200 ಕೋಟಿ ರೂಪಾಯಿಗೂ ಅಧಿಕ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಬಾಲಿವುಡ್ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ದೆಹಲಿಯ ಪಟಿಯಾಲ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಸೆಪ್ಟಂಬರ್ 26ರಂದು ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. 

200 ಕೋಟಿ ರೂಪಾಯಿಗೂ ಅಧಿಕ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಬಾಲಿವುಡ್ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ದೆಹಲಿಯ ಪಟಿಯಾಲ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಸೆಪ್ಟಂಬರ್ 26ರಂದು ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಸುಕೇಶ್ ಚಂದ್ರಶೇಖರ್‌ಗೆ ಸಂಬಂಧಿಸಿದ ಬಹುಕೋಟಿ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಆರೋಪಿ ಎಂದು ಹೆಸರಿಸಿ ಜಾರಿ ನಿರ್ದೇಶನಾಲಯ (ಇಡಿ) ಆರೋಪಟ್ಟಿ ಸಲ್ಲಿಸಿದೆ. ಬೆಂಗಳೂರು ಮೂಲದ ಸುಕೇಶ್‌ ಚಂದ್ರಶೇಖರ್‌ ನಡೆಸಿರುವ 200 ಕೋಟಿ ರೂಪಾಯಿಗೂ ಅಧಿಕ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್‌ 10 ಕೋಟಿ ಮೌಲ್ಯದ ಉಡುಗೊರೆ ನೀಡಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು. ಸುಕೇಶ್ ಚಂದ್ರಶೇಖರ್, ರಾನ್‌ಬಾಕ್ಸಿಯ ಮಾಜಿ ಪ್ರವರ್ತಕ ಅದಿತಿ ಸಿಂಗ್ ಮತ್ತು ಶಿವಿಂದರ್ ಸಿಂಗ್ ಅವರಿಗೆ ವಂಚನೆ ಮಾಡಿದ ಆರೋಪದ ಮೇರೆಗೆ ದೆಹಲಿ ಪೊಲೀಸರು ಸುಕೇಶನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಚಂದ್ರಶೇಖರ್ ಹೊರತುಪಡಿಸಿ ಇಡಿ ಈ ಪ್ರಕರಣದಲ್ಲಿ ಅವರ ಪತ್ನಿ ಲೀನಾ ಮರಿಯಾ ಪಾಲ್, ಪಿಂಕಿ ಇರಾನಿ ಸೇರಿದಂತೆ ಎಂಟು ಜನರನ್ನು ಬಂಧಿಸಿದ್ದು ದೆಹಲಿ ನ್ಯಾಯಾಲಯಕ್ಕೆ ಎರಡು ಚಾರ್ಜ್ ಶೀಟ್‌ಗಳನ್ನು ಸಲ್ಲಿಸಿದೆ.

ಇಡಿ ವಿಚಾರಣೆ ವೇಳೆ ಜಾಕ್ವೆಲಿನ್ ಹೇಳಿದ್ದೇನು?

ಸನ್‌ ಟಿವಿ ಮಾಲೀಕ ಹಾಗೂ ಜಯಲಲಿತಾ ಅವರ ಸೋದರಳಿಯ ಎಂದು ಪರಿಚಯಿಸಿಕೊಂಡಿದ್ದ ಎಂದು ನಟಿ ಜಾಕ್ವೆಲಿನ್‌ ಫರ್ನಾಂಡೀಸ್‌ ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದ್ದಾರೆ. 'ಸುಕೇಶ್ ತನ್ನನ್ನು ಶೇಖರ್ ರತ್ನ ವೇಲಾ ಎಂದು ಪರಿಚಯಿಸಿಕೊಂಡರು ಮತ್ತು ಸನ್ ಟಿವಿಯ ಮಾಲೀಕ ಮತ್ತು ಜಯಲಲಿತಾ ಅವರ ಸೋದರಳಿಯ ಎಂದು ಪರಿಚಯಿಸಿಕೊಂಡಿದ್ದರು ಎಂದು ರಾ..ರಾ..ರಕ್ಕಮ್ಮ ನಟಿ ಮುಖಾಮುಖಿ ವಿಚಾರಣೆಯ ಸಮಯದಲ್ಲಿ ಸುಕೇಶ್ ಚಂದ್ರಶೇಖರ್ ಬಗ್ಗೆ ಬಾಯ್ಬಿಟ್ಟಿದ್ದಾರೆ.

ವಿಚಾರಣೆ ಸಮಯದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್, ಇಬ್ಬರೂ ಚೆನ್ನೈನಲ್ಲಿ ಕೇವಲ ಎರಡು ಬಾರಿ ಭೇಟಿಯಾದರು ಮತ್ತು ಸುಮಾರು ಆರು ತಿಂಗಳ ಕಾಲ ದೂರವಾಣಿ ಸಂಪರ್ಕದಲ್ಲಿದ್ದೆವು ಎಂದು ಹೇಳಿಕೊಂಡರು. ಫೆಬ್ರವರಿ 2021 ರಿಂದ ಆಗಸ್ಟ್ 2021 ರವರೆಗೆ ಫೋನ್‌ನಲ್ಲಿ ಮಾತನಾಡಿರುವುದಾಗಿ ಜಾಕ್ವೆಲಿನ್ ಫರ್ನಾಂಡೀಸ್ ಹೇಳಿದರು. ಆದರೆ ಸೇಕೇಶ್ ಚಂದ್ರಶೇಖರ್ ಜನವರಿ-2021 ರಿಂದ ಆಗಸ್ಟ್ 2021 ರವರೆಗೆ ಎಂದು ಹೇಳಿದರು.

ಸನ್ ಟಿವಿ ಮಾಲಿಕ, ಜಯಲಲಿತಾ ಅಳಿಯ ಎಂದು ಹೇಳಿದ್ದ; ಸುಕೇಶ್ ಚಂದ್ರಶೇಖರ್ ಬಗ್ಗೆ ಬಾಯ್ಬಿಟ್ಟ ನಟಿ ಜಾಕ್ವೇಲಿನ್

 ಪ್ರಕರಣದ ಬಗ್ಗೆ ಜಾಕ್ವೆಲಿನ್ ಫರ್ನಾಂಡಿಸ್ ಪೋಸ್ಟ್ 

ಚಾರ್ಜ್ ಶೀಟ್ ಬಳಿಕ ಜಾಕ್ವೆಲಿನ್ ಫರ್ನಾಂಡಿಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಇದು ನನಗೆ ಪರೀಕ್ಷೆಯ ಸಮಯವಾಗಿದ್ದು, ಮತ್ತಷ್ಟು ಬಲಿಷ್ಠವಾಗುವುದಾಗಿ ಹೇಳಿದ್ದರು. ಡಿಯರ್ ಮಿ ಎಂದು ಪೋಸ್ಟ್ ಆರಂಭಿಸಿರುವ ಜಾಕ್ವೆಲಿನ್, ನಾನು ಬಲಿಷ್ಠವಾಗಿದ್ದೇನೆ, ನನ್ನನ್ನು ನಾನು ಒಪ್ಪಿಕೊಳ್ಳುತ್ತೇನೆ, ಎಲ್ಲವೂ ಸರಿಯಾಗಲಿದೆ. ನಾನು ನನ್ನ ಗುರಿಯನ್ನು ಸಾಧಿಸುತ್ತೇನೆ, ಕನಸನ್ನು ನನಸಾಗಿಸುತ್ತೇನೆ, ನನಗದು ಸಾಧ್ಯವಿದೆ ಎಂದು ಹೇಳಿಕೊಂಡಿದ್ದರು.

ಸಂಕಷ್ಟ ಬಂದಾಗ ಮಾತ್ರ ದೇವರು ನೆನಪಾಗೋದಾ; ದೇವಸ್ಥಾನದಲ್ಲಿ ಕಾಣಿಸಿಕೊಂಡ ನಟಿ ಜಾಕ್ವೆಲಿನ್ ಹಿಗ್ಗಾಮುಗ್ಗಾ ಟ್ರೋಲ್

ಸಿನಿಮಾಗಳು 

ಜಾಕ್ವೆಲಿನ್ ಫರ್ನಾಂಡಿಸ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀಲಂಕಾದ ಈ ಸುಂದರಿ ಕೊನೆಯದಾಗಿ ಕನ್ನಡದ ವಿಕ್ರಾಂತ್ ರೋಣ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದ ರಾ..ರಾ.. ರಕ್ಕಮ್ಮ ಹಾಡು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಸುದೀಪ್ ಜೊತೆ ಮೊದಲ ಬಾರಿಗೆ ಹೆಜ್ಜೆ ಹಾಕುವ ಮೂಲಕ ಜಾಕ್ವೆಲಿನ್ ಸ್ಯಾಂಡಲ್ ವುಡ್‌ಗೆ ಕಾಲಿಟ್ಟಿದ್ದರು. ಸದ್ಯ ಜಾಕ್ವೆಲಿನ್ ಸರ್ಕಸ್, ರಾಮ್ ಸೇತು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.