ಭಾರತದ ತಾರಾ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಕೊರೋನಾ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಇನ್ನು ಥಾಮಸ್‌-ಊಬರ್‌ ಕಪ್‌ ಟೂರ್ನಿಯಿಂದ ತಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ನವದೆಹಲಿ(ಸೆ.03): ಕೊರೋನಾ ಸೋಂಕಿಗೆ ತುತ್ತಾಗಿದ್ದ ಭಾರತದ ತಾರಾ ಮಹಿಳಾ ಕುಸ್ತಿಪಟು ವಿನೇಶ್‌ ಪೋಗಾಟ್‌ ಚೇತರಿಸಿಕೊಂಡಿದ್ದಾರೆ. ವಿನೇಶ್‌ ಅವರ 2 ಕೊರೋನಾ ಪರೀಕ್ಷೆ ನೆಗೆಟಿವ್‌ ಬಂದಿದೆ. 

ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ವಿನೇಶ್‌ ಐಸೋಲೇಶನ್‌ನಲ್ಲಿ ಮುಂದುವರಿಯಲಿದ್ದಾರೆ. ಕೊರೋನಾ ಸೋಂಕು ತಗುಲಿದ ಕಾರಣದಿಂದ ವಿನೇಶ್‌ ಆ.29ರಂದು ನಡೆದಿದ್ದ ವರ್ಚುವಲ್‌ ರಾಷ್ಟ್ರೀಯ ಪ್ರಶಸ್ತಿ ಸಮಾರಂಭದಲ್ಲಿ ಖೇಲ್‌ ರತ್ನ ಸ್ವೀಕರಿಸಿರಲಿಲ್ಲ.

Scroll to load tweet…

ಮಂಗಳವಾರ ನಡೆದ 2ನೇ ಕೊರೋನಾ ಪರೀಕ್ಷೆ ವರದಿ ಕೂಡ ನೆಗೆಟಿವ್‌ ಬಂದಿರುವುದು ಸಂತಸ ತಂದಿದೆ ಎಂದು ವಿನೇಶ್‌ ಟ್ವೀಟ್‌ ಮಾಡಿದ್ದಾರೆ. ವಿನೇಶ್‌, ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿರುವ ಭಾರತದ ಏಕೈಕ ಮಹಿಳಾ ಕುಸ್ತಿಪಟು ಆಗಿದ್ದಾರೆ.

ಥಾಮಸ್‌-ಊಬರ್‌ ಕಪ್‌ ಟೂರ್ನಿಗೆ ಸಿಂಧು ಇಲ್ಲ

ನವದೆಹಲಿ: ಅಕ್ಟೋಬರ್‌ 3 ರಿಂದ 11ರವರೆಗೆ ಡೆನ್ಮಾರ್ಕ್ನಲ್ಲಿ ನಡೆಯಲಿರುವ ಥಾಮಸ್‌-ಊಬರ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್‌ ಪಿ.ವಿ. ಸಿಂಧು ವೈಯಕ್ತಿಕ ಕಾರಣಗಳಿಂದಾಗಿ ಪಾಲ್ಗೊಳ್ಳುತ್ತಿಲ್ಲ. 

ಯುಎಸ್‌ ಓಪನ್‌: 2ನೇ ಸುತ್ತಿಗೆ ಲಗೆಯಿಟ್ಟ ಭಾರತದ ಸುಮಿತ್‌

ಅಕ್ಟೋಬರ್‌ ಮೊದಲ ವಾರದಲ್ಲಿ ಹೈದರಾಬಾದ್‌ನಲ್ಲಿ ಸಿಂಧುಗೆ ವೈಯಕ್ತಿಕ ಕೆಲಸಗಳಿವೆ. ಹೀಗಾಗಿ ಈ ಟೂರ್ನಿಯಿಂದ ಸಿಂಧು ಹಿಂದೆ ಸರಿಯಲಿದ್ದಾರೆ ಎಂದು ಸಿಂಧು ಅವರ ತಂದೆ ಪಿ.ವಿ. ರಮಣ ಹೇಳಿದ್ದಾರೆ. ದೇವರ ಪೂಜಾ ಕಾರ‍್ಯ ಇದಾಗಿದ್ದು, ಕುಟಂಬದ ಎಲ್ಲಾ ಸದಸ್ಯರು ಉಪಸ್ಥಿತರಿರಬೇಕಿದೆ. ಈ ಕಾರಣದಿಂದಾಗಿ ಸಿಂಧು ಈ ಟೂರ್ನಿಯಲ್ಲಿ ಆಡುವುದಿಲ್ಲ ಎಂದಿದ್ದಾರೆ.