ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ಪಾಕಿಸ್ತಾನ ಖಂಡಿಸಿದೆ. ಇದೇ ವೇಳೆ ಇರಾನ್ ಜೊತೆಗಿದೆ ಎಂದಿದೆ. ಆದರೆ ಪಾಕ್ ಪ್ರಧಾನಿ ದಾಳಿ ಖಂಡಿಸುವ ವೇಳೆ ಅಚಾತುರ್ಯದಲ್ಲಿ ಕಾಂಡೋಮ್ ಪದ ಬಳಸಿದ್ರಾ? ಸೋಶಿಯಲ್ ಮೀಡಿಯಾದಲ್ಲಿ ಇದೀಗ ಶೆಹಬಾಜ್ ಷರೀಫ್ ಫುಲ್ ಟ್ರೋಲ್ ಆಗಿದ್ದಾರೆ. 

ಇಸ್ಲಾಮಾಬಾದ್(ಜೂ.15) ಇರಾನ್ ಅಣುಬಾಂಬ್ ಸ್ಥಾವರ ಮೇಲೆ ಇಸ್ರೇಲ್ ನಡೆಸಿದ ಏಕಾಏಕಿ ದಾಳಿಗೆ ಜಗತ್ತೆ ಬೆಚ್ಚಿ ಬಿದ್ದಿದೆ. ಇಸ್ರೇಲ್ ದಾಳಿಯಲ್ಲಿ ಹಲವು ಇರಾನಿ ಪ್ರಜೆಗಳು ಮೃತಪಟ್ಟಿದ್ದಾರೆ. ಈ ದಾಳಿಯನ್ನು ಹಲವು ರಾಷ್ಟ್ರಗಳು ಖಂಡಿಸಿದೆ. ಇದೇ ವೇಳೆ ಇರಾನ್ ಆಪ್ತ ಪಾಕಿಸ್ತಾನ ಕೂಡ ಇಸ್ರೇಲ್ ದಾಳಿಯನ್ನು ಖಂಡಿಸಿದೆ. ಇಷ್ಟೇ ಅಲ್ಲ ಇರಾನ್ ಜೊತೆಗಿದ್ದೇವೆ ಎಂದಿದೆ. ಆದರೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಈ ದಾಳಿಯನ್ನು ಖಂಡಿಸಿ ಟ್ವೀಟ್ ಮಾಡುವಾಗ ಕಂಡೆಮ್ ಬದಲು ಕಾಂಡೋಮ್ ಪದ ಬಳಸಿದ್ರಾ? ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಆಗುತ್ತಿದೆ. ಪಾಕಿಸ್ತಾನ ಪ್ರಧಾನಿ ಕಾಂಡೋಮ್ ಜಪದಲ್ಲಿದ್ದಾರೆ ಎಂದು ಹಲವರು ಟ್ರೋಲ್ ಮಾಡಿದ್ದಾರೆ.

ಏನಿದು ಕಂಡೆಮ್ ಬದಲು ಕಾಂಡೋಮ್?

ಇಸ್ರೇಲ್ ಇರಾನ್ ಮೇಲೆ ನಡೆಸಿದ ಏರ್‌ಸ್ಟ್ರಕ್ ದಾಳಿಯನ್ನು ಖಂಡಿಸಿದೆ. ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಈ ಕುರಿತು ಟ್ವೀಟ್ ಮಾಡಿ ಇರಾನ್‌ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಇದರ ನಡುವೆ ನವಾಜ್ ಷರೀಫ್ ಮೊದಲು ಕಂಡೆಮ್ ಬದಲು ಕಾಂಡೋಮ್ ಅನ್ನೋ ಪದ ಬಳಸಿದ್ದರು. ಬಳಿಕ ಎಡಿಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನ ಪ್ರಧಾನಿ ಈ ಟ್ವೀಟ್ ಸ್ಕ್ರೀನ್‌ಶಾಟ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಿಜಕ್ಕೂ ಪಾಕ್ ಪ್ರಧಾನಿ ಅಚಾತುರ್ಯದಿಂದ ಈ ರೀತಿ ಪದ ಬಳಸಿದ್ದರೆ ಅನ್ನೋದು ಸ್ಪಷ್ಟವಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಷರೀಫ್ ಟ್ರೋಲ್ ಆಗಿದ್ದಾರೆ.

Scroll to load tweet…

ನಾನು ಖಂಡಿಸುತ್ತೇನೆ ಅನ್ನೋ ಬದಲು ನಾನು ಕಾಂಡೋಮ್ ಎಂದು ಷರೀಫ್ ಪದ ಬಳಿಸಿದ್ದಾರೆ ಎಂದು ಈ ಸ್ಕ್ರೀನ್ ಶಾಟ್ ಹೇಳುತ್ತಿದೆ. ಆದರೆ ಷರೀಪ್ ದಾಳಿಯನ್ನು ಖಂಡಿಸುತ್ತೇನೆ ಎಂದು ಹೇಳಿ ಮಾಡಿದ ಟ್ವೀಟ್ ಎಕ್ಸ್ ಖಾತೆಯಲ್ಲಿದೆ. ಇದಕ್ಕೂ ಮೊದಲು ಈ ಟ್ವೀಟ್ ಕಾಂಡೋಮ್ ಆಗಿತ್ತೇ ಅನ್ನೋದು ಸ್ಪಷ್ಟವಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹಲವರು ಈ ಸ್ಕ್ರೀನ್ ಶಾಟ್ ಪೋಸ್ಟ್ ಮಾಡುತ್ತಿದ್ದಾರೆ. ಕಾಂಡೋಮ್ ಎಂದು ಬರೆದು ಬಳಿಕ ಎಡಿಟ್ ಮಾಡಲಾಗಿದೆ. ಟ್ರೋಲ್ ಆಗುತ್ತಿದ್ದಂತೆ ಎಡಿಟ್ ಮಾಡಲಾಗಿದೆ. ಹೀಗಾಗಿ ಕೆಲ ಸಮಯ ಕಾಂಡೋಮ್ ಪದ ಎಕ್ಸ್‌‌ನಲ್ಲಿತ್ತು. ಹೀಗಾಗಿ ಸ್ಕ್ರೀನ್ ಶಾಟ್ ತೆಗೆದಿದ್ದೇವೆ ಎಂದು ಹಲವರು ಹೇಳಿದ್ದಾರೆ.

ಇಸ್ರೇಲ್ ನಡೆಸಿದ ಅಪ್ರಚೋದಿತ ದಾಳಿಯನ್ನು ನಾನು ತೀವ್ರವಾಗಿ ಹಾಗೂ ಕಠುವಾಗಿ ಖಂಡಿಸುತ್ತೇನೆ. ಈ ದಾಳಿಯಲ್ಲಿ ಇರಾನ್ ಜನತೆ ಅಪಾರ ನಷ್ಟ ಅನುಭವಿಸಿದ್ದಾರೆ.ಇರಾನಿ ಪ್ರಜೆಗಳಿಗೆ ನನ್ನ ಸಂತಾಪಗಳು . ಈ ನಡೆ ಹಾಗೂ ದಾಳಿ ಈಗಾಗಲೇ ಹಳಸಿದ ಸಂಬಂಧಗಳನ್ನು ಮತ್ತಷ್ಟ ಉದ್ವಿಘ್ನಗೊಳಿಸಿದೆ. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ನಾಯಕರು, ವಿಶ್ವ ಸಂಸ್ಥೆ ತಕ್ಷಣವೇ ಮಧ್ಯಪ್ರವೇಶಿಸಿ ಮುಂದೆ ಆಗಬಹುದಾದ ಅನಾಹುತ ತಪ್ಪಿಸಬೇಕು. ಜೊತೆಗೆ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ನಾನು ಆಗ್ರಹಿಸುತ್ತೇನೆ. ಇದು ಷರೀಫ್ ಮಾಡಿದ ಟ್ವೀಟ್.

Scroll to load tweet…

ಇರಾನ್ ಹಾಗೂ ಇಸ್ರೇಲ್ ನಡುವೆ ಸಂಘರ್ಷ

ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ಸತತ ದಾಳಿ ಮಾಡುತ್ತಿದೆ. ಹಮಾಸ್ ಉಗ್ರರನ್ನು ಸದೆ ಬಡಿಯುತ್ತಿದೆ.ಇದರ ನಡುವೆ ಇರಾನ್ ದೇಶದ ಹೌಥಿಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದಾಗ ಇಸ್ರೇಲ್ ಪ್ರತಿ ದಾಳಿ ನಡೆಸಿತ್ತು. ಇರಾನ್ ಪರಮಾಣು ಬಾಂಬ್ ಪ್ರಯೋಗದ ಕುರಿತು ಇಸ್ರೇಲ್ ಆತಂಕ ವ್ಯಕ್ತಪಡಿಸುತ್ತಲೇ ಬಂದಿತ್ತು. ಇದೀಗ ಮುಂದಿನ ತಲೆಮಾನರನ್ನು ಸುರಕ್ಷಿತವಾಗಿಡಲು ಇಸ್ರೇಲ್ ಬಯಸುತ್ತಿದೆ. ಹೀಗಾಗಿ ಇರಾನ್ ಪ್ರಯತ್ನ ವಿಫಲಗೊಳಿಸಲ ಇಸ್ರೇಲ್ ಏಕಾಏಕಿ ಇರಾನ್ ಅನುಬಾಂಬ್ ಸ್ಥಾವರ ಸೇರಿದಂತೆ ಹಲವು ಪ್ರದೇಶಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಗೆ ಇರಾನ್ ಪ್ರತಿ ದಾಳಿ ನಡೆಸಿದೆ. ಮಿಸೈಲ್ ಮೂಲಕ ಇಸ್ರೇಲ್ ಮೇಲೆ ದಾಳಿ ಮಾಡಲಾಗಿದೆ.