ಪೋಯೆಸ್ ಗಾರ್ಡನ್ ಏರಿಯಾ ಚೆನ್ನೈನ ಕಾಸ್ಟ್ಲಿ ಮತ್ತು ಪಾಷ್ ಏರಿಯಾಗಳಲ್ಲಿ ಒಂದು. ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ವೇದ ಇಲ್ಲಂ, ಸೂಪರ್‌ಸ್ಟಾರ್ ರಜನಿಕಾಂತ್ ಮನೆ ಇರುವುದೂ ಇದೇ ಜಾಗದಲ್ಲಿ. ಇದೀಗ ನಟ ಧನುಷ್ ಕೂಡಾ ಇದೇ ಏರಿಯಾಗೆ ಶಿಫ್ಟ್ ಆಗಿದ್ದು, ಹೊಸ ಜಾಗದಲ್ಲಿ ಭೂಮಿ ಪೂಜೆ ನೆರವೇರಿದೆ.

ಈ ಹೊಸ ಜಾಗದಲ್ಲಿ ಕಟ್ಟಡ ನಿರ್ಮಿಸಲು ಭೂಮಿ ಪೂಜೆ ನಡೆಸಲಾಗಿದ್ದು, ಮಾವ ರಜನೀಕಾಂತ್ ಜೊತೆಗೇ ಇದ್ದು, ಮಗಳು ಅಳಿಯನನ್ನು ಹರಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಹೈದರಾಬಾದ್‌ನಲ್ಲಿ ಆಸ್ಪತ್ರೆಗೆ ದಾಖಲಾದ ನಂತರ ಇದೇ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ರಜನಿ.

ಹಾಲಿವುಡ್ ಸಿನಿಮಾದಲ್ಲಿ ಕಾಲಿವುಡ್‌ ನಟ ಧನುಷ್..!

ಕಾಲಿವುಡ್‌ನಲ್ಲಿ ಅತ್ಯಂತ ಬ್ಯುಸಿಯಾಗಿರುವ ನಟರಲ್ಲಿ ಧನುಷ್ ಒಬ್ಬರು. ಈಗ ಹಾಲಿವುಡ್‌ನಲ್ಲಿಯೂ ಮಿಂಚುತ್ತಿದ್ದಾರೆ. ನಟ ಕಾರ್ತಿಕ್ ಸುಬ್ಬರಾಜ್ ಅಭಿನಯದ ಜಗಮೆ ತಂದಿರಂ ಮತ್ತು ಮಾರಿ ಸೆಲ್ವರಾಜ್ ಅವರ ಕರ್ಣನ್ ಸಿನಿಮಾದಲ್ಲಿ ನಟಿಸಿದ್ದಾರೆ.