಿರ್ಮಾಣ ಕಮ್ ನಟನೆ ಮಾಡಿ ಗೆದ್ದರು. 2003ರಲ್ಲಿ ಶಿವಣ್ಣ ನಟನೆಯ 75ನೇ ಸಿನಿಮಾ ‘ಶ್ರೀರಾಮ್‘ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಮಿತ್ರ ಇಲ್ಲಿಯ ತನಕ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಮಿತ್ರ ಈಗ  ಯಲ್ಲಾಕುನ್ನಿ‘ ಮತ್ತು ‘ಕರಾವಳಿ‘ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಕರಾವಳಿ‘ ಸಿನಿಮಾದಲ್ಲಿ ಒಂದು ವಿಶೇಷ ಗೆಟಪ್ನಲ್ಲಿ ಮಿತ್ರ ಕಾಣಿಸಿಕೊಂಡಿದ್ದಾರೆ.. ಎಂದೂ ಕೂಡ ಗಡ್ಡ ಮೀಸೆ ಬಿಡದ ಮಿತ್ರ ಫಸ್ಟ್ ಟೈಮ್ ವೈಟ್ ಗಡ್ಡ- ಮಿಸೆ ಬಿಟ್ಟು ಪಾತ್ರಕ್ಕೆ ಎರಡು ತಿಂಗಳು ಜಿಮ್ ನಲ್ಲಿ ಕಸರತ್ತು ಮಾಡಿ 95ಕೆ.ಜಿ ಇದ್ದವರು 70 ಕೆ.ಜಿ ತೂಕ ಇಳಿಸಿಕೊಂಡು 60ವರ್ಷ ವಯಸಾದ ವ್ಯಕ್ತಿಯ ಪಾತ್ರವನ್ನ ಮಾಡುತ್ತಿದ್ದಾರೆ.

Latest Videos
Follow Us:
Download App:
  • android
  • ios