ಬಿ-ಟೌನ್ ಕ್ಯೂಟ್‌ ಆ್ಯಂಡ್ ಡಿಫರೆಂಟ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಸಿಂಪಲ್ಲಾಗಿ ಹಾಗೂ ಧಾರ್ಮಿಕ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ಈ ಶುಭ ಸಮಾರಂಭದಲ್ಲಿ ಇಬ್ಬರ ಕುಟುಂಬದವರು ಭಾಗಿಯಾಗಿದ್ದಾರೆ.

ದೀಪಿಕಾ ಬಳಸೋ ಬ್ಯಾಗಲ್ಲಿ ಬಡವರಿಗೆ ಒಂದು ಮನೆಯನ್ನೇ ಕಟ್ಟಿಸ್ಕೊಡ್ಬೋದು!

ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು ಆನಂತರ ಕುಟುಂಬಸ್ಥರ ಒಪ್ಪಿಗೆ ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಿಪ್ಪಿ ಹಾಗೂ ರಣವೀರ್ ಬಾಲಿವುಡ್‌ ಕಪಲ್‌ ಲಿಸ್ಟ್‌ನಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕಳೆದ ವರ್ಷ ಇಟಲಿಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮದುವೆ ನಡೆದಿದ್ದು ಮುಂಬೈ ಹಾಗೂ ಬೆಂಗಳೂರಿನಲ್ಲಿ ಆರತಕ್ಷತೆ ನಡೆದಿತ್ತು.

ಸಮಾರಂಭದಲ್ಲಿ ಕುಣಿಯಲು ರಣವೀರ್ ರೆಡಿ: ಬುಕ್ಕಿಂಗ್‌ ಹೆಂಡ್ತಿನೇ ಮಾಡ್ಬೇಕು!

ಮೊದಲ ವಿವಾಹ ವಾರ್ಷಿಕೋತ್ಸವವನ್ನು ಹೇಗೆ ಆಚರಿಸಿಕೊಳ್ಳುತ್ತಾರೆ ಎಂದು ಅಭಿಮಾನಿಗಳಲ್ಲಿ ಮೂಡಿದ ಕುತೂಹಲಕ್ಕೆ ತಿರುಪತಿ ಭೇಟಿ ಉತ್ತರ ಕೊಟ್ಟಿದೆ. ಇಬ್ಬರು ಕುಟುಂಬ ಸಮೇತರಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ. ಕೆಂಪು ಸೀರೆಯಲ್ಲಿ ಕಂಗೊಳಿಸುತ್ತಿರುವ ಡಿಂಪಲ್ ಹುಡುಗಿ ಗೋಲ್ಡ್‌ ಶೇರ್‌ವಾನಿಯಲ್ಲಿ ಹ್ಯಾಂಡ್ಸಂ ಆಗಿ ಮಿಂಚುತ್ತಿರುವ ರಣವೀರ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

'ಇವತ್ತು ನಾವು ನಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಾನದಲ್ಲಿ ಆಚರಿಸಿಕೊಂಡಿದ್ದೀವಿ. ನಿಮ್ಮೆಲ್ಲರ ಪ್ರೀತಿ, ಆರೈಕೆ ಹಾಗೂ ಆಶೀರ್ವಾದಕ್ಕೆ ನಾನು ಚಿರಋಣಿ. ಥ್ಯಾಂಕ್ಸ್' ಎಂದು ಬರೆದುಕೊಂಡಿದ್ದಾರೆ.

ಯಾವುದೇ ಶುಭ ಕಾರ್ಯಕ್ರಮದಲ್ಲಿ ಭಾಗಿಯಾದರೂ ತಮ್ಮ ಮನೆಯ ಕಾರ್ಯಕ್ರಮದಂತೆ ಭಾವಿಸಿ ಭಾಗಿ ಆಗುತ್ತಾರೆ ಅಷ್ಟೇ ಅಲ್ಲದೆ ಇಬ್ಬರಿಗೂ ಮೋಜು-ಮಸ್ತಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ದೀಪಿಕಾ ಮತ್ತು ರಣವೀರ್ ಕಪಲ್‌ ಗೋಲ್ಸ್‌ ಕೊಡುವುದರಲ್ಲಿ ಅನುಮಾನವಿಲ್ಲ.