ಬಾಲಿವುಡ್‌ ಬಣ್ಣದ ಲೋಕದಲ್ಲಿ ವೃತ್ತಿಯನ್ನು ಬಿಗಿ ಮಾಡಿಕೊಳ್ಳುವುದು ಎಷ್ಟು ಮುಖ್ಯವೋ ರಿಲೇಶನ್ ಶಿಪ್‌ ಬಿಗಿ ಮಾಡಿಕೊಳ್ಳುವುದು ಅಷ್ಟೇ ಮುಖ್ಯ. ಹಲವಾರು ವರ್ಷಗಳಿಂದ ಗಾಸಿಪ್‌ಗೆ ಆಹಾರವಾಗಿರುವ ಆಲಿಯಾ ಭಟ್ ಮತ್ತು ರಣಬೀರ್‌ ಕಪೂರ್‌ ಎಲ್ಲಿಯೂ ತಮ್ಮ ಸಂಬಂಧದ ಬಗ್ಗೆ, ಮದುವೆ ವಿಚಾರದ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ.

ದೀಪಿಕಾ ಬಳಸೋ ಬ್ಯಾಗಲ್ಲಿ ಬಡವರಿಗೆ ಒಂದು ಮನೆಯನ್ನೇ ಕಟ್ಟಿಸ್ಕೊಡ್ಬೋದು!

 

ಕೆಲ ದಿನಗಳ ಹಿಂದೆ ಫಿಲ್ಮ್‌ ಕಂಪನಿ ನಡೆಸಿರುವ ಸಂದರ್ಶನದಲ್ಲಿ ದೀಪಿಕಾ ಪಡುಕೋಣೆ,ಆಲಿಯಾ ಭಟ್, ರಣವೀರ್ ಸಿಂಗ್, ವಿಜಯ್ ದೇವರಕೊಂಡ, ಆಯುಷ್ಮಾನ್ ಮತ್ತು ಮನೋಜ್‌ ಭಾಗಿಯಾಗಿದ್ದರು. ಈ ವೇಳೆ ನಿರೂಪಕಿ ವಿಜಯ್‌ರನ್ನ 'ಯಾರಿಂದ ಜೀವನದ ಅಡ್ವೈಸ್‌ ತೆಗೆದುಕೊಳ್ಳಲು ಇಷ್ಟ ಪಡುತ್ತಿರಾ?' ಎಂದು ಕೇಳಿದಾಗ 'ಯಾವ ನಾಚಿಕೆ ಇಲ್ಲದೇ ಇದಕ್ಕೆ ಉತ್ತರಿಸಬಲ್ಲೆ. ಈ ಟೇಬಲ್‌ನಲ್ಲಿ ಇರುವ ನನ್ನ ಕ್ರಶ್‌ಗಳಾದ ದೀಪಿಕಾ ಮತ್ತು ಆಲಿಯಾರಿಂದ. ಆದರೆ ದೀಪಿಕಾಗೆ ಮದುವೆ ಆಗಿದೆ' ಎಂದು ಉತ್ತರಿಸಿದ ತಕ್ಷಣ ದೀಪಿಕಾ 'ಆಲಿಯಾನೂ ಮದುವೆ ಆಗುತ್ತಿದ್ದಾಳೆ' ಎಂದು ಹೇಳುತ್ತಾರೆ.

ದೀಪಿಕಾ ರಿಪೋರ್ಟ್ ಕಾರ್ಡ್ ರಿವೀಲ್; ರಿಮಾರ್ಕ್ ಗೆ ತಮಾಷೆ ಮಾಡಿದ ರಣವೀರ್!

 

ಈ ಹೇಳಿಕೆ ಯಾವುದೇ ರೀತಿಯಲ್ಲೂ ರೂಮರ್‌ ಆಗಬಾರದು ಎಂದು 'Excuse me,ಯಾಕೀ ಹೇಳಿಕೆ? ಡಿಕ್ಲರೇಶನ್ ಮಾಡಬೇಡ' ಎಂದು ಆಲಿಯಾ ಹೇಳುತ್ತಾಳೆ. ಅದಕ್ಕೆ ದೀಪಿಕಾ ಇಲ್ಲ ನಾನು ಸುಮ್ಮನೆ ಹೇಳಿದ್ದು ಎಂದು ಸಮರ್ಥಿಸಿಕೊಳ್ಳುತ್ತಾಳೆ.

ದೀಪಿಕಾ ಕೊಟ್ಟ ಹೇಳಿಕೆ ಬಗ್ಗೆ ಕಿವಿ ಕೊಟ್ಟ ನೆಟ್ಟಿಗರು ಕೆಲವೇ ದಿನಗಳಲ್ಲಿ ಬಿ-ಟೌನಲ್ಲಿ ಮಂಗಳ ವಾದ್ಯ ಸದ್ದು ಕೇಳಿ ಬರಲಿದೆ ಎಂದು ಕಾತುರದಿಂದ ಕಾಯುತ್ತಿದ್ದಾರೆ.

ನವೆಂಬರ್ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: