ಮಹಾಕುಂಭ ಮೇಳದಲ್ಲಿ ಸುದ್ದಿಗೆ ಬಂದ ನೀಲಿ ಕಣ್ಣಿನ ಮೋನಾಲಿಸಾ ಈಗ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ. ನಿರ್ದೇಶಕ ಸನೋಜ್ ಮಿಶ್ರಾ ಅವರ ಚಿತ್ರದಲ್ಲಿ ನಟಿಸುತ್ತಿರುವ ಮೋನಾಲಿಸಾ ಮುಂಬೈನಲ್ಲಿ ನಟನಾ ತರಬೇತಿ ಪಡೆಯುತ್ತಿದ್ದಾರೆ. ಅಕ್ಷರಾಭ್ಯಾಸ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಮಿಶ್ರಾ ಅವರ ಕ್ರಮದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರಯಾಗರಾಜ್ (Prayagraj) ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ (Mahakumbh Mela)ದಲ್ಲಿ ರಾತ್ರೋರಾತ್ರಿ ಸುದ್ದಿಗೆ ಬಂದಿದ್ದ ನೀಲಿ ಕಣ್ಣಿನ, ಸುಂದರ ಯುವತಿ ಮೋನಾಲಿಸ (Monalisa) ನಿರಂತರ ಚರ್ಚೆಯಲ್ಲಿದ್ದಾರೆ. ಈಗಾಗಲೇ ಬಾಲಿವುಡ್ ಗೆ ಮೋನಾಲಿಸ ಎಂಟ್ರಿಯಾಗಿದೆ. ಅವರು ನಿರ್ದೇಶಕ ಸನೋಜ್ ಮಿಶ್ರಾ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ. ಮುಂಬೈಗೆ ಹೋಗಿರುವ ಮೋನಾಲಿಸಾ, ಆಕ್ಟಿಂಗ್ ಟ್ರೈನಿಂಗ್ ಪಡೆಯುತ್ತಿದ್ದಾರೆ. ಮೋನಾಲಿಸಾ ಎಲ್ಲಿಗೆ ಹೋದ್ರೂ ಚರ್ಚೆಗೆ ಬರ್ತಾರೆ. ಮೋನಾಲಿಸಾ ಮೊದಲ ಬಾರಿ ಫ್ಲೈಟ್ ಹತ್ತಿದ್ದ ವಿಡಿಯೋ ವೈರಲ್ ಆಗಿತ್ತು, ಈಗ ಮೋನಾಲಿಸಾ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಅದ್ರಲ್ಲಿ ಮೋನಾಲಿಸಾ ನಟನೆ ಕಲಿತಿಲ್ಲ ಬದಲಾಗಿ ಅಕ್ಷರಾಭ್ಯಾಸ ಮಾಡ್ತಿದ್ದಾರೆ. 

ವಿಡಿಯೋದಲ್ಲಿ ಮೋನಾಲಿಸ ಕ, ಖ, ಗ, ಘ... ಕಲಿಯುವುದನ್ನು ಕಾಣ್ಬಹುದು. ನಿರ್ದೇಶಕ ಸನೋಜ್ ಮಿಶ್ರಾ (Director Sanoj Mishra) , ಚಿಕ್ಕ ಮಕ್ಕಳಿಗೆ ಪಾಠ ಹೇಳುವಂತೆ ಮೋನಾಲಿಸಾಗೆ ಅಕ್ಷರ ಕಲಿಸ್ತಿದ್ದಾರೆ. ಎಷ್ಟು ಮಾಡಿದ್ರೂ ಮೋನಾಲಿಸಾಗೆ ಅಕ್ಷರಗಳು ನೆನಪಿನಲ್ಲಿ ಉಳಿತಿಲ್ಲ. ಸ್ಲೇಟ್ ಮೇಲೆ ಅಕ್ಷರಗಳನ್ನು ಬರೆಯಲಾಗಿದೆ. ಒಂದೊಂದೇ ಅಕ್ಷರ ತೋರಿಸುವ ಸನೋಜ್ ಮಿಶ್ರಾ, ಇದ್ಯಾವ ಅಕ್ಷರ, ಇದ್ಯಾವ ಅಕ್ಷರ ಅಂತ ಕೇಳ್ತಿದ್ದಾರೆ ಮೋನಾಲಿಸಾ ಕಷ್ಟಪಟ್ಟು ಅಕ್ಷರಗಳನ್ನು ಗುರುತಿಸುತ್ತಿದ್ದಾರೆ.

ವೈರಲ್ ಗರ್ಲ್ ಮೋನಾಲಿಸಾ ಮೂಗುತಿ: ₹50 ರಲ್ಲಿ ನಿಮ್ಮ ಅಂದ ಹೆಚ್ಚಿಸಿಕೊಳ್ಳಿ!

ಈ ವಿಡಿಯೋ ವೈರಲ್ ಆಗ್ತಿದ್ದಂತೆ ಜನರು ಸಾಕಷ್ಟು ಕಮೆಂಟ್ ಮಾಡಿದ್ದಾರೆ. ಸನೋಜ್ ಮಿಶ್ರಾ ಕೆಲಸವನ್ನು ಅನೇಕರು ಶ್ಲಾಘಿಸಿದ್ದಾರೆ. ಮತ್ತೆ ಕೆಲವರು ಹೀಗೆ ಆದ್ರೆ ಸಿನಿಮಾ ತೆರೆಗೆ ಬರೋಕೆ ಇನ್ನೂ ಹತ್ತು ವರ್ಷ ಆಗ್ಬಹುದು ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ಈಗಾಗ್ಲೇ ಟ್ಯಾಲೆಂಟ್ ಇರೋ ಜನರ ಮೇಲೆ ಸಮಯ ಹಾಕಿದ್ರೆ ಒಳ್ಳೆ ಪ್ರತಿಭೆ ಹೊರಗೆ ಬರ್ತಾ ಇತ್ತು. ತಮ್ಮ ಪ್ರಸಿದ್ಧಿಗಾಗಿ, ಎಲ್ಲರ ಗಮನ ಸೆಳೆಯಲು ಮಿಶ್ರಾ ಈ ಕೆಲಸ ಮಾಡ್ತಿದ್ದಾರೆಂದು ಕಮೆಂಟ್ ಮಾಡಿದ್ದಾರೆ.

ಮೋನಾಲಿಸಾ ಶೀಘ್ರವೇ ದಿ ಡೈರಿ ಆಫ್ ಮಣಿಪುರ (The Diary of Manipur) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಯಾಗರಾಜ್ ನಲ್ಲಿ ಮೋನಾಲಿಸಾ ಪ್ರಸಿದ್ಧಿಗೆ ಬರ್ತಾ ಇದ್ದಂತೆ ಸನೋಜ್ ಮಿಶ್ರಾ, ಬಾಲಿವುಡ್ ಆಫರ್ ನೀಡಿದ್ರು. ಮೋನಾಲಿಸ ಮನೆಗೆ ಬಂದಿದ್ದ ಸನೋಜ್ ಮಿಶ್ರಾ, ಬಾಲಿವುಡ್ ನಲ್ಲಿ ನಟಿಸುವಂತೆ ಕೇಳಿಕೊಂಡಿದ್ದರು. ಇದಕ್ಕೆ ಮೋನಾಲಿಸಾ ಒಪ್ಪಿಗೆ ನೀಡಿದ್ರು. ಮೋನಾಲಿಸಾ ಕಣ್ಣು ಸುಂದರವಾಗಿದೆ, ನ್ಯಾಚ್ಯುರಲ್ ಬ್ಯೂಟಿ ಅವರು ಆದ್ರೆ ನಟನೆ ತಿಳಿದಿಲ್ಲ, ಅವರಿಗೆ ನಟನೆ ತರಬೇತಿ ನೀಡುವ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದರು. ಅದಾದ್ಮೇಲೆ ಮೋನಾಲಿಸಾ, ಮುಂಬೈಗೆ ಪ್ರಯಾಣ ಬೆಳೆಸಿದ್ದರು. ಮಹೇಶ್ವರದ ಹುಡುಗಿ ಮುಂಬೈನಲ್ಲಿ ನಟನಾ ತರಬೇತಿ ಪಡೆಯುತ್ತಿದ್ದು ಅದ್ರ ವಿಡಿಯೋಗಳು ವೈರಲ್ ಆಗ್ತಾನೆ ಇವೆ. ಸುಂದರವಾಗಿ ಮೇಕಪ್ ಮಾಡ್ಕೊಂಡಿದ್ದ ಮೋನಾಲಿಸಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಮುಂಬೈನಲ್ಲಿ ನಟನಾ ತರಬೇತಿ ಆರಂಭಿಸಿದ ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ! ಇಲ್ಲಿದೆ ವಿಡಿಯೋ ಝಲಕ್

ಮಣಿ ಮಾರಾಟ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದ್ದ ಮೋನಾಲಿಸಾ ಲಕ್ ಬದಲಾಗಿದೆ. ಎಷ್ಟು ಕಷ್ಟಪಟ್ರೂ ಬಾಲಿವುಡ್ ಗೆ ಎಂಟ್ರಿಯಾಗೋದು ಕಷ್ಟ ಎನ್ನುವ ಕಾಲದಲ್ಲಿ ಮೋನಾಲಿಸಾಗೆ ಆಕ್ಟಿಂಗ್ ಕಲಿಸಿ, ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಲಾಗ್ತಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಮೊನಾಲಿಸಾ, ಆಕ್ಟಿಂಗ್ ಕಲಿಯುತ್ತಿದ್ದಾರೆ. ಜಾಹಿರಾತಿನಲ್ಲಿ ಆಫರ್ ಬಂದ್ರೂ ನಟನೆ ತರಬೇತಿಗೆ ಆದ್ಯತೆ ನೀಡ್ತಿರುವ ಕಾರಣ, ಜಾಹಿರಾತನ್ನು ಒಪ್ಪಿಕೊಳ್ತಿಲ್ಲ ಎನ್ನಲಾಗಿದೆ.