ಬಿಕಿನಿಯಲ್ಲಿ ದೀಪಿಕಾ ಫೋಟೋ ಶೇರ್​: ದಂಗಾದ ಪತಿ ರಣವೀರ್​ ಕೊಟ್ಟ ಕಮೆಂಟ್​ ಏನು?

ನಟಿ ದೀಪಿಕಾ ಪಡುಕೋಣೆ ಬಿಕಿನಿ ಫೋಟೋ ಒಂದನ್ನು ಶೇರ್​ ಮಾಡಿದ್ದು, ಇದನ್ನು ನೋಡಿ ಖುದ್ದು ರಣವೀರ್​ ಸಿಂಗ್​ ದಂಗಾಗಿದ್ದಾರೆ. ಅವರು ಹೇಳಿದ್ದೇನು? 
 

Deepika Posted  Pic A Warning Would Have Been Nice Commented Ranveer Singh suc

ಪಠಾಣ್​ (Pathaan) ಯಶಸ್ಸಿನ ಖುಷಿಯಲ್ಲಿದ್ದಾರೆ ದೀಪಿಕಾ ಪಡುಕೋಣೆ. ಈ ಚಿತ್ರದಲ್ಲಿನ ಬೇಷರಂ ರಂಗ್​ ಹಾಡಿನಲ್ಲಿ ಇವರು ತೊಟ್ಟಿದ್ದ ಬಿಕಿನಿ ಅದೆಷ್ಟು ಹಲ್​ಚಲ್​ ಸೃಷ್ಟಿಸಿತ್ತು ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ನಂತರ ಆ ದೃಶ್ಯವನ್ನೇ ಕಟ್​ ಮಾಡಬೇಕಾಗಿ ಬಂದಿತ್ತು. ಇದರ ಹೊರತಾಗಿಯೂ ದೀಪಿಕಾ ಈ ಚಿತ್ರದಲ್ಲಿ ಹಾಟ್​, ಬೋಲ್ಡ್​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ನಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ನಡುವೆಯೇ ಸೋಷಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿದ್ದಾರೆ. ಇದೀಗ ನಟಿ  Deepika Padukone ಅವರು ಇನ್​ಸ್ಟಾಗ್ರಾಮ್​ನಲ್ಲಿ  ಹೊಸ ಫೋಟೋ ಶೇರ್​ ಮಾಡಿಕೊಂಡಿದ್ದರು, ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಟ್​ ಅವತಾರಕ್ಕೆ ಅವರು ಟ್ರೋಲ್​ ಆಗುತ್ತಿದ್ದರೆ, ಕೆಲವರು ಭೇಷ್​ ಭೇಷ್​ ಎನ್ನುತ್ತಲಿದ್ದಾರೆ.

ಬ್ಲ್ಯಾಕ್​ ಆ್ಯಂಡ್​ ವೈಟ್​ ಬಿಕಿನಿ  ಇದಾಗಿದ್ದು,  ಇದಕ್ಕೆ ಥಹರೇವಾರಿ ಕಮೆಂಟ್​ಗಳು ಬರುತ್ತಿವೆ. ಬ್ಲ್ಯಾಕ್​ ಅಂಡ್​ ವೈಟ್​ ಬಿಕಿನಿ ಧರಿಸಿರುವ ನಟಿ ದೀಪಿಕಾ ಪಡುಕೋಣೆ , ‘ಒಂದಾನೊಂದು ಕಾಲದಲ್ಲಿ. ತುಂಬಾ ಹಿಂದೆ ಅಲ್ಲ’ ಎಂದು ಫೋಟೋಗೆ ಕ್ಯಾಪ್ಶನ್ ನೀಡಿದ್ದಾರೆ. ದೀಪಿಕಾ ಪಡುಕೋಣೆ ಬೋಲ್ಡ್ ಅವತಾರಕ್ಕೆ ಲೈಕ್​ ಗಳ ಸುರಿಮಳೆ ಆಗ್ತಿದೆ. ಈ ಫೋಟೋ ವೈರಲ್​ ಆಗಿದ್ದು, ಒಂದು ಗಂಟೆಯೊಳಗೆ 7 ಲಕ್ಷಕ್ಕೂ (Seven lakhs) ಅಧಿಕ ಮಂದಿ ಇದನ್ನು ಲೈಕ್​ ಮಾಡಿದ್ದಾರೆ. ಈ ಫೋಟೋ ಶೇರ್​ ಮಾಡುವ ಬಗ್ಗೆ ಪತಿ ರಣವೀರ್​ ಸಿಂಗ್​ ಅವರಿಗೂ ಸೂಚನೆ ಇರಲಿಲ್ವಂತೆ. ಅದಕ್ಕಾಗಿ ಈ ಫೋಟೋ ನೋಡಿ ಅವರೂ ಸಕತ್​ ಅಚ್ಚರಿ ಪಟ್ಟುಕೊಂಡಿದ್ದಾರೆ. ಫೋಟೋಗೆ ಕಮೆಂಟ್​ ಹಾಕಿರುವ ಅವರು, ಫೋಟೋ ಹಾಕುವ ಮೊದಲು ಒಂದು ಎಚ್ಚರಿಕೆ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು  ಕಮೆಂಟ್​ ಮಾಡಿದ್ದಾರೆ. 

Viral Vedio: ಫ್ಲರ್ಟ್​ ಮಾಡಲು ಬಂದ ಶಾರುಖ್​ಗೆ ವಯಸ್ಸಿನ ಅಂತರ ನೆನಪಿಸಿದ ​ದೀಪಿಕಾ

ಕೆಲ ವರ್ಷಗಳ ಡೇಟಿಂಗ್ (dating) ಬಳಿಕ ದೀಪಿಕಾ ಮತ್ತು ರಣವೀರ್ ಸಿಂಗ್ 2018 ರಲ್ಲಿ ವಿವಾಹವಾದರು. ಮದುವೆ ಬಳಿಕವೂ ದಂಪತಿ ತಮ್ಮ ಸಿನಿಮಾ ಮೂಲಕ ಫೇಮಸ್ ಆದ್ರು. ಡಿಸೆಂಬರ್ 2022 ರಲ್ಲಿ ಬಿಡುಗಡೆಯಾದ 'ಸರ್ಕಸ್' ಚಿತ್ರವು ಈ ಜೋಡಿಯ ಕೊನೆಯ ಸಿನಿಮಾ ಆಗಿದೆ. ಇನ್ನು ದೀಪಿಕಾ ಸಿನಿ ಕರೀಯರ್​ ಕುರಿತು ಹೇಳುವುದಾದರೆ,   'ಓಂ ಶಾಂತಿ ಓಂ' ಚಿತ್ರದ ಮೂಲಕ ದೀಪಿಕಾ ಬಾಲಿವುಡ್​ಗೆ ಪದಾರ್ಪಣೆ  ಮಾಡಿದ್ದರು. ಮಾಡೆಲ್ ಆಗಿದ್ದ ಇವರು ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು. 2ನೇ ಸಿನಿಮಾಗೆ ಶಾರುಖ್ ಖಾನ್ ಜೊತೆ ನಟಿಸುವ ಅವಕಾಶ ಸಿಕ್ಕಿತು. ಓಂ ಶಾಂತಿ ಓಂ ಸಿನಿಮಾ ಸೂಪರ್ ಹಿಟ್ ಆಗ್ತಿದ್ದಂತೆ ದೀಪಿಕಾ ರೇಂಜ್ ಬದಲಾಯ್ತು. ಇದೀಗ ಬಾಲಿವುಡ್ ಟಾಪ್ ನಟಿಯಾಗಿ ದೀಪಿಕಾ ಪಡುಕೋಣೆ ಮಿಂಚುತ್ತಿದ್ದಾರೆ. ಸದ್ಯ ಪಠಾಣ್​ ಯಶಸ್ಸಿನ ಬೆನ್ನಲ್ಲೇ ನಟಿ ‘ಜವಾನ್​’ ಸಿನಿಮಾಕ್ಕೆ ಕಾಯುತ್ತಿದ್ದಾರೆ.  ಶಾರುಖ್​ ಖಾನ್​ ನಟನೆಯ ಆ ಸಿನಿಮಾ ಸೆಪ್ಟೆಂಬರ್​ 7ರಂದು ತೆರೆಕಾಣಲಿದೆ. 

ಪ್ರಭಾಸ್​ ಅಭಿನಯದ ‘ಕಲ್ಕಿ 2898 ಎಡಿ’ ಚಿತ್ರಕ್ಕೂ ದೀಪಿಕಾ (Deepika Padukone) ನಾಯಕಿ ಆಗಿದ್ದಾರೆ. ಇತ್ತೀಚೆಗೆ ಈ ಸಿನಿಮಾದಲ್ಲಿನ ಅವರ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಆಯಿತು. ಆದರೆ ದೀಪಿಕಾ ಅವರು ಅದನ್ನು ಪ್ರಮೋಟ್​ ಮಾಡಿಲ್ಲ. ಹಾಲಿವುಡ್​ ಕಲಾವಿದರು ಮತ್ತು ಬರಹಗಾರರ ಮುಷ್ಕರ ನಡೆಯುತ್ತಿದ್ದು, ಅದರಲ್ಲಿ ದೀಪಿಕಾ ಕೂಡ ಭಾಗಿ ಆಗಿರುವುದರಿಂದ ಅವರು ತಮ್ಮ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಭಾಗಿ ಆಗಿರಲಿಲ್ಲ.

ದೀಪಿಕಾ ಪಡುಕೋಣೆ ಇದ್ಯಾವ ಯೋಗದ ಪೋಸ್ ಅಂತ​ ಕೇಳಿದ್ರೆ ನೆಟ್ಟಿಗರು ಹೀಗೆಲ್ಲಾ ಹೇಳೋದಾ?

  

Latest Videos
Follow Us:
Download App:
  • android
  • ios