Asianet Suvarna News Asianet Suvarna News

ಮದ್ವೆ ಯಾರಿಗೆ ಬೇಕು ಎಂದ ಈ ಬಾಲಿವುಡ್​ ಜೋಡಿಯ ಹೊಸ ವರ್ಷದ ರೆಸಲ್ಯೂಷನ್​ ನೋಡಿ!

ಕೆಲ ವರ್ಷಗಳಿಂದ ಜೊತೆಯಾಗಿಯೇ ಇದ್ದು, ಮದುವೆಯ ಸುಳಿವು ನೀಡಿದ್ದ ಬಾಲಿವುಡ್​ ಜೋಡಿ ಆಧಾರ್​ ಜೈನ್​ ಹಾಗೂ ತಾರಾ ಸುತಾರಿಯಾ ಈಗ ಹೇಳುತ್ತಿರುವುದೇ ಬೇರೆ!
 

Did Tara Sutaria Aadar Jain break up amid wedding rumours? Here's what we know
Author
First Published Jan 4, 2023, 1:21 PM IST

ಹೊಸ ವರ್ಷ ಕಾಲಿಡುತ್ತಿದ್ದಂತೆಯೇ ಹೆಚ್ಚಿನವರು ಒಂದೊಂದು ರೀತಿಯ ರೆಸಲ್ಯೂಷನ್​ ಮಾಡುವುದು ಸಾಮಾನ್ಯ. ಚಿತ್ರನಟ, ನಟಿಯರೂ ಇದಕ್ಕೆ ಹೊರತಾಗಿಲ್ಲ. ಆದರೆ ಇಲ್ಲೊಂದು ಬಾಲಿವುಡ್ ಜೋಡಿ ಮಾಡಿರುವ ರೆಸಲ್ಯೂಷನ್​ ಮಾತ್ರ ಭಾರಿ ಸುದ್ದಿಯಾಗಿದೆ. ಅದೇನೆಂದರೆ ಮದ್ವೆ ಯಾರಿಗೆ ಬೇಕು? ಎನ್ನೋದು. ಇಂಥದ್ದೊಂದು ರೆಸಲ್ಯೂಷನ್​ ತಗೊಂಡಿರೋರು ಎಂದ್ರೆ ಬಾಲಿವುಡ್​ನ ಜೋಡಿ ತಾರಾ ಸುತಾರಿಯಾ (Tara Sutaria) ಹಾಗೂ ಆಧಾರ್‌ ಜೈನ್‌. ಕೆಲ ತಿಂಗಳುಗಳಿಂದ ಒಟ್ಟಿಗೇ ಇದ್ದ ಈ ಕ್ಯೂಟ್​ ಜೋಡಿ, ಈಗ ಮದುವೆ ವಿಷಯದಲ್ಲಿ ಬ್ರೇಕಪ್​ ಮಾಡಿಕೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮತ್ತೊಂದು ತಾರಾ ಜೋಡಿಯನ್ನು ಮದುವೆ ಬಂಧನದಲ್ಲಿ ನೋಡಲು ಇಚ್ಛಿಸಿದ್ದ ಸಿನಿ ಪ್ರಿಯರಿಗೆ ಭಾರಿ ಆಘಾತವಾಗಿದೆ. 

ಈ ಹಿಂದೆ ಒಟ್ಟಿಗೇ ಇರುವ ಫೋಟೋ ಶೇರ್​ ಮಾಡಿಕೊಂಡು ಮದುವೆಯಾಗುವ ಹಿಂಟ್​ ನೀಡಿದ್ದ ತಾರಾ ಸುತಾರಿಯಾ ಹಾಗೂ ಆಧಾರ್‌ ಜೈನ್‌ (Adhaar Jain) ಈಗ ಮದ್ವೆ ಉಸಾಬರಿ ಬೇಡ ಎನ್ನುತ್ತಿದ್ದಾರೆ ಎಂದು ಗುಸುಗುಸು ಸುದ್ದಿಯಾಗಿದೆ. ಮದ್ವೆ ಯಾರಿಗೆ ಬೇಕು ಎಂದಿರುವ ಇವರು  ಹೀಗೆಯೇ ಫ್ರೆಂಡ್ಸ್​ ಆಗಿ ಮುಂದುವರೆಯಲು ನಿರ್ಧರಿಸಿದ್ದಾರಂತೆ. 

AadarJain-Tara Sutaria: ತಾರಾ ಸುತಾರಿಯಾ ಜೊತೆ ಆಧಾರ್‌ ಜೈನ್‌: 'ಸಾಸ್ತಾ ರಣಬೀರ್ ಕಪೂರ್' ಎಂದ ನೆಟ್ಟಿಗರು!

ಎಲ್ಲರ ಗಮನ ಸೆಳೆದಿದ್ದು ತಾರಾ ಅವರ ಹುಟ್ಟುಹಬ್ಬ ಪಾರ್ಟಿ (Birthday Party) ಸಂದರ್ಭದಲ್ಲಿ. ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಜೋಡಿ ಫೋಟೋ ಹಾಕಿಕೊಂಡು ತಮ್ಮ ಸಂಬಂಧ ಜನ್ಮಜನ್ಮದ ಅನುಬಂಧ ಎಂದಿದ್ದರು. 'ಆಧಾರ್ ಎಂದರೆ ನನಗೆ ಪಂಚಪ್ರಾಣ. ನನ್ನ ಜೀವನದಲ್ಲಿ ಆತನ ಪಾತ್ರ ಬಹು ಅಮೂಲ್ಯವಾದದ್ದು. ನಾವಿಬ್ಬರೂ ತುಂಬಾ ಒಳ್ಳೆಯ ಸ್ನೇಹಿತರು. ಇಬ್ಬರೂ ಒಟ್ಟಿಗೇ ಸುತ್ತಾಡಲು ಹೋಗುತ್ತೇವೆ. ಜೊತೆಯಾಗಿಯೇ ಊಟ ಸವಿಯುತ್ತೇವೆ. ಜೊತೆಯಾಗಿ ಎಲ್ಲವನ್ನೂ ಆನಂದಿಸುತ್ತೇವೆ. ಮ್ಯೂಸಿಕ್​ ಸೇರಿದಂತೆ ಹಲವು ವಿಷಯಗಳಲ್ಲಿ ನಮ್ಮ ಅಭಿರುಚಿ ಒಂದೇ ತೆರನಾಗಿದೆ. ನಾವು ಒಬ್ಬರಿಗೊಬ್ಬರು ತುಂಬಾ ಇಷ್ಟಪಡುತ್ತೇವೆ',  ಎಂದೂ ತಾರಾ ಹೇಳಿಕೊಂಡು ಮದುವೆಯಾಗುವ ಕುರಿತು ಪರೋಕ್ಷವಾಗಿ ನುಡಿದಿದ್ದರು. 

ನಾಲ್ಕು ವರ್ಷಗಳ ಸಂಬಂಧ: 
ಅಷ್ಟಕ್ಕೂ ಇವರ ಸ್ನೇಹ ಸಂಬಂಧ ಇಂದು ನಿನ್ನೆಯದ್ದಲ್ಲ. ಇವರಿಬ್ಬರೂ ಮೊದಲಿಗೆ ಭೇಟಿಯಾದದ್ದು 2018ರಲ್ಲಿ.   ಅಂದು ನಿರ್ದೇಶಕ ಕರಣ್‌ ಜೋಹರ್‌ (Karan Johar) ಅವರು ಏರ್ಪಡಿಸಿದ್ದ  ಪಾರ್ಟಿಯಲ್ಲಿ ಈ ಜೋಡಿ ಮೊದಲಿಗೆ ಭೇಟಿಯಾಗಿತ್ತು.  ಲವ್​ ಆ್ಯಟ್​ ಫಸ್ಟ್​ ಸೈಟ್​ ಎಂಬಂತೆ ಇಬ್ಬರೂ ಪ್ರೀತಿಗೆ ಬಿದ್ದಿದ್ದರು. ಆದರೆ ಬಹಿರಂಗವಾಗಿ ಇವರಿಬ್ಬರ ರಿಲೇಷನ್​  ಬಗ್ಗೆ ತಿಳಿದದ್ದು 2019ರಲ್ಲಿ ನಟ ಅಮಿತಾಭ್ ಬಚ್ಚನ್ ಅವರು ಆಯೋಜಿಸಿದ್ದ ದೀಪಾವಳಿಯ ಕಾರ್ಯಕ್ರಮದಲ್ಲಿ. ಇಬ್ಬರೂ ಒಟ್ಟಿಗೇ ಈ ಸೆಲೆಬ್ರೇಷನ್​ನಲ್ಲಿ ಪಾಲ್ಗೊಂಡಿದ್ದರು. ಕೈ ಕೈ ಹಿಡಿದು, ಒಟ್ಟಿಗೇ ಫೋಟೋಗೆ ಪೋಸ್​ ಕೊಟ್ಟಾಗಲೇ ಇವರ ರಿಲೇಷನ್​ಷಿಪ್​ (Relationship)ಜಗಜ್ಜಾಹೀರವಾಗಿತ್ತು. ಅದಾದ ಬಳಿಕ ಸಾಕಷ್ಟು ಸಲ ಜೊತೆಯಾಗಿ ಕಾಣಿಸಿಕೊಂಡು ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಶೇರ್​ ಮಾಡಿಕೊಂಡಿದ್ದರು.

ಕಡಲ ತೀರದಲ್ಲಿ ಎದೆ ತೋರಿಸಿ ಫೋಟೋ ಶೂಟ್ ಮಾಡಿಸಿಕೊಂಡ ತಾರಾ

ಇವರಿಬ್ಬರು ಹೋದಲ್ಲೆಲ್ಲಾ ಸಂಬಂಧದ ಬಗ್ಗೆ ಪ್ರಶ್ನೆಗಳ ಸುರಿಮಳೆಯಾಗುತ್ತಿದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ತಮ್ಮ ರಿಲೇಷನ್​ಷಿಪ್​ ಬಗ್ಗೆ ಅಧಿಕೃತವಾಗಿ ಘೋಷಿಸಿಕೊಂಡು ಎಲ್ಲರ ಬಾಯಿ ಮುಚ್ಚಿಸಿದ್ದರು. ಇಬ್ಬರೂ ಮದುವೆಯಾಗುತ್ತಿದ್ದೇವೆ ಎಂದು ಪರೋಕ್ಷವಾಗಿಯೂ ಹಿಂಟ್​ ಕೊಟ್ಟಿದ್ದರಿಂದ ಇವರಿಬ್ಬರು ಹಸೆಮಣೆ ಯಾವಾಗ ಏರುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಈಗ ಈ ರೀತಿಯಾಗಿ ಶಾಕ್​ ಕೊಟ್ಟಿದ್ದಾರೆ.

 2019 ರಲ್ಲಿ, 'ಸ್ಟೂಡೆಂಟ್ ಆಫ್ ದಿ ಇಯರ್ 2' ಚಿತ್ರದ ಮೂಲಕ ತಾರಾ ಬಾಲಿವುಡ್‌ಗೆ ಎಂಟ್ರಿ ಕೊಟ್ಟರೆ,  2017 ರಲ್ಲಿ 'ಕೈದಿ ಬ್ಯಾಂಡ್‌'ನೊಂದಿಗೆ ಚಿತ್ರರಂಗಕ್ಕೆ ಬಂದವರು ಆಧಾರ್​. ಆಧಾರ್​ ಕೊನೆಯದಾಗಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ಹಲೋ ಚಾರ್ಲಿಯಲ್ಲಿ ಜಾಕಿ ಶ್ರಾಫ್, ಶ್ಲೋಕಾ ಪಂಡಿತ್ ಮತ್ತು ಎಲ್ನಾಜ್ ನೊರೌಜಿ ಅವರೊಂದಿಗೆ ಕಾಣಿಸಿಕೊಂಡರೆ, ತಾರಾ ಕೊನೆಯದಾಗಿ ಅವರು ಆಕ್ಷನ್ ಥ್ರಿಲ್ಲರ್ ಚಿತ್ರ 'ಏಕ್ ವಿಲನ್ ರಿಟರ್ನ್ಸ್‌'ನಲ್ಲಿ ಕಾಣಿಸಿಕೊಂಡಿದ್ದಾರೆ. 

Follow Us:
Download App:
  • android
  • ios