ಶೂಟಿಂಗ್ ಮುಗಿಸಿ ಮಗಳು ಆರಾಧ್ಯಾ ಜೊತೆ ಮುಂಬೈಗೆ ಮರಳಿದ ಐಶ್ವರ್ಯಾ!
ಬಾಲಿವುಡ್ ದಿವಾ ಐಶ್ವರ್ಯಾ ರೈ ತಮ್ಮ ಮುಂದಿನ ತಮಿಳು ಸಿನಿಮಾದ ಶೂಟಿಂಗ್‌ಗಾಗಿ ಜನವರಿಯಲ್ಲಿ ಹೈದರಾಬಾದ್‌ಗೆ ತೆರೆಳಿದ್ದರು. 45 ದಿನಗಳು ಮನೆಯಿಂದ ದೂರವಿದ್ದ ಬಚ್ಚನ್ ಸೊಸೆ, ಮುಂಬೈಗೆ ಮರಳಿದ್ದಾರೆ. ಏರ್‌ಪೋರ್ಟ್‌ನಲ್ಲಿ ಮಗಳು ಆರಾಧ್ಯಾ ಹಾಗೂ ಪತಿ ಅಭಿಷೇಕ್ ಬಚ್ಚನ್ ಜೊತೆ ಕಾಣಸಿಕೊಂಡರು ಐಶ್. ಇವರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಣಿರತ್ನಂ ಅವರ ಪೊನ್ನಿಯಿನ್ ಸೆಲವನ್ ಸಿನಿಮಾದ ಶೂಟಿಂಗ್‌ಗಾಗಿ ಹೈದರಾಬಾದ್‌ಗೆ ತೆರೆಳಿದ್ದರು ಐಶ್ವರ್ಯಾ ರೈ. ಕೆಲವು ದಿನಗಳ ಹಿಂದೆ ಸಿನಿಮಾ ಸೆಟ್‌ನಲ್ಲಿರುವ ನಟಿ ಫೋಟೋಗಳು ಸಹ ವೈರಲ್ ಆಗಿದ್ದವು.
ಈ ಸಮಯದಲ್ಲಿ ವೈಟ್ ಕುರ್ತಾ ಹಾಗೂ ಜೀನ್ಸ್ ಜೊತೆ ಲಾಂಗ್ ಓವರ್ ಕೋಟ್‌ನಲ್ಲಿ ಕಾಣಿಸಿಕೊಂಡರು ಬಾಲಿವುಡ್ ನಟಿ ಐಶ್ವರ್ಯಾ ರೈ.
ಇಡೀ ಬಚ್ಚನ್ ಫ್ಯಾಮಿಲಿ ಮಾಸ್ಕ್ ಧರಿಸಿದ್ದತ್ತು ಹಾಗೂ ಐಶ್ವರ್ಯಾ ಮಗಳು ಆರಾಧ್ಯ ಕೈ ಹಿಡಿದಿದ್ದರು.
ಸುಮಾರು 11 ತಿಂಗಳ ನಂತರ ಶೂಟಿಂಗ್‌ನಲ್ಲಿ ಭಾಗವಹಿಸಿದ ನಟಿ 45 ದಿನಗಳ ನಂತರ ಹೈದರಾಬಾದ್‌ನಿಂದ ಮುಂಬೈಗೆ ಮರಳಿದ್ದಾರೆ.
ಮಣಿರತ್ನಂ ಅವರ ಸಿನಿಮಾವನ್ನು ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಿಸಲಾಗುದ್ದು ವಿಕ್ರಮ್, ಕೀರ್ತಿ, ತ್ರಿಶಾ, ಅಮಿತಾಭ್ ಬಚ್ಚನ್, ಜಯರಾಮ್ ರವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಪ್ರಸ್ತುತ ರೈ ಯಾವುದೇ ಬಾಲಿವುಟ್ ಪ್ರಾಜೆಕ್ಟ್ ಹೊಂದಿಲ್ಲ. ಕಡೆ ಬಾರಿ ಇವರು ಅನಿಲ್ ಕಪೂರ್ ಹಾಗೂ ರಾಜ್‌ಕುಮಾರ್ ರಾವ್ ಜೊತೆ ಫನ್ನಿ ಕಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ಕೆಲವು ದಿನಗಳ ಹಿಂದೆ ನಿರ್ದೇಶಕ ಅನುರಾಗ್ ಕಶ್ಯಪ್ ಅಭಿಷೇಕ್ ಮತ್ತು ಐಶ್ವರ್ಯಾ ರೈ ಜೊತೆ ಗುಲಾಬ್ ಜಮುನ್ ಚಿತ್ರ ಮಾಡಲಿದ್ದಾರೆ ಎಂಬ ಸುದ್ದಿ ಬಂದಿತು.
'ಈ ಪ್ರಾಜೆಕ್ಟ್ ಏನಾಗಿದೆ ಎಂದು ನನಗೆ ಗೊತ್ತಿಲ್ಲ. ಮನ್‌ಮರ್ಜಿಯಾನ್‌ನಲ್ಲಿ ಕೆಲಸ ಮಾಡುವಾಗ ಅನುರಾಗ್ ಜೊತೆ ನಾನು ಉತ್ತಮ ಸಮಯ ಕಳೆದಿದ್ದೆ. ಆ ಚಿತ್ರದ ಬಗ್ಗೆ ನನಗೆ ಹೆಮ್ಮೆ ಇದೆ.ಅವರೊಂದಿಗೆ ಮತ್ತೆ ಕೆಲಸ ಮಾಡಲು ನಾನು ಕಾತುರಳಾಗಿದ್ದೇನೆ,' ಎಂದು ಇತ್ತೀಚೆಗೆ ಅಭಿಷೇಕ್ ಜಮುನ್ ಸಿನಿಮಾದ ಬಗ್ಗೆ ಹೇಳಿದ್ದರು ಐಶ್.