ಹೆಂಡತಿಯ ಮತಾಂತರ ಮಾಡಿಸಿದನಾ ನವಾಜುದ್ದೀನ್ ಸಿದ್ದಿಕಿ?
ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿಯ ಪತ್ನಿ ಆಲಿಯಾ ಗಂಡನಿಗೆ ಡೈವೋರ್ಸ್ ನೀಡಿದ್ದಾಳೆ. ಆಕೆಯ ಇಚ್ಛೆಗೆ ವಿರುದ್ಧವಾಗಿ ಅವಳ ಹೆಸರನ್ನು ಸಿದ್ದಿಕಿ ಬದಲಾಯಿಸಿದ್ದನಂತೆ.
ನವಾಜುದ್ದೀನ್ ಸಿದ್ದಿಕಿಯ ಪಾತ್ರ ನಿರ್ವಹಣೆ ನೋಡಿ ನೀವು ವಾಹ್ ಎಂದಿರಬಹುದು. ಆದರೆ ಅವನ ಜೊತೆ ಬದುಕುವುದು ಅವನ ಹೆಂಡತಿಗಂತೂ ಅಷ್ಟೊಂದು ವಾವ್ ಅನಿಸುವ ಸಂಗತಿಯಾಗಿರಲಿಲ್ಲವಂತೆ. ಇದೀಗ ಆತನ ಪತ್ನಿ ಆಲಿಯಾ ಗಂಡನಿಂದ ಬೇರೆಯಾಗಿ ಬದುಕುತ್ತಿದ್ದಾಳೆ. ಡೈವೋರ್ಸ್‌ಗೆ ಅಪ್ಲೈ ಮಾಡಿದ್ದಾಳೆ. ಅದಕ್ಕೆ ಆಕೆ ನೀಡುತ್ತಿರುವ ಕಾರಣಗಳು ಸಿದ್ದಿಕಿಯ ಬಗ್ಗೆ ಹೇವರಿಕೆ ಹುಟ್ಟಿಸುವಂತೆ ಇವೆ.
ಒಂದೆರಡು ತಿಂಗಳಿನಿಂದ ನವಾಜುದ್ದೀನ್‌ನಿಂದ ಬೇರೆಯಾಗಿ ಇಬ್ಬರು ಮಕ್ಕಳ ಜೊತೆಗೆ ವಾಸಿಸುತ್ತಿರುವ ಆಲಿಯಾ, ಈಗ ತನ್ನ ಹೆಸರನ್ನು ಅಂಜನಾ ಆನಂದ್ ಕಿಶೋರ್ ಪಾಂಡೆ ಎಂದು ಬದಲಾಯಿಸಿಕೊಂಡಿದ್ದಾಳೆ. ಇದು ಆಕೆಯ ನಿಜವಾದ ಹೆಸರು. ಹಿಂದೂ ಆಗಿದ್ದ ಈಕೆ ನವಾಜ್‌ನನ್ನು ಮದುವೆಯಾದ ಬಳಿಕ ಹೆಸರು ಬದಲಾಯಿಸಿಕೊಂಡಿದ್ದಳು. ಬದಲಾಯಿಸಿಕೊಳ್ಳುವಂತೆ ಅವನೇ ಒತ್ತಾಯಿಸಿದ್ದ. ಆಕೆಗೆ ಇಷ್ಟವಿರಲಿಲ್ಲವಾದರೂ ಅವನಿಗಾಗಿ ಬದಲಾಯಿಸಿಕೊಂಡಿದ್ದಳಂತೆ. ಅವನ ಫ್ಯಾಮಿಲಿಯಲ್ಲಿ ಹೆಣ್ಣುಮಕ್ಕಳ ಮೇಲೆ ಅಂಥ ಗೌರವವೇನೂ ಇರಲಿಲ್ಲ. ಪತ್ನಿಯರು ಗಂಡಂದಿರ ಸೇವೆಗಾಗಿಯೇ ಇರುವವರು, ಗಂಡನ ಅನುಕೂಲಕ್ಕೆ ತಕ್ಕಂತೆ ಆಕೆ ಇರಬೇಕು- ಎಂಬುದು ಆ ಮನೆಯಲ್ಲಿ ಎಲ್ಲರ ಭಾವನೆಯಾಗಿತ್ತಂತೆ.
ನವಾಜ್ ಹಾಗೂ ಅಂಜನಾ ಮದುವೆಯಾಗಿ ಹತ್ತು ವರ್ಷಗಳಾಗಿವೆ. ಇವರಿಬ್ಬರಿಗೆ ಇಬ್ಬರು ಮಕ್ಕಳು- ಒಂಬತ್ತು ವರ್ಷದ ಮಗಳು ಶೌರಾ ಹಾಗೂ ಮಗ ಐದು ವರ್ಷದ ಮಗ ಯಾನಿ. ನವಾಜ್ ಒಳ್ಳೆಯ ಗಂಡನಾಗಲಾರ ಎಂಬುದು ಆತನನ್ನು ಬಲ್ಲವರಿಗೆ ಗೊತ್ತಿದೆ. ದುರಭ್ಯಾಸಗಳು ಹಾಗೂ ಒರಟು ವರ್ತನೆಯ ಈ ಮನುಷ್ಯನಿಗೆ ಇದು ಎರಡನೇ ಮದುವೆ. ಹಿಂದೆ ಶೀಬಾ ಎಂಬಾಕೆಯನ್ನು ಈತ ಮದುವೆಯಾಗಿದ್ದ. ಅದು ಆರು ತಿಂಗಳಲ್ಲೇ ವಿಚ್ಛೇದನದ ಕಟ್ಟೆ ಹತ್ತಿ, ಆಕೆ ಅವನನ್ನು ಬಿಟ್ಟು ದೂರ ಹೋಗಿದ್ದಳು. ನವಾಜುದ್ದೀನ್‌ನ ತಮ್ಮನ ಹೆಂಡತಿ ಕೂಡ ಆತನ ದುರಭ್ಯಾಸಗಳ ಬಗ್ಗೆ ಮಾತನಾಡಿದ್ದಾಳೆ.
ಸಿದ್ದಿಕಿಯದು ಪ್ರೇಮವಿವಾಹ. ಮದುವೆಯಾದಾಗಾ ಸಿದ್ದಿಕಿಯ ಕೈಯಲ್ಲಿ ಫಿಲಂಗಳಿರಲಿಲ್ಲ. ಆದರೂ ಆಲಿಯಾ ಆತನನ್ನು ಪ್ರೀತಿಸಿ ಮದುವೆಯಾದಳು. ಆಗಲೇ ಸಿದ್ದಿಕಿಗೆ ಕೆಲವು ಚಟಗಳಿದ್ದವು. ಆತ ಬದಲಾಗಬಹುದು ಅಂತ ಆಕೆ ಭಾವಿಸಿದ್ದಳು. ಆದರೆ ಹಾಗಾಗಲಿಲ್ಲ. ಸಿದ್ದಿಕಿಗೆ ತುಂಬಾ ಪ್ರೇಯಸಿಯರಿದ್ದರು. ಆಲಿಯಾಳ ಜೊತೆಗೆ ಹಸೆಮಣೆ ಏರುವಾಗಲೇ ಆತ ಇನ್ನೊಬ್ಬಳೊಂದಿಗೆ ಸೆಕ್ಸ್ ಚಾಟಿಂಗ್‌ನಲ್ಲಿ ನಿರತನಾಗಿದ್ದ. ಆಲಿಯಾ ಚೊಚ್ಚಲ ಮಗುವಿನ ಹೆರಿಗೆಯ ನೋವು ತಿನ್ನುತ್ತಿದ್ದಾಗ, ಈತ ಆಕೆಯ ಪಕ್ಕದಲ್ಲಿರದೆ ಫೋನ್‌ನಲ್ಲಿ ಬೇರೊಬ್ಬ ಪ್ರೇಯಸಿಯ ಜೊತೆಗೆ ಪ್ರೇಮಾಯಣ ನಡೆಸುತ್ತಿದ್ದ.
ಇನ್ನು ಸಿದ್ದಿಕಿಯ ತಮ್ಮಂದಿರ ವರ್ತನೆ ಸರಿಯಾಗಿರಲಿಲ್ಲ. ಅವರು ತಮ್ಮ ಮನೆಯ ಹೆಂಗಸರು ಇರುವುದೇ ತಮ್ಮ ಹೊಡೆತ ತಿನ್ನಲು ಎಂದು ಭಾವಿಸಿದ್ದರು. ಪತ್ನಿಯರಿಗೆ ಬಾರಿಸುವುದು ಅವರಲ್ಲಿ ಸಾಮಾನ್ಯ ಎಂಬಂತಿತ್ತು. ಒಮ್ಮೆ ನವಾಜ್‌ನ ತಮ್ಮ ಅಯಾಜ್ ತನ್ನ ಹೆಂಡತಿಗೆ ಹೊಡೆಯುತ್ತಿದ್ದಾಗ, ಆಲಿಯಾ ಅದನ್ನು ಪ್ರಶ್ನಿಸಿದ್ದಳು. ಆಗ ಅಯಾಜ್ ಆಲಿಯಾಳ ಮೇಲೂ ಏರಿಹೋಗಿದ್ದ. ಇದನ್ನು ನವಾಜುದ್ದೀನ್ ಆಕ್ಷೇಪಿಸಿರಲಿಲ್ಲ. ಇಂಥ ಗಳಿಗೆಯಲ್ಲಿ ತನ್ನ ಪರ ನಿಲ್ಲದ ಗಂಡ ಇದ್ದರೂ ಸತ್ತರೂ ಒಂದೇ ಅಂತ ಹೆಂಡತಿಗೆ ಅನಿಸುವುದು ಸಹಜ ತಾನೆ. ನವಾಜ್‌ನ ತಮ್ಮಂದಿರ ಇತರ ವರ್ತನೆಗಳೂ ಆಕ್ಷೇಪಾರ್ಹವಾಗಿದ್ದವು. ಒಮ್ಮೆ ನವಾಜ್‌ನ ಮಗಳ ಜೊತೆಗೂ ಅಯಾಜ್ ಅನುಚಿತವಾಗಿ ನಡೆದುಕೊಂಡಿದ್ದ. ಇದನ್ನೂ ನವಾಜ್ ಪ್ರಶ್ನಿಸಿರಲಿಲ್ಲ.
ನಿತ್ಯ ಮೆನನ್ ಲೆಸ್ಬಿಯನ್ ಲಿಪ್‌ಲಾಕ್: ನಟಿಯ ಬೋಲ್ಡ್ ಲುಕ್ ವೈರಲ್
ಆಲಿಯಾ ಹೆರಿಗೆ ರೂಮಿನಲ್ಲಿದ್ದಾಗ ನವಾಜ್ ಬೇರೆ ಹುಡುಗಿಯರ ಜೊತೆಗೆ ಹಾದರ ನಡೆಸುತ್ತಿದ್ದ ಬಗ್ಗೆ ಆತನ ಫೋನ್ ವಿವರ ತೆಗೆಸಿಕೊಟ್ಟವನೂ ನವಾಜ್‌ನ ಸೋದರ ಶಮಾಜ್. ಆದರೆ ಈಗ ಶಮಾಜ್ ಆಲಿಯಾಗೆ ತಿರುಗಿ ಬಿದ್ದಿದ್ದಾನೆ. ಆಲಿಯಾ ಮೇಲೆ 2.5 ಕೋಟಿ ರೂಪಾಯಿಗಳ ವಂಚನೆ ಕೇಸು ಹಾಕಿದ್ದಾನೆ. ಶಮಾಜ್ ಪ್ರಭಾವಿ ಆಗಿದ್ದು, ಆತನಿಗೆ ಮುಂಬಯಿ ಪೊಲೀಸರ ಪರಿಚಯವಿದೆ. ಹೀಗಾಗಿ ಆಲಿಯಾ ನೀಡಿದ ಹಲವು ಕಂಪ್ಲೇಂಟ್‌ಗಳನ್ನು ಪೊಲೀಸರು ಮುಟ್ಟುತ್ತಲೇ ಇಲ್ಲ.
ರಾಕಿಭಾಯ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್..