ಬಿಗ್ ಬಾಸ್ ತಂದು ಕೊಡ್ತು ಲಕ್, ಹೊಸ ಚಿತ್ರದಲ್ಲಿ ಹೊರ ಬಂದ ಸ್ಪರ್ಧಿ!
ಬಿಗ್ ಬಾಸ್ 11ರ ಸ್ಪರ್ಧಿ ಧರ್ಮ ಕೀರ್ತಿರಾಜ್ ಈಗ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಅವರು ಅಭಿನಯದ ಸಿನಿಮಾ ತೆರೆ ಕಂಡಿದ್ದು, ಇನ್ನೊಂದು ಸಿನಿಮಾ ಶೂಟಿಂಗ್ ಜೋರು ಪಡೆದಿದೆ.
ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ, ಸ್ಯಾಂಡಲ್ ವುಡ್ ನಟ ಧರ್ಮ ಕೀರ್ತಿರಾಜ್ (Bigg Boss season 11 contestant, Sandalwood actor Dharma Keerthiraj) ತಮ್ಮ ನೆಚ್ಚಿನ ಕೆಲಸಕ್ಕೆ ಮರಳಿದ್ದಾರೆ. ಅಮರಾವತಿ ಪೊಲೀಸ್ ಸ್ಟೇಷನ್ (Amravati Police Station) ಸಿನಿಮಾದಲ್ಲಿ ಅವರು ನಟಿಸುತ್ತಿದ್ದು, ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಧರ್ಮ ಕೀರ್ತಿರಾಜ್ ಈಗ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಇನ್ಸ್ಟಾ ಖಾತೆಯಲ್ಲಿ ಧರ್ಮ ಕೀರ್ತಿರಾಜ್, ಶೂಟಿಂಗ್ ತುಣುಕುಗಳನ್ನು ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಬಂದ್ಮೇಲೆ ನನ್ನ ಮೊದಲ ಶೂಟಿಂಗ್. ನನ್ನಿಷ್ಟದ ಕೆಲಸಕ್ಕೆ ಮರಳಿದ್ದೇನೆ. ಸಿನಿಮಾ ಅಮರಾವತಿ ಪೊಲೀಸ್ ಠಾಣೆ ಎಂಬ ಶೀರ್ಷಿಕೆಯನ್ನು ಧರ್ಮ ಕೀರ್ತಿರಾಜ್ ಹಾಕಿದ್ದಾರೆ.
ಅವರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಪೂಜೆ ಮಾಡಿ ಶೂಟಿಂಗ್ ಶುರು ಮಾಡಿರೋದನ್ನು ನೀವು ಕಾಣ್ಬಹುದು. ಶಾಲೆಯಲ್ಲಿ ಶೂಟಿಂಗ್ ನಡೆಯುತ್ತಿದ್ದು, ಮಕ್ಕಳು ಧರ್ಮ ಕೀರ್ತಿರಾಜ್ ಅವರನ್ನು ಮುತ್ತಿದ್ದಾರೆ. ಪ್ರತಿಯೊಬ್ಬರಿಗೂ ಆಟೋಗ್ರಾಫ್ ಹಾಕಿರುವ ಧರ್ಮ ಕೀರ್ತಿರಾಜ್, ಶೂಟಿಂಗ್ ಎಂಜಾಯ್ ಮಾಡ್ತಿದ್ದಾರೆ. ಧರ್ಮ ಅವರ ಕೆಲಸಕ್ಕೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಶುಭಕೋರಿದ್ದಾರೆ. ಒಳ್ಳೆಯವರಿಗೆ ಒಳ್ಳೆಯದಾಗುತ್ತೆ, ತಲೆ ಕೆಡಿಸಿಕೊಳ್ಬೇಡಿ ಎನ್ನುತ್ತ ಧೈರ್ಯ ತುಂಬಿದ್ದಾರೆ.
ನೆಟ್ ಧರಿಸಿ ಅರೆ ಬೆತ್ತಲೆ ಪೋಸ್, ಹೆರಿಗೆ ಆದ್ಮೇಲೆ ಬೇಬಿ ಬಂಪ್ ಫೋಟೋ ಹಂಚ್ಕೊಂಡ ನಟಿ
ಅಮರಾವತಿ ಪೊಲೀಸ್ ಸ್ಟೇಷನ್, ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ಇದನ್ನು ಪುನೀತ್ ಅರಸಿಕೇರೆ ನಿರ್ದೇಶನ ಮಾಡ್ತಿದ್ದಾರೆ. ಕಥೆ, ಚಿತ್ರಕಥೆ ಹೊಣೆಯನ್ನೂ ಅವರೇ ಹೊತ್ತಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಹಿರಿಯ ನಟ ವಿನೋದ್ ರಾಜ್ ಕುಮಾರ್, ಸೆಪ್ಟೆಂಬರ್ ನಲ್ಲಿ ಸಿನಿಮಾ ಟೀಸರ್ ಬಿಡುಗಡೆ ಮಾಡಿ, ತಂಡಕ್ಕೆ ಶುಭ ಕೋರಿದ್ದರು. ಕಡಲತೀರದ ಊರು ಅಮರಾವತಿಯಲ್ಲಿ ನಡೆಯುವ ಕಥೆಯನ್ನು ಇದು ಒಳಗೊಂಡಿದೆ. ಈ ಸಿನಿಮಾದಲ್ಲಿ ಜಗ್ಗೇಶ್ ಪುತ್ರ ಗುರುರಾಜ್ ಜಗ್ಗೇಶ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೇದ್ವಿಕ ನಾಯಕಿಯಾಗಿದ್ದು, ಸಾಧು ಕೋಕಿಲಾ, ಧರ್ಮಣ್ಣ ಸೇರಿದಂತೆ ಅನೇಕ ಪ್ರಮುಖ ಕಲಾವಿದರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಬಿಗ್ ಬಾಸ್ ಸೀನಸ್ 11ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಸೇರಿದ್ದ ಧರ್ಮ ಕೀರ್ತಿರಾಜ್ ಅಧ್ಬುತವಾಗಿ ತಮ್ಮ ಆಟ ಪ್ರದರ್ಶಿಸಿದ್ದರು. ಆದ್ರೆ ಎಲ್ಲಿಯೂ ತಮ್ಮ ಸ್ವಭಾವಕ್ಕೆ ವಿರುದ್ಧವಾಗಿ ನಡೆದುಕೊಂಡಿರಲಿಲ್ಲ. ಯಾವುದೇ ಗಲಾಟೆ, ಕೂಗಾಟದಲ್ಲಿ ಪಾಲ್ಗೊಳ್ಳದೆ ತಮ್ಮ ಆಟಕ್ಕೆ ಪ್ರಾಮುಖ್ಯತೆ ನೀಡಿದ್ದ ಧರ್ಮಕೀರ್ತಿ, ವೀಕ್ಷಕರ ಮನಸ್ಸು ಗೆದ್ದಿದ್ದರೂ ವೋಟು ಪಡೆಯಲು ವಿಫಲರಾದ್ರು. 8ನೇ ವಾರ ಧರ್ಮ ಕೀರ್ತಿರಾಜ್ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಮನೆಗೆ ಬಂದ ಮಗನಿಗೆ ಕೀರ್ತಿರಾಜ್ ಅದ್ದೂರಿ ಸ್ವಾಗತ ನೀಡಿದ್ದಲ್ಲದೆ ಮುಂದಿನ ಭವಿಷ್ಯಕ್ಕೆ ಶುಭಕೋರಿದ್ದರು.
ಬಿಗ್ ಬಾಸ್ ಮನೆಯಲ್ಲಿ ಸಿನಿಮಾ ಬಗ್ಗೆ ಮಾತನಾಡಿದ್ದ ಧರ್ಮ ಕೀರ್ತಿರಾಜ್, ಆರಂಭದಿಂದ ಇಲ್ಲಿಯವರೆಗೂ ಸೋಲು ಕಂಡವನು ನಾನು. ಎಷ್ಟೇ ಸಿನಿಮಾ ಮಾಡಿದ್ರೂ ಜನರು ನನ್ನನು ಅಪ್ಪಿಕೊಂಡಿಲ್ಲ ಎಂಬರ್ಥದಲ್ಲಿ ನೋವು ತೋಡಿಕೊಂಡಿದ್ದರು. ಆದ್ರೆ ಬಿಗ್ ಬಾಸ್ ಮನೆಯಿಂದ ಹೊರಗೆ ಬರ್ತಿದ್ದಂತೆ ಧರ್ಮ ಕೀರ್ತಿಗೆ ಸಾಕಷ್ಟು ಪ್ರೀತಿ ಸಿಕ್ಕಿದೆ. ಅನುಷಾ ಕೂಡ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದು, ಇವರಿಬ್ಬರ ಪ್ರೀತಿ ಮತ್ತೆ ಚರ್ಚೆಯಾಗ್ತಿದೆ. ಅನೇಕ ಶೋಗಳಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಧರ್ಮ ಕೀರ್ತಿರಾಜ್, ಬಿಗ್ ಬಾಸ್ ಮನೆಯಲ್ಲಿರುವಾಗ ಅವರ ಅಭಿನಯದ ಟೆನೆಂಟ್ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಧರ್ಮ ಜೊತೆ ಉಗ್ರಂ ಮಂಜು ಕೂಡ ಕಾಣಿಸಿಕೊಂಡಿದ್ದಾರೆ. ನವಗ್ರಹ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ಧರ್ಮ ಕೀರ್ತಿರಾಜ್, ಒಲವೇ ವಿಸ್ಮಯ, ಹಣೆ ಬರಹ, ಬಿಂದಾಸ್ ಗೂಗ್ಲಿ, ರೋನಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.