Asianet Suvarna News Asianet Suvarna News

RRR ಯಶಸ್ಸು; 50 ಲಕ್ಷ ರೂಪಾಯಿ ವೋಲ್ವೋ ಕಾರು ಖರೀದಿಸಿದ ಎಸ್.ಎಸ್‌ ರಾಜಮೌಳಿ!

ಐಷಾರಾಮಿ ವೋಲ್ವೋ XC40 SUV ಕಾರು ಖರೀದಿಸಿದ ನಿರ್ದೇಶಕ ರಾಜಮೌಳಿ, ಫೋಟೋ ಹಂಚಿಕೊಂಡ ವೋಲ್ವೋ ಕಾರ್ ಇಂಡಿಯಾ ಕಂಪನಿ. 
 

Director SS Rajamouli brings home volvo xc40 suv car vcs
Author
Bangalore, First Published Apr 24, 2022, 9:59 AM IST

ವಿಶ್ವಾದ್ಯಂತ ಭಾರತೀಯ ಚಿತ್ರರಂಗಕ್ಕೆ ಮೆಚ್ಚುಗೆ ತಂದು ಕೊಟ್ಟ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಬಾಹುಬಲಿ ಮತ್ತು ಆರ್‌ಆರ್‌ಆರ್‌ ಚಿತ್ರಗಳ ಬಗ್ಗೆ ಸಣ್ಣ ಮಾಹಿತಿ ಗೊತ್ತಿದ್ದರೂ ಅದು ಈ ವ್ಯಕ್ತಿಯಿಂದಲೇ. ಕೋಟಿ ಬಜೆಟ್ ಹಾಕಿ ಮಾಡಿರುವ ಸಿನಿಮಾಗಳು ಇದಾಗಿದ್ದು ಹಾಕಿರುವ ಬಂಡವಾಳಕ್ಕಿಂತ ದುಪ್ಪಟ್ಟು ಪಡೆದುಕೊಂಡಿದೆ. ಸ್ಟಾರ್‌ ನಟ,ನಟಿಯರ ಜೊತೆ ಕೆಲಸ ಮಾಡುವ ಡೈರೆಕ್ಟ್‌ ಎಂಬ ಪಟ್ಟವನ್ನು ಸಿನಿ ರಸಿಕರು ಕೊಟ್ಟಿದ್ದಾರೆ. ಹೀಗಾಗಿ ರಾಜಮೌಳಿ ಮಾಡುವ ಪ್ರತಿಯೊಂದು ಚಿತ್ರಗಳಿಗೆ ಚಿತ್ರತಂಡಕ್ಕೂ ಮೊದಲೇ ಅಭಿಮಾನಿಗಳು ಪ್ರಚಾರ ಶುರು ಮಾಡುತ್ತಾರೆ. 

ಯಶಸ್ಸಿನ ಹಾದಿಯಲ್ಲಿ ತೇಲುತ್ತಿರುವ ರಾಜಮೌಳಿ ಇದೀಗ ಹೊಸ ಕಾರು ಖರೀದಿಸಿದ್ದಾರೆ. ಕೆಲವು ದಿನಗಳ ಹಿಂದೆ ಸ್ಟಾರ್ ಡೈರೆಕ್ಟ್  ದಿ ವೋಲ್ವೋ XC40 SUV ಕಾರು ಖರೀದಿಸಿರುವುದಾಗಿ ವೋಲ್ವೋ ಕಂಪನಿಯೇ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ಕಾರಿನ ex-showroom, India ಬೆಲೆ 44.50 ಲಕ್ಷ.  ಎಕ್ಸಟ್ರಾ ಫಿಟ್ಟಿಂಗ್ ಅದು ಇದು ಅಂತ ನೋಡಿದರೆ 50 ಮುಟ್ಟುತೆ ಅಂತ ಗೂಗಲ್ ಲೆಕ್ಕ ಹಾಕಿದೆ. 

ವೋಲ್ವೋ ಪೋಸ್ಟ್:

' ವೋಲ್ವೋ ಕಾರ್ ಇಂಡಿಯಾ ಕುಟುಂಬಕ್ಕೆ ಚಲನಚಿತ್ರ ನಿರ್ದೇಶಕ ಮತ್ತು ಚಿತ್ರಕಥೆಗಾರ ರಾಜಮೌಳಿ ಅವರನ್ನು ನಾವು ನಮ್ರತೆಯಿಂದ ಸ್ವಾಗತಿಸುತ್ತೇವೆ.ಅವರ ದೃಷ್ಟಿಯಂತೆಯೇ ಭವ್ಯವಾದ ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣಗಳನ್ನು ನಾವು ಬಯಸುತ್ತೇವೆ.' 

 

ರಾಜಮೌಳಿ ಖರೀದಿಸಿರುವುದು ಫ್ಯೂಷನ್ ಕೆಂಪು ಬಣ್ಣ ಕಾರು ಆಗಿದ್ದು ಕಪ್ಪು ಬಣ್ಣದ ಬ್ಯಾಕ್‌ರೂಫ್‌ ಉತ್ತಮವಾದ ಕಾಂಟ್ರಾಸ್ಟ್‌ ತರುತ್ತದೆ. ವೋಲ್ವೋ XC40 ಸಿಂಗಲ್ T4 R-ಡಿಸೈನ್ ಪೆಟ್ರೋಲ್ ರೂಪಾಂತರದಲ್ಲಿ ಲಭ್ಯವಿದೆ. SUV ಕಾರು ನೀಡುವ ಸ್ಪೆಷಲ್ ಫೀಚರ್‌ಗಳಿಗೆ ತುಂಬಾನೇ ಫೇಮ್ಸ್‌, ಇದಕ್ಕೆ ಪಿಯಾನೋ ಬ್ಲ್ಯಾಕ್ ಗ್ರಿಲ್, ಥಾರ್‌ ಹ್ಯಾಮರ್ ಹೆಡ್‌ಲ್ಯಾಂಪ್‌ಗಳು ಮತ್ತು ಲಂಬವಾಗಿ ಜೋಡಿಸಲಾದ LED ಟೈಲ್‌ ಲೈಟ್‌ಗಳಿದೆ.

ಈ ಕಾರಿನ ಸೀಟುಗಳಿಗೆ ಮೃದು ಲೆದರ್‌ ಹಾಕಲಾಗಿದೆ, ಕಪ್ಪು ಡ್ಯಾಶ್‌ಬೋರ್ಡ್‌ಗೆ ಅಲ್ಯೂಮಿನಿಯಂ ಸೇರಿಸಲಾಗಿದೆ ಮತ್ತು 12.3 ಇಂಚಿನ ಟಚ್‌ಸ್ಕ್ರೀನ್‌ ಇನ್ಫೋಟೈನ್‌ಮೆಂಟ್‌ ಸಿಸ್ಟಮ್‌ ಹೊಂದಿದೆ. ಜನವರಿ ತಿಂಗಳಲ್ಲಿ ಕಾರು ಬಿಡುಗಡೆಯಾಗಿರುವುದರಿಂದ ಲೇಟೆಸ್ಟ್‌ ಫೀಚರ್‌ಗಳನ್ನು ಹೊಂದಿದೆ. ಹಾರ್ಮನ್‌ ಕಾರ್ಡನ್ 14 ಸ್ವೀಕರ್ 600 ವ್ಯಾಟ್‌ ಸೌಂಡ್‌ ಸಿಸ್ಟಮ್‌, ವಿಹಂಗಮ ಸನ್‌ರೂಫ್‌, ವೈರ್‌ಲೆಸ್‌ ಚಾರ್ಜಿಂಗ್‌, ಡ್ಯುಯಲ್‌ಝೋನ್‌ ಕ್ಲೈಮೇಟ್‌ ಕಂಟ್ರೋಲ್‌ ಸೇರಿಂದ ಅನೇಕ ವಿಶೇಷತೆಗಳಿದೆ.

72 ಲಕ್ಷದ BMW ಕಾರು ಖರೀದಿಸಿದ ಆ್ಯಂಕರ್ ಲಕ್ಷ್ಮೀ ನಕ್ಷತ್ರ!

ಇನ್ನು ಸುರಕ್ಷತೆ ದೃಷ್ಠಿಯಲ್ಲಿ ಈ ಕಾರಿಗೆ 7 ಏರ್‌ಬ್ಯಾಗ್‌ಗಳಿದೆ, ಡಿಸ್ಟೆನ್ಸ್‌ ಅಲರ್ಟ್‌ ಹಾಗೂ ಮುಂದೆ ಮತ್ತು ಹಿಂದೆ ಪಾರ್ಕಿಂಗ್ ಅಸಿಸ್ಟೆಂಟ್ ಹೊಂದಿದೆ. ರೇಡಾರ್ ಆಧಾರಿತ ಸಿಟಿ ಸುರಕ್ಷತೆ ಮತ್ತು ಸ್ಟೀರಿಂಗ್ ಅಸಿಸ್ಟ್‌ನೊಂದಿಗೆ ಡ್ರೈವರ್-ಅಸಿಸ್ಟ್ ಸಿಸ್ಟಮ್‌ಗಳನ್ನು ಪಡೆದಿರುವ ಮೊದಲ ಕಾರು ಇದು, 50 kmphನಲ್ಲಿ ಆಪರೇಟ್‌ ಮಾಡಬಹುದು ಹಾಗೇ ಲೇನ್‌ ಮಿಟಿಗೇಷನ್‌, ಡ್ರೈವರ್ ಅಲರ್ಟ್‌, ರನ್‌ ಆಫ್‌ ರೋಡ್‌ ಪ್ರೋಟೆಕ್ಷನ್ ಮತ್ತು ರೋಲ್‌ ಸ್ಟೆಬಿಲಿಟಿ ಕಂಟ್ರೋಲ್‌ ನೀಡಲಾಗಿದೆ. 

ವೋಲ್ವೋ XC40 ಕಾರು BMW 7 ಸೀರಿಸ್‌ ಗುಂಪಿಗೆ ಸೇರಿಕೊಳ್ಳುತ್ತದೆ, ಲ್ಯಾಂಡ್‌ ರೋವರ್ ರೇಂಜ್ ರೋವರ್ ಕಾರು ಆಗಲೇ ರಾಜಮೌಳಿ ಗ್ಯಾರೇಜ್‌ನಲ್ಲಿದೆ. 

Follow Us:
Download App:
  • android
  • ios