Asianet Suvarna News Asianet Suvarna News

'ಚಪಕ್‌'ಗೆ ಸಿಕ್ತು ಸೆನ್ಸಾರ್‌ನಿಂದ ಗ್ರೀನ್ ಸಿಗ್ನಲ್!

ದೀಪಿಕಾ ಪಡುಕೋಣೆ 'ಚಪಕ್' ಸಿನಿಮಾ ಬಾಲಿವುಡ್‌ನಲ್ಲಿ ಸಂಚಲನ ಹುಟ್ಟಿಸುತ್ತಿದೆ. ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ಭಾರೀ ನಿರೀಕ್ಷೆ ಮೂಡಿಸುತ್ತಿದೆ. ಈಗ ಸೆನ್ಸಾರ್ ಮಂಡಳಿಯಿಂದ ಯು ಸರ್ಟಿಫಿಕೇಟ್ ಸಿಕ್ಕಿದೆ. 

Deepika Padukone Chhapaak gets U certificate from CBFC
Author
Bengaluru, First Published Dec 31, 2019, 1:21 PM IST

ದೀಪಿಕಾ ಪಡುಕೋಣೆ ಬಹುನಿರೀಕ್ಷಿತ 'ಚಪಕ್' ಸಿನಿಮಾ ಟ್ರೇಲರ್ ಬಹು ಮೆಚ್ಚುಗೆ ಪಡೆದುಕೊಂಡಿದೆ. ಇದೀಗ ಸಿಬಿಎಫ್‌ಸಿಯಿಂದ ಯು ಸರ್ಟಿಫಿಕೇಟ್ ಪಡೆದುಕೊಂಡಿದೆ. 

ಆ್ಯಸಿಡ್ ಸಂತ್ರಸ್ತೆ ಲಕ್ಷ್ಮೀ ಅಗರ್‌ವಾಲ್ ಜೀವನಾಧಾರಿತ ಸಿನಿಮಾ ಇದು. ಜನವರಿ 10 ರಂದು ತೆರೆಗೆ ಬರಲಿದೆ. 

95% ಮಾರ್ಕ್ಸ್‌ ಪಡೆದು 'ಭೂಮಿ ತಾಯಾಣೆ' ಎಂದ್ಹೇಳಿ ಕಿರುತೆರೆಗೆ ಕಾಲಿಟ್ಟ ಇಂಚರಾ ಕಥೆ!

ಚಪಕ್‌ಗೆ ಯು ಸರ್ಟಿಫಿಕೇಟ್ ಸಿಕ್ಕಿರುವುದಕ್ಕೆ ನಿರ್ದೇಶಕಿ ಮೇಘನಾ ಗುಲ್ಜಾರ್ ಸಂತಸ ವ್ಯಕ್ತಪಡಿಸಿದ್ದಾರೆ. ' ಚಪಕ್ ಪ್ರೇಕ್ಷಕರಿಗೆ ಇಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ವಿಶುವಲ್ ಬಗ್ಗೆ ಹೆಚ್ಚಿನ ಗಮನ ಕೊಟ್ಟಿದ್ದೇವೆ. ಎಲ್ಲಿಯೂ ಚಿತ್ರಕ್ಕೆ ಕತ್ತರಿ ಹಾಕಿಲ್ಲ. ತುಂಬಾ ಖುಷಿಯಾಗುತ್ತಿದೆ' ಎಂದಿದ್ದಾರೆ. 

ಆ್ಯಸಿಡ್ ಸಂತ್ರಸ್ತೆ ಲಕ್ಷ್ಮೀ ಅಗರ್‌ವಾಲ್ ಪಾತ್ರವನ್ನು ದೀಪಿಕಾ ಪಡುಕೋಣೆ ಮಾಡಿದ್ದಾರೆ. ಆ್ಯಸಿಡ್ ದಾಳಿಯ ನಂತರ ಮೊದಲ ಬಾರಿಗೆ ಕನ್ನಡಿಯಲ್ಲಿ ಮುಖ ನೋಡಿದಾಗ ಶಾಕ್ ಆಗುತ್ತಾಳೆ.  ನಿಧಾನಕ್ಕೆ ರಿಯಾಲಿಟಿಯನ್ನು ಒಪ್ಪಿಕೊಳ್ಳಲು ಶುರು ಮಾಡುತ್ತಾರೆ. ಇಡೀ ಟ್ರೇಲರ್‌ನಲ್ಲಿ  ಮಾಲತಿಯ (ಲಕ್ಷ್ಮಿ ಅಗರ್‌ವಾಲ್)  ಹೊಸ ಜರ್ನಿಯನ್ನು ತೋರಿಸಿದ್ದಾರೆ. ಈ ಜರ್ನಿಗೆ ಅಮೋಲ್ ಸಾಥ್ ನೀಡುತ್ತಾರೆ. ಅಲ್ಲಿಂದ ಅವರಿಬ್ಬರ ನಡುವೆ ಒಂದು ಆತ್ಮೀಯತೆ ಶುರುವಾಗುತ್ತದೆ. ದೀಪಿಕಾ ಅಭಿನಯ ಮನೋಜ್ಞವಾಗಿದೆ. 

ಶ್ರೀ ಮುರಳಿ-ವಿದ್ಯಾ 20 ವರ್ಷದ ಲವ್‌ ಸ್ಟೋರಿಗೆ ಸಾಕ್ಷಿಯಾಯ್ತುಈ ಫೋಟೋಸ್!

ಕೇವಲ 15 ವರ್ಷದವಳಾಗಿದ್ದಾಗ 2005 ರಲ್ಲಿ  ಲಕ್ಷ್ಮೀ ಅಗರ್‌ವಾಲ್ ಮೇಲೆ ಆ್ಯಸಿಡ್ ಅಟ್ಯಾಕ್ ನಡೆಯುತ್ತದೆ.  ಅದಾದ ನಂತರ ಆಘಾತಕ್ಕೊಳಗಾಗುತ್ತಾರೆ. ನಂತರ ನಿಧಾನವಾಗಿ ರಿಯಾಲಿಟಿಯನ್ನು ಒಪ್ಪಿಕೊಳ್ಳುತ್ತಾ, ಹೊಸ ಆಂದೋಲನವನ್ನು ಶುರು ಮಾಡುತ್ತಾರೆ. ದೇಶದಾದ್ಯಂತ ಆ್ಯಸಿಡ್ ಮಾರಾಟವನ್ನು ನಿಷೇಧಿಸುವಂತೆ ಹೋರಾಟ ಶುರು ಮಾಡುತ್ತಾರೆ. ಅಲ್ಲಿಂದ ಅವರ ಹೊಸ ಜರ್ನಿ ಶುರುವಾಗುತ್ತದೆ. 

ಚಿತ್ರವನ್ನು ಕಣ್ತುಂಬಿಕೊಳ್ಳಬೇಕೆಂದರೆ ಜನವರಿ 10 ರ ವರೆಗೆ ಕಾಯಲೇಬೇಕು! 

Follow Us:
Download App:
  • android
  • ios