Asianet Suvarna News Asianet Suvarna News

Muttiah Muralitharan Biopic: 800 ಚಿತ್ರದಲ್ಲಿ ಸ್ಲಂಡಾಗ್‌ ಮಿಲೇನಿಯರ್‌ ಖ್ಯಾತಿಯ ದೇವ್‌ ಪಟೇಲ್‌

ಕ್ರಿಕೆಟ್‌ ಲೋಕದ ದಂತಕತೆ ಮುತ್ತಯ್ಯ ಮುರಳೀಧರನ್‌ ಅವರ ಬಯೋಪಿಕ್‌ ‘800’ ಚಿತ್ರಕ್ಕೆ ನಾಯಕನಾಗಿ ಸ್ಲಂಡಾಗ್‌ ಮಿಲೇನಿಯರ್‌ ಖ್ಯಾತಿಯ ದೇವ್‌ ಪಟೇಲ್‌ ಆಯ್ಕೆಯಾಗಿದ್ದಾರೆ. ಆ ಮೂಲಕ ನಿಂತೇ ಹೋಗಲಿದೆ ಎಂದುಕೊಂಡಿದ್ದ ‘800’ ಚಿತ್ರಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ. 

Dev Patel Starrer In Spin Great Muttiah Muralitharan Biopic Movie gvd
Author
Bangalore, First Published Jan 13, 2022, 8:53 AM IST

ಕ್ರಿಕೆಟ್‌ ಲೋಕದ ದಂತಕತೆ ಮುತ್ತಯ್ಯ ಮುರಳೀಧರನ್‌ (Muttiah Muralitharan) ಅವರ ಬಯೋಪಿಕ್‌ ‘800’ ಚಿತ್ರಕ್ಕೆ ನಾಯಕನಾಗಿ ಸ್ಲಂಡಾಗ್‌ ಮಿಲೇನಿಯರ್‌ (Slumdog Millionaire) ಖ್ಯಾತಿಯ ದೇವ್‌ ಪಟೇಲ್‌ (Dev Patel) ಆಯ್ಕೆಯಾಗಿದ್ದಾರೆ. ಆ ಮೂಲಕ ನಿಂತೇ ಹೋಗಲಿದೆ ಎಂದುಕೊಂಡಿದ್ದ ‘800’ ಚಿತ್ರಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ. 

ನಟ ವಿಜಯ್‌ ಸೇತುಪತಿ (Vijay Sethupathi) ಅವರು ಮುರಳೀಧರನ್‌ ಪಾತ್ರ ಮಾಡಲಿದ್ದಾರೆ ಎಂದು ಈ ಹಿಂದೆಯೇ ಘೋಷಣೆ ಆಗಿ ಚಿತ್ರದ ಫಸ್ಟ್‌ ಲುಕ್‌ (First Look) ಕೂಡ ಬಿಡುಗಡೆ ಆಗಿ ಮುರಳೀಧರನ್‌ ಪಾತ್ರದಲ್ಲಿ ಸೇತುಪತಿ ನಟಿಸಬಾರದು ಎಂಬ ವಿವಾದ ಆರಂಭವಾಗಿತ್ತು. ಇದರಿಂದ ‘800’ ಚಿತ್ರದಿಂದ ವಿಜಯ್‌ ಸೇತುಪತಿ ಹೊರ ಉಳಿದರು. ವಿಜಯ್‌ ಸೇತುಪತಿ ಕೈ ಬಿಟ್ಟ ಪಾತ್ರ ದೇವ್‌ ಪಟೇಲ್‌ಗೆ ಸಿಕ್ಕಿದೆ. ಶ್ರೀಪತಿ (Sripati) ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

Benki Movie First Look: ಅನೀಶ್‌ ತೇಜೇಶ್ವರ್‌ ಹೊಸ ಚಿತ್ರದ ಪೋಸ್ಟರ್ ರಿಲೀಸ್

ಸ್ಪಿನ್ ಮಾಂತ್ರಿಕ ಜೀವನಾಧಾರಿತ ಚಿತ್ರವನ್ನು ಮೂವಿ ಟ್ರೈನ್ ಮೋಶನ್ ಪಿಕ್ಚರ್ಸ್ (Movie Train Motion Pictures) ಹಾಗೂ ದಾರ್ ಮೋಶನ್ ಪಿಕ್ಚರ್ಸ್ (DAR Motion Pictures) ನಿರ್ಮಾಣ ಮಾಡುತ್ತಿದ್ದು, ಮುತ್ತಯ್ಯ ಮುರಳೀಧರನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಮಾಡಿದ ಹರಸಾಹಸ, ಬಡತನ, ಬದುಕಿನ ಕಠಿಣ ಹಾದಿ, ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಿಗ್ಗಜನಾಗಿ ಮೆರೆದ ಮುರಳೀಯ ಸಾಹಸಗಾಥೆ ಒಳಗೊಂಡಿರಲಿದೆ. 

ಇನ್ನು ಮುರಳೀಧರನ್ ವೈವಾಹಿಕ ಜೀವನವೂ ಈ ಬಯೋಪಿಕ್‌ನಲ್ಲಿರಲಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ 800 ವಿಕೆಟ್ ಕಬಳಿಸಿ ಅಗ್ರಸ್ಥಾನದಲ್ಲಿರುವ ಮುತ್ತಯ್ಯ ಮುರಳೀಧರನ್ ಏಕದಿನ ಕ್ರಿಕೆಟ್‌ನಲ್ಲಿ 534 ವಿಕೆಟ್ ಕಬಳಿಸೋ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಈ ದಾಖಲೆ ಬ್ರೇಕ್ ಮಾಡುವುದು ಅಸಾಧ್ಯವಾಗಿದೆ. 800 ಸಿನಿಮಾವು ಪ್ರಾಥಮಿಕ ಹಂತದಲ್ಲಿ ತಮಿಳಿನಲ್ಲಿ ಮಾಡಲು ಚಿಂತಿಸಲಾಗಿದ್ದು, ಬಳಿಕ ದಕ್ಷಿಣ ಭಾರತದ ಎಲ್ಲಾ ಭಾಷೆಗಳು ಸೇರಿದಂತೆ ಹಿಂದಿ, ಬಂಗಾಳಿ ಹಾಗೂ ಸಿಂಹಳೀಸ್‌ನಲ್ಲೂ ಡಬ್ಬಿಂಗ್ (Dubbing) ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಇನ್ನು ಇತ್ತೀಚೆಗಷ್ಟೇ ಭಾರತದ ಕ್ರಿಕೆಟ್‌ಗೆ ಜನಪ್ರಿಯತೆಯ ಹೊಸ ರೂಪ ಕೊಟ್ಟ, ಭಾರತೀಯ ಕ್ರಿಕೆಟ್‌ನ ಅತಿದೊಡ್ಡ ಆರಂಭಿಕ ಮೈಲುಗಲ್ಲಾದ 1983 ಏಕದಿನ ಕ್ರಿಕೆಟ್‌ ವಿಶ್ವಕಪ್‌ (1983 World Cup) ಗೆದ್ದ ರೋಚಕ ಕಥೆಯನ್ನು ಆಧರಿಸಿದ ಸಿನಿಮಾ ‘83’ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಬಾಲಿವುಡ್ ನಟ ರಣವೀರ್‌ಸಿಂಗ್‌ (Ranveer Singh), ಕಪಿಲ್‌ದೇವ್‌ (Kapil Dev) ಪಾತ್ರ ನಿರ್ವಹಿಸಿದ್ದರು. 

English Manja Teaser: ಪ್ರಮೋದ್ ಚಿತ್ರದ ಟೀಸರ್ ರಿಲೀಸ್ ಮಾಡಿದ ದುನಿಯಾ ಸೂರಿ!

ಕಪಿಲ್‌ ಪತ್ನಿ ರೋಮಿ ಪಾತ್ರವನ್ನು ಸ್ವತಃ ರಣವೀರ್‌ ಪತ್ನಿ ದೀಪಿಕಾ ಪಡುಕೋಣೆ (Deepika Padukone) ಕಾಣಿಸಿಕೊಂಡಿದ್ದರು. 'ಭಜರಂಗಿ ಭಾಯಿಜಾನ್‌' ಖ್ಯಾತಿಯ ಕಬೀರ್‌ ಖಾನ್‌ (Kabir Khan) ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಪಂಕಜ್ ತ್ರಿಪಾಠಿ, ಬೊಮನ್ ಇರಾನಿ, ಹಾರ್ಡಿ ಸಂಧು, ಆಮಿ ವಿರ್ಕ್ ಸೇರಿ ಹಲವಾರು ಕಲಾವಿದರು ಕಾಣಿಸಿಕೊಂಡಿದ್ದರು.

Follow Us:
Download App:
  • android
  • ios