ನಿನ್ನೆ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್‌ ಅವರ ಮುದ್ದಿನ ಮಗಳು ಆರಾಧ್ಯ ಬರ್ತ್‌ಡೇ. ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯ ರೈ ಇಬ್ಬರೂ ತಮ್ಮ ಮುದ್ದಿನ ಮಗಳ ಫೋಟೋಗಳನ್ನು ಇನ್‌ಸ್ಟಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡರು. ಅಮಿತಾಭ್ ಬಚ್ಚನ್ ಕೂಡ ತಮ್ಮ ಮುದ್ದಿನ ಮೊಮ್ಮಗಳಿಗೆ ಮುಂಜಾನೆಯೇ ಬರತ್‌ಡೇ ವಿಶ್ ಮಾಡಿದರು. ಜಯಾ ಬಚ್ಚನ್ ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ಇಲ್ಲ. ಹೀಗಾಗಿ ಅವರು ಫೋಟೋ ಕಾಣಲಿಲ್ಲ. ಅಭಿಷೇಕ್ ಮತ್ತು ಐಶ್ವರ್ಯ ರೂ ಮಗಳ ಜೊತೆಗಿರುವ ಫೋಟೋ ಹಾಕಿಕೊಂಡರು.

ದೀಪಾವಳಿಯನ್ನು ಬಚ್ಚನ್ ಕುಟುಂಬ ಪ್ರತಿವರ್ಷವೂ ಗ್ರಾಂಡ್ ಆಗಿ ಸೆಲೆಬ್ರೇಟ್ ಮಾಡುತ್ತದೆ. ಆದರೆ ಈ ಬಾರಿ ಶ್ವೇತಾ ನಂದಾ ಅವರ ಅತ್ತೆ ತೀರಿಕೊಂಡುದರಿಂದ ದೀಪಾವಳಿ ಗ್ರಾಂಡ್ ಸೆಲೆಬ್ರೇಷನ್ ಇರಲಿಲ್ಲ. ಆದರ ಅಕ್ಟೋಬರ್- ನವೆಂಬರ್ ಬಂತೆಂದರೆ ಬಚ್ಚನ್ ಕುಟುಂಬದಲ್ಲಿ ಹುಟ್ಟುಹಬ್ಬಗಳ ಸರಮಾಲೆ. ನವೆಂಬರ್ 16ರಂದು ಆರಾಧ್ಯ, ನವೆಂಬರ್ 1ರಂದು ಸ್ವತಃ ಐಶ್ವರ್ಯ ರೈ. ಅಕ್ಟೋಬರ್‌ 11ರಂದು ಬಿಗ್‌ ಬಿ ಬರ್ತ್‌ಡೇ. ಆದರೆ ಈ ಸಲ ಬಿಗ್‌ ಬಿ ಕೋವಿಡ್‌ ಹಿನ್ನೆಲೆಯಲ್ಲಿ ಗ್ರಾಂಡ್‌ ಬರ್ತ್‌ಡೇ ಮಾಡಿಕೊಳ್ಳಲಿಲ್ಲ ಮಾತ್ರವಲ್ಲ, ಮನೆಯ ಹತ್ತಿರವೂ ಬರಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡರು.

ಮಗಳಿಗೊಂದು ಪ್ರೀತಿಯ ಪತ್ರ..! ಪುತ್ರಿಗೆ ಭುವನ ಸುಂದರಿಯ ಬರ್ತ್‌ಡೇ ವಿಶ್ ಇದು ...

ವಿಶೇಷ ಅಂದರೆ, ಬಚ್ಚನ್ ಕುಟುಂಬದಲ್ಲಿ ಹಲವಾರು ಸೀಕ್ರೆಟ್‌ಗಳಿವೆ. ಅವುಗಳಲ್ಲಿ ಬಾಲಿವುಡ್‌ ಪ್ರಿಯರಿಗೆ ಹಲವು ಗೊತ್ತಿವೆ, ಹಲವು ಗೊತ್ತಿಲ್ಲ. ಉದಾಹರಣೆಗೆ, ಅಭಿಷೆಕ್‌ ಬಚ್ಚನ್‌ಗೆ ಮದುವೆ ಮಾಡಿಸಲು ಜಯಾ ಬಚ್ಚನ್ ಹೊರಟಾಗ ಅವರ ಪ್ರಥಮ ಆದ್ಯತೆಯಾಗಿ ಇದ್ದದ್ದು ಯಾರು ಗೊತ್ತಾ? ಅದು ಐಶ್ವರ್ಯ ರೂ ಅಲ್ಲ! ಮತ್ಯಾರು ಹಾಗಿದ್ದರೆ? ಅದು ರಾಣಿ ಮುಖರ್ಜಿ! ಜಯಾ ಬಚ್ಚನ್‌ಗೆ ರಾಣಿ ಮುಖರ್ಜಿ ಅಂದರೆ ಪ್ರಿಯವಾಗಿದ್ದರಂತೆ. ಜೊತೆಗೆ ಐಶ್ವರ್ಯ ರೈ ಅಂದರೆ ಸ್ವಲ್ಪ ಹೊಟ್ಟೆಕಿಚ್ಚೂ ಇತ್ತುಂತೆ. ಯಾಕೆಂದರೆ, ಈಕೆ ತನ್ನ ಮಗನಿಗಿಂತ ಹೆಚ್ಚು ಜನಪ್ರಿಯಳಾಗಿದ್ದಾಳಲ್ಲಾ ಅಂತ. ಮುಂದೆ ಈಕೆಯಿಂದ ತನ್ನ ಮಗನ ಕೆರಿಯರ್‌ಗೇ ಏನಾದರೂ ಕುತ್ತು ಒದಗಬಹುದು ಎಂಬ ಭಯ. ಆದರೇನು, ಮದುವೆಯ ಬಳಿಕ ಇಬ್ಬರೂ ತಮ್ಮ ಕೆರಿಯರ್‌ನಲ್ಲಿ ಹೆಚ್ಚು ಮೇಲೆ ಏರಿಯೇ ಇಲ್ಲ. ಇಬ್ಬರೂ ಸಿನಿಮಾದಲ್ಲಿ ನಟಿಸುವುದನ್ನು ಬಹುತೇಕ ನಿಲ್ಲಿಸಿಯೇ ಬಿಟ್ಟಿದ್ದಾರೆ. ವರ್ಷಕ್ಕೆ ಒಂದು ಫಿಲಂನಲ್ಲಿ ನಟಿಸಿದರೆ ಹೆಚ್ಚು.

ಐಶ್ವರ್ಯಾಗಾಗಿ ಕರ್ವಾ ಚೌತ್ ಉಪವಾಸ: ಮುಖ್ಯವಾದುದ್ದನ್ನೇ ಮರೆತ ಅಭಿಷೇಕ್! ...

ಬಚ್ಚನ್ ಫ್ಯಾಮಿಲಿಯ ಇನ್ನೊಬ್ಬ ಕ್ಯೂಟ್ ಗ್ರಾಂಡ್‌ಡಾಟರ್ ನವ್ಯಾ ನವೇಲಿ ನಂದಾಳ ಲವ್‌ ಅಫೇರ್‌ಗಳು ಈಗ ಫ್ಯಾಮಿಲಿಗೆ ತಲೆನೋವಾಗಿವೆ. ಈಕೆ ಬಚ್ಚನ್ ಅವರ ಮಗಳು, ಅಭಿಷೇಕ್‌ ಸಹೋದರಿ ಶ್ವೇತಾ ನಂದಾ ಮತ್ತು ಆಕೆಯ ಗಂಡ ನಿಖಿಲ್ ನಂದಾ ಅವರ ಮಗಳು. ನಿಗಿನಿಗಿ ತಾರುಣ್ಯದ ಈಕೆ ಬಾಲಿವುಡ್ ಪಾರ್ಟಿಗಳಲ್ಲಿ ಸದಾ ಇರುವ ಜೀವಿ. ಈಕೆ ಮೊದಲ ಶಾರುಕ್‌ ಖಾನ್‌ನ ಮಗ ಆರ್ಯನ್ ಜೊತೆಗೆ ಡೇಟಿಂಗ್ ಮಾಡಿದಳು. ಇದು ಸಾಂಪ್ರದಾಯಿಕ ಮನಸ್ಥಿತಿಯ ಬಚ್ಚನ್‌ ಫ್ಯಾಮಿಲಿಯಲ್ಲಿ ಯಾರಿಗೂ ಸರಿಹೋಗಲಿಲ್ಲ. ನಂತರ ಏನಾಯಿತೋ, ಆತನನ್ನು ಬಿಟ್ಟಳು.

ಬಚ್ಚನ್ ಸೊಸೆ ಮದ್ವೆ ಸೀರೆಯೂ ಬಂಗಾರದ್ದೇ: ಐಶ್ ವೆಡ್ಡಿಂಗ್ ಸಾರಿ ಬೆಲೆ ಕೇಳಿದ್ರಾ ...

ಆ ಸಂದರ್ಭದಲ್ಲಿ ಈಕೆಯನ್ನು ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ಅಟ್ಟಲಾಯಿತು. ಅಲ್ಲಿ ಈಕೆ ಜಾವೇದ್‌ ಜಾಫ್ರಿಯ ಮಗ ಮೀಜಾನ್‌ ಜಾಫ್ರಿಯ ಹಿಂದೆ ಸುತ್ತತೊಡಗಿದಳು. ಈಗ ಅದೂ ಬದಲಾಗಿದೆ. ಅಂತೂ ಆಕೆ ಓದುವುದು ಬಿಟ್ಟು ಮತ್ತೆಲ್ಲಾ ಮಾಡುತ್ತಿದ್ದಾಳೆ ಎಂಬುದು ತಂದೆ ತಾಯಿಯರ ಅಳಲು. ಲಂಡನ್‌ನಲ್ಲೂ ಈಕೆ ಪಾರ್ಟಿಗಳನ್ನು ಸುತ್ತುವುದು ಬಿಟ್ಟಿಲ್ಲ. ಕುಬೇರರ ಮಕ್ಕಳಲು, ಜೀವನಕ್ಕೆ ಒಂದು ಗುರಿ- ಉದ್ದೇಶ ಇಲ್ಲದೆ ಹೋದರೆ ಏನಾಗುತ್ತಾರ ಎಂಬುದಕ್ಕೆ ಇದೇ ಸಾಕ್ಷಿ. ಸದ್ಯ ಈಕೆಯನ್ನು ದಡ ಹತ್ತಿಸುವುದು ಹೇಗೆ ಎಂಬುದು ಬಚ್ಚನ್‌ ಫ್ಯಾಮಿಲಿ ಮತ್ತು ನಂದಾ ಫ್ಯಾಮಿಲಿಯ ಮಂಡೆಬಿಸಿ. ಇರಲಿ, ಪ್ರತಿಯೊಂದು ಫ್ಯಾಮಿಲಿಗೂ ಅವರದೇ ತಲೆಬಿಸಿ ಇರುತ್ತದಲ್ಲವೇ. ಸಣ್ಣವರಿಗೆ ಸಣ್ಣ ತಲೆನೋವು, ದೊಡ್ಡವರಿಗೆ ಸಣ್ಣ ತಲೆನೋವು ಕೂಡ ದೊಡ್ಡದೇ!