ದೀಪಿಕಾ ಪಡುಕೋಣೆ (Deepika Padukone) ಬಿಟೌನ್ ಮೋಸ್ಟ್ ಬ್ಯೂಟಿಫುಲ್ ಮತ್ತು ಸೆಕ್ಸೀ ನಟಿ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಆದ್ರೆ ಗೆಹ್ರೈಯಾನ್ (Gehraiyaan) ಚಿತ್ರದಲ್ಲಿ ಹಾಟ್ ಹಾಟ್ (Hot) ಆಗಿ ನಟಿಸಿರೋ ಈ ನಟಿಗೆ ಸ್ತನ ಕಸಿ ಮಾಡಿಕೊಳ್ಳುವಂತೆ ಯಾರೋ ಸಲಹೆ ಕೊಟ್ಟಿದ್ರಂತೆ.

ಬಾಲಿವುಡ್ ನಟಿಯರ ಲೈಫ್‌ಸ್ಟೈಲ್ (Lifestyle) ಎಲ್ಲರಂಥಲ್ಲ. ಅದು ಬೇರೆಯದ್ದೇ ಲೋಕ. ಡಿಸೈನರ್ ಡ್ರೆಸ್, ಸೆಲೆಬ್ರಿಟಿ ಆರ್ಟಿಸ್ಟ್ ಮೇಕಪ್, ನ್ಯೂಟ್ರಿಷಿಯನ್ ಸಜೆಸ್ಟೆಡ್ ಫುಡ್ ಎಲ್ಲಾನೂ ಲಕ್ಸುರಿಯಸ್. ವಯಸ್ಸಾದರೂ ಯಂಗ್ ಆಗಿ ಕಾಣುವ ಸೆಲೆಬ್ರಿಟಿಗಳು ಅದಕ್ಕಾಗಿ ಯೋಗ, ಜಿಮ್ ಎಂದು ಹಲವರು ವಿಧಾನಗಳನ್ನು ಅನುಸರಿಸುತ್ತಾರೆ. ಅಷ್ಟೇ ಅಲ್ಲ ಇನ್ನಷ್ಟು ಸುಂದರವಾಗಿ ಕಾಣೋಕೆ, ಉತ್ತಮ ಬಾಡಿ ಶೇಪ್ ಪಡೆಯೋಕೆ ಆಪರೇಷನ್‌ (Operation)ಗಳನ್ನು ಸಹ ಮಾಡಿಕೊಳ್ತಾರೆ. ಸೆಲೆಬ್ರಿಟಿಗಳು ಮೂಗು, ಕೆನ್ನೆ, ಸ್ತನ ಹೀಗೆ ದೇಹದ ಹಲವಾರು ಭಾಗಗಳ ಸರ್ಜರಿ ಮಾಡಿಸುವ ಬಗ್ಗೆ ನೀವು ಕೇಳಿರಬಹುದು. ಬಾಲಿವುಡ್ ನಟಿ ದೀಪಿಕಾಗೂ ಈ ರೀತಿ ಮಾಡಿಕೊಳ್ಳುವಂತೆ ಸಲಹೆ ಬಂದಿತ್ತಂತೆ.

ದೀಪಿಕಾ ಪಡುಕೋಣೆ. ಬಾಲಿವುಡ್‌ನ ಮೋಸ್ಟ್ ಬ್ಯೂಟಿಫುಲ್ ಮತ್ತು ಸೆಕ್ಸೀ ನಟಿ. ‘ಓಂ ಶಾಂತಿ ಓಂ’ ಚಿತ್ರದ ಮೂಲಕ ನಟನೆ ಆರಂಭಿಸಿದ ಈ ನಟಿ ಅಲ್ಲಿಂದ ತೊಡಗಿ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡಿದವರು. ದೀಪಿಕಾ 2007ರಲ್ಲಿ ನಟರಾದ ಶಾರುಖ್ ಖಾನ್ ಮತ್ತು ಅರ್ಜುನ್ ರಾಂಪಾಲ್ ಅವರೊಂದಿಗೆ ಫರಾ ಖಾನ್ ನಿರ್ದೇಶನದ ಓಂ ಶಾಂತಿ ಓಂ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆಗ ದೀಪಿಕಾಗೆ 21 ವರ್ಷ. ನಂತರ ಅವರು ಯೇ ಜವಾನಿ ಹೈ ದೀವಾನಿ, ಚೆನ್ನೈ ಎಕ್ಸ್‌ಪ್ರೆಸ್, ಹ್ಯಾಪಿ ನ್ಯೂ ಇಯರ್, ಬಾಜಿರಾವ್ ಮಸ್ತಾನಿ ಮತ್ತು ಪದ್ಮಾವತ್‌ನಂತಹ ಚಿತ್ರಗಳಲ್ಲಿ ಕಾಣಿಸಿಕೊಂಡರು.

ಏನಮ್ಮ ಬ್ಯಾಗ್‌ ಇಟ್ಕೊಳಕ್ಕೆ ಅಗೋಲ್ಲ ಈಗ ಮಾಸ್ಕ್‌ ಕೂಡಾನಾ?; ನಟಿ Deepika Padukone ಟ್ರೋಲ್!

ದೀಪಿಕಾ ತಮ್ಮ ಕೆರಿಯರ್‌ನಲ್ಲೇ ಹೆಚ್ಚು ಬೋಲ್ಡ್ ಆಗಿ ನಟಿಸಿರುವ 'ಗೆಹ್ರೈಯಾನ್’(Gehraiyaan) ಈಗಾಗ್ಲೇ ರಿಲೀಸ್ ಆಗಿದೆ. ಚಿತ್ರದ ಕುರಿತು ಪ್ರೇಕ್ಷಕರಿಂದ ಅಷ್ಟೇನು ಉತ್ತಮ ಪ್ರತಿಕ್ರಿಯೆ ಬರದಿದ್ದರೂ, ದೀಪಿಕಾ ಪಡುಕೋಣೆ ಅಭಿನಯ ಮಾತ್ರ ಮೆಚ್ಚುಗೆಗೆ ಪಾತ್ರವಾಗಿದೆ. ಆದ್ರೆ ಪರ್ಫೆಕ್ಟ್ ಎನಿಸಿಕೊಳ್ಳುವ ಹೈಟ್ , ವೈಟ್ ಇದ್ದು ಬ್ಯೂಟಿಫುಲ್ ಎನಿಸಿಕೊಂಡಿರುವ ದೀಪಿಕಾ ಪಡುಕೋಣೆಗೂ ಸ್ತನ ದೊಡ್ಡದು ಮಾಡಿಸಿಕೊಳ್ಳುವಂತೆ ಯಾರೋ ಸಲಹೆ ಕೊಟ್ಟಿದ್ರಂತ.

ದೀಪಿಕಾ ಪಡುಕೋಣೆ ಕೇವಲ 18 ವರ್ಷದವಳಿದ್ದಾಗ ತನಗೆ ಸ್ತನ (Breast) ಅಳವಡಿಸುವಂತೆ ಯಾರೋ ಸಲಹೆ ನೀಡಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಮಾತ್ರವಲ್ಲ ಆ ಸಲಹೆಯನ್ನು ಗಂಭೀರವಾಗಿ ಪರಿಗಣಿಸದಿರುವುದು ಸಂತಸ ತಂದಿದೆ ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.

ಶಕುನ್ ಬಾತ್ರಾ ನಿರ್ದೇಶನದ ಗೆಹ್ರೈಯಾನ್‌ನಲ್ಲಿನ ಪಾತ್ರಕ್ಕಾಗಿ ನಟಿ ದೀಪಿಕಾ ಪಡುಕೋಣೆ ಮೆಚ್ಚುಗೆಯನ್ನು ಪಡೆಯುತ್ತಿದ್ದಾರೆ. ಚಿತ್ರದ ಕುರಿತಾಗಿ ನಡೆಸಿದ ಸಂಭಾಷಣೆಯಲ್ಲಿ ದೀಪಿಕಾ ಅವರು ಜನರಿಂದ ಪಡೆದ ಉತ್ತಮ ಮತ್ತು ಕೆಟ್ಟ ಸಲಹೆಗಳನ್ನು ಬಹಿರಂಗಪಡಿಸಿದ್ದಾರೆ. ಕೆಟ್ಟದ್ದನ್ನು ನೆನಪಿಸಿಕೊಳ್ಳುತ್ತಾ, 18 ವರ್ಷ ವಯಸ್ಸಿನವನಾಗಿದ್ದಾಗ ಸ್ತನ ಕಸಿ ಮಾಡಲು ಯಾರೋ ಶಿಫಾರಸು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಲಿಪ್ ಲಾಕ್ ಮಾಡುವ ಮೂಲಕ ಪತ್ನಿ Deepika Padukone ಕೆಲಸ ಹೊಗಳಿದ ರಣವೀರ್‌

ಜೀವನದಲ್ಲಿ ಕೇಳಿದ ಅತ್ಯುತ್ತಮ ಮತ್ತು ಕೆಟ್ಟ ಸಲಹೆಯ ಕುರಿತು ಕೇಳಿದಾಗ ಮಾತನಾಡಿದ ದೀಪಿಕಾ, 'ಶಾರೂಕ್ ಖಾನ್ (Shah Rukh Khan) ಉತ್ತಮ ಸಲಹೆ ನೀಡುತ್ತಾರೆ. ನಾನು ಅವರಿಂದ ಬಹಳಷ್ಟು ವಿಚಾರಗಳನ್ನು ಪಡೆದುಕೊಂಡಿದ್ದೇನೆ ಎಂದು ತಿಳಿಸಿದರು. ಶಾರೂಕ್ ಖಾನ್ ನೀವು ಜೀವನದಲ್ಲಿ ಯಶಸ್ಸನ್ನು ಪಡೆಯಲಿದ್ದೀರಿ. ಸಿನಿಮಾದಲ್ಲಿ ಕೆಲಸ ಮಾಡುವುದೆಂದರೆ ನೀವು ಜನರೊಂದಿಗೆ ಕೆಲಸ ಮಾಡುವುದು. ನೆನಪುಗಳನ್ನು ಹೊಂದುವುದು’ ಎಂದು ಹೇಳಿದ್ದರು ಎಂದು ದೀಪಿಕಾ ತಿಳಿಸಿದರು.

ನಾನು ಸ್ವೀಕರಿಸಿದ ಕೆಟ್ಟ ಸಲಹೆಯೆಂದರೆ ಸ್ತನ ಕಸಿ ಮಾಡುವುದು. ನಾನು 18 ವರ್ಷ ವಯಸ್ಸಿನವಳಾಗಿದ್ದೆ. ಆಗ ಯಾರೋ ಸ್ತನ ಕಸಿ ಮಾಡಿಕೊಂಡು ದೊಡ್ಡದಾಗಿ ಮಾಡಿಕೊಳ್ಳುವಂತೆ ಹೇಳಿದರು. ಇದನ್ನು ಗಂಭೀರವಾಗಿ ಪರಿಗಣಿಸದ ಬುದ್ಧಿವಂತಿಕೆ ನನಗೆ ಹೇಗೆ ಬಂತು ಎಂದು ನಾನು ಈಗ ಆಶ್ಚರ್ಯ ಪಡುತ್ತೇನೆ ಎಂದರು.