ಹೊಸ ವರ್ಷಕ್ಕೆ ಹೊಸ ರೆಸಲ್ಯೂಷನ್ ಪ್ಲಾನ್ ಮಾಡುವುದು ತುಂಬಾನೇ ಕಾಮನ್. ಅದರಲ್ಲೂ ಸೆಲೆಬ್ರಿಟಿಗಳು ಏನ್ ಪ್ಲಾನ್ ಮಾಡುತ್ತಾರೆ, ಏನು ಪೋಸ್ಟ್ ಮಾಡುತ್ತಾರೆ, ಎಲ್ಲರೂ ಹೊಸ ವರ್ಷವನ್ನು ಹೇಗೆ ಬರ ಮಾಡಿಕೊಳ್ಳುತ್ತಾರೆಂಬ ಕುತೂಹಲ ನೆಟ್ಟಿಗರಿಗೆ ಇರುತ್ತದೆ. ಸೆಲೆಬ್ರಿಟಿಗಳ  ಸೋಷಿಯಲ್ ಮೀಡಿಯಾ ಖಾತೆಯ ಕಣ್ಣಿಟ್ಟಿರುತ್ತಾರೆ. ಇದೀಗ ದೀಪಿಕಾ ಮಾಡಿರುವ ಪ್ಲಾನ್ ಮಾಡಿ...

ದೀಪಿಕಾ ಅವತಾರ ಸಖತ್ ವೈರಲ್..ಸಿಕ್ಕಾಪಟ್ಟೆ ಬೋಲ್ಡ್.. ಪೋಟೋ ಒಳಗಿದೆ! 

ದೀಪಿಕಾ ಇನ್‌ಸ್ಟಾಗ್ರಾಂ ಹಾಗೂ ಟ್ಟೀಟರ್‌ನಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇಷ್ಟು ವರ್ಷಗಳ ಕಾಲ ನಡೆದ ಕಾರ್ಯಕ್ರಮಗಳು, ಶೂಟಿಂಗ್, ಹಣ ಬರುವಂತಹ ಪ್ರಚಾರದ ಸುದ್ದಿಗಳು ಎಲ್ಲವೂ ತುಂಬಿಕೊಂಡಿದ್ದ ಖಾತೆ ಈಗ ಫುಲ್ ಖಾಲಿಯಾಗಿದೆ. ಸಂಪೂರ್ಣವಾಗಿ ಡಿಲೀಟ್‌ ಮಾಡಿದ್ದಾರೆ. ಮೊದಲು ದೀಪಿಕಾ ಸೋಷಿಯಲ್ ಮೀಡಿಯಾ ಹ್ಯಾಕ್ ಆಗಿದೆ ಎಂದುಕೊಂಡರು. ಆದರೆ ದೀಪಿಕಾ ಈ ಪೋಸ್ಟ್‌ ಹಾಕಿದ ನಂತರ ಅಸಲಿ ಸತ್ಯ ತಿಳಿದು ಬಂದಿದೆ.

ದೀಪಿಕಾ ಪೋಸ್ಟ್:
'ಹಾಯ್‌, ಎಲ್ಲರಿಗೂ ನನ್ನ ಆಡಿಯೋ ಡೈರಿಗೆ ಸ್ವಾಗತ, ನಾನಿದರಲ್ಲಿ ನನ್ನ ಕಲ್ಪನೆ, ಯೋಚನೆ ಹಾಗೂ ಭಾವನೆಗಳನ್ನು ಹಂಚಿಕೊಳ್ಳುವೆ. ಎಲ್ಲರಿಗೂ ಒಳ್ಳೆಯ ಆರೋಗ್ಯ ನೀಡಲಿ ಈ 2021 ಎಂದು ಹಾರೈಸುತ್ತೇನೆ,' ಎಂದು ಬರೆದಿದ್ದಾರೆ.

ಹೌದು. ದೀಪಿಕಾ ಪಡುಕೋಣೆ ಇನ್ನು ಮೇಲೆ ಆಡಿಯೋ (ಧ್ವನಿ) ಮುಖಾಂತರ ತಮ್ಮ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳಲು ಈ ರೀತಿ ನಿರ್ಧಾರ ಮಾಡಿದ್ದಾರೆ. ಆದರೂ ದೀಪಿಕಾ ಹಾಗೂ ರಣ್ವೀರ್ ಫೋಟೋ ಇಲ್ಲದಿರುವುದನ್ನು ನೋಡಿ ನೆಟ್ಟಿಗರು ಬೇಸರ ಮಾಡಿಕೊಂಡಿದ್ದಾರೆ.