Dhanush-Aishwarya In Hyderabad: ಒಂದೇ ಹೋಟೆಲ್‌ನಲ್ಲಿದ್ದಾರೆ ಧನುಷ್-ಐಶ್ವರ್ಯಾ

ಇತ್ತೀಚೆಗೆ ವಿಚ್ಚೇದನೆ ಘೋಷಿಸಿದ ಕಾಲಿವುಡ್ ನಟ ತಮ್ಮ ಮಾಜಿ ಪತ್ನಿ ಜೊತೆ ಹೈದರಾಬಾದ್‌ನಲ್ಲಿದ್ದಾರೆ. ಒಂದೇ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದು ಒಟ್ಟಿಗೇ ಇದ್ದಾರೆಯೇ ಎಂಬುದು ಸ್ಪಷ್ಟವಿಲ್ಲ

Dhanush and his estranged wife Aishwaryaa Rajinikanth are staying in the same hotel in Hyderabad dpl

ಇತ್ತೀಚೆಗೆ ಧನುಷ್ ಅವರ ತಂದೆ ತಮ್ಮ ಮಗ ಹಾಗೂ ಸೊಸೆ ವಿಚ್ಚೇದಿತರಾಗಿಲ್ಲ, ಇದು ಒಂದು ಕುಟುಂಬ ಕಲಹ ಅಷ್ಟೇ, ಅವರಿಬ್ಬರೂ ಹೈದರಾಬಾದ್‌ನಲ್ಲಿದ್ದಾರೆ ಎಂದು ಹೆಳಿಕೆ ಕೊಟ್ಟಿದ್ದರು. ಈಗ ಅದುದೇ ನಿಜ ಎಂಬಂತೆ ಧನುಷ್ ಹಾಗೂ ಐಶ್ವರ್ಯಾ ಹೈದರಾಬಾದ್‌ನಲ್ಲಿದ್ದಾರೆ. ಆಕಸ್ಮಿಕವೋ, ಪ್ಲಾನ್ಡ್‌ ಯಾವುದೋ ಗೊತ್ತಿಲ್ಲ, ಆದರೆ ಸೌತ್‌ನಲ್ಲಿ ಲೇಟೆಸ್ಟ್ ಡಿವೋಸ್ಡ್ ಕಪಲ್ ಹೈದರಾಬಾದ್‌ನಲ್ಲಿದ್ದಾರೆ. ಐಶ್ವರ್ಯಾ ರಜನೀಕಾಂತ್ ಹಾಗೂ ಅವರ ವಿಚ್ಚೇದಿತ ಪತಿ ಧನುಷ್ ಹೈದರಾಬಾದ್‌ನ ಒಂದೇ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. ರಾಮೋಜಿ ರಾವ್ ಸ್ಟುಡಿಯೋಸ್‌ನಲ್ಲಿ ಬರುವ ಸಿತಾರಾ ಹೋಟೆಲ್‌ನಲ್ಲಿ ಇಬ್ಬರೂ ಭಿನ್ನ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ರಾಮೋಜಿ ರಾವ್ ಸ್ಟುಡಿಯೋದಲ್ಲಿ ಶೂಟಿಂಗ್ ಮಾಡುವ ಹೆಚ್ಚಿನ ಸೆಲೆಬ್ರಿಟಿಗಳು ಇರುವ ಹೋಟೆಲ್ ಇದಾಗಿದೆ. ಧನುಷ್ ಕೆಲವು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ/ ಆದರೆ ಐಶ್ವರ್ಯ ನಾವು ನಿನ್ನೆ ಸಂಜೆ ಟಿಪ್ಸ್ ಮತ್ತು ಪ್ರೇರಣಾ ಅರೋರಾಗಾಗಿ ಲವ್‌ ಸಾಂಗ್ ನಿರ್ದೇಶಿಸಲು ತಯಾರಾಗುತ್ತಿದ್ದಾರೆ. ಇದರಲ್ಲಿ ಹುಡುಗಿ ದಕ್ಷಿಣದ ಪ್ರಸಿದ್ಧ ವ್ಯಕ್ತಿಯ ಮಗಳು ಮತ್ತು ಹುಡುಗ ಮುಂಬೈನವನು. ಜನವರಿ 25 ರಂದು ಐಶ್ವರ್ಯಾ ನಿರ್ದೇಶನ ಮಾಡಿದ ಹಾಡು ಪ್ರೇಮಿಗಳ ದಿನದಂದು; ಇದನ್ನು 3 ದಿನಗಳ ಅವಧಿಯಲ್ಲಿ ಚಿತ್ರೀಕರಿಸಲಾಗುತ್ತದೆ.

Dhanush Announces Separation : ರಜನಿ ಮಗಳ ಜತೆಗಿನ ಬಾಂಧವ್ಯ ಅಂತ್ಯಗೊಳಿಸಿದ ಧನುಷ್

ಐಶ್ವರ್ಯಾ ಮತ್ತು ಧನುಷ್ ತಮ್ಮ ಪ್ರಸ್ತುತ ಪ್ರವಾಸದಲ್ಲಿ ಹೈದರಾಬಾದ್‌ನಲ್ಲಿ ಆತ್ಮೀಯವಾಗಿ ಭೇಟಿಯಾಗಿದ್ದಾರೆಯೇ ಎನ್ನುವುದು ಇನ್ನೂ ತಿಳಿದಿಲ್ಲ. ಅವರು ಪರಸ್ಪರರ ಯೋಗಕ್ಷೇಮದ ಬಗ್ಗೆ ತಿಳಿದುಕೊಳ್ಳಲು ಪರಸ್ಪರ ಕರೆ ಮಾಡುತ್ತಾರೆಯೇ ಅದೂ ರಿವೀಲ್ ಆಗಿಲ್ಲ.

ಧನುಷ್ (Dhanush)  ಮತ್ತು ಐಶ್ವರ್ಯಾ (Aishwarya ) ಅಧಿಕೃತವಾಗಿ (Divorce) ಜ.17ರಂದು ದೂರದೂರವಾಗಿದ್ದಾರೆ. ರಜನೀಕಾಂತ್ (Rajinikanth)  ಪುತ್ರಿಯನ್ನು ಮದುವೆ ಮಾಡಿಕೊಂಡಿದ್ದ ಧನುಷ್  ದೂರವಾಗುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾ (Social Media)  ಮೂಲಕ ತಿಳಿಸಿದ್ದಾರೆ. ದಂಪತಿಗೆ ಇಬ್ಬರಿಗೂ ಎರಡು ಗಂಡು ಮಕ್ಕಳಿದ್ದಾರೆ. ಪ್ರೀತಿಸಿ ಮದುವೆ ಆಗಿದ್ದ ನಟ ಧನುಷ್ ಹಾಗು ಐಶ್ವರ್ಯ 18 ವರ್ಷ ದ ದಾಂಪತ್ಯ ಪೂರೈಸಿದ್ದರು.

18 ವರ್ಷದಿಂದ ಇಬ್ಬರು ಅನ್ಯೂನ್ಯವಾಗಿದ್ದೇವು. ಒಬ್ಬರಿಗೊಬ್ಬ ಅರ್ಥ ಮಾಡಿಕೊಂಡು ಕಷ್ಟ ಸುಖದಲ್ಲಿ ಭಾಗಿ ಆಗಿದ್ವಿ. ಸ್ನೇಹಿತರಾಗಿ, ದಂಪತಿಗಳಾಗಿ ಪೋಷಕರಾಗಿ ಜೀವನ ನಡೆಸಿದ್ವಿ. ಈಗ ನಾವು ದೂರಾಗಲು ನಿರ್ಧರಿಸಿದ್ದೇವೆ ಎಂದು ಧನುಷ್ ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.

ವಿಚ್ಚೇದಿತರಾಗಿಲ್ಲ ಎಂದ ಪೋಷಕರು

ಧನುಷ್ ಅವರ ತಂದೆ ಅಚ್ಚರಿ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ಡಿವೋರ್ಸ್ ಪಡೆದಿಲ್ಲ.ಇದು ಒಂದು ಕುಟುಂಬ ಕಲಹ ಅಷ್ಟೆ ಎಂದು ಹೇಳಿದ್ದಾರೆ.

ನಟ ಧನುಷ್ ಮತ್ತು ಪತ್ನಿ ಐಶ್ವರ್ಯ ಮದುವೆಯಾಗಿ 18 ವರ್ಷಗಳ ನಂತರ ತಮ್ಮ ಬೇರ್ಪಡುವಿಕೆಯನ್ನು ಘೋಷಿಸಿದ ಕೆಲವೇ ದಿನಗಳಲ್ಲಿ, ಅವರ ತಂದೆ ಕಸ್ತೂರಿ ರಾಜಾ ಇಬ್ಬರೂ ವಿಚ್ಛೇದನದತ್ತ ಸಾಗುತ್ತಿದ್ದಾರೆ ಎನ್ನುವುದನ್ನು ನಿರಾಕರಿಸಿದ್ದಾರೆ. ಧನುಷ್ ಅವರ ತಂದೆ ಈ ಒಡಕನ್ನು ‘ಕೌಟುಂಬಿಕ ಕಲಹ’ ಎಂದು ಉಲ್ಲೇಖಿಸಿದ್ದಾರೆ. ಐಶ್ವರ್ಯ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರ ಹಿರಿಯ ಮಗಳು. ಧನುಷ್ ಹಾಗೂ ಐಶ್ವರ್ಯಾ 15 ವರ್ಷದ ಯಾತ್ರಾ ಮತ್ತು 11 ವರ್ಷದ ಲಿಂಗ ಅವರೊಂದಿಗೆ ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದಾರೆ.

ಧನುಷ್ ಮತ್ತು ಐಶ್ವರ್ಯ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂದು ಕಸ್ತೂರಿ ರಾಜಾ ಡೈಲಿಥಂಡಿ ತಿಳಿಸಿದ್ದಾರೆ. 'ಧನುಷ್ ಮತ್ತು ಐಶ್ವರ್ಯಾ ವಿಚ್ಛೇದನ ಪಡೆದಿಲ್ಲ. ಭಿನ್ನಾಭಿಪ್ರಾಯದಿಂದ ಅವರ ನಡುವೆ ಜಗಳವಾಗಿದೆ. ಹಾಗಾಗಿ ಇದು ಮಾಮೂಲಿ ಕುಟುಂಬ ಜಗಳವಾಗಿದೆ. ಪ್ರಸ್ತುತ ಇಬ್ಬರೂ ಊರಿನಿಂದ ಹೊರಗುಳಿದಿದ್ದಾರೆ. ಹೈದರಾಬಾದ್‌ನಲ್ಲಿದ್ದಾರೆ, ನಾನು ಅವರೊಂದಿಗೆ ಫೋನ್ ಮೂಲಕ ಮಾತನಾಡಿ ಸಲಹೆ ನೀಡಿದ್ದೇನೆ. ಅವರೂ ಕೂಡ ಮಾತನಾಡಿದ್ದಾರೆ ಎಂದಿದ್ದಾರೆ.

ಧನುಷ್ (Dhanush)  ಮತ್ತು ಐಶ್ವರ್ಯಾ (Aishwarya ) ಅಧಿಕೃತವಾಗಿ (Divorce) ದೂರದೂರವಾಗಿದ್ದಾರೆ. ರಜನೀಕಾಂತ್ (Rajinikanth)  ಪುತ್ರಿಯನ್ನು ಮದುವೆ ಮಾಡಿಕೊಂಡಿದ್ದ ಧನುಷ್  ದೂರವಾಗುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾ (Social Media)  ಮೂಲಕ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios