ಇಂದ್ರಜಿತ್ ಲಂಕೇಶ್‌ ನಿರ್ದೇಶನ 'ಐಶ್ವರ್ಯ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಂತರ ದೀಪಿಕಾ ಪಡುಕೋಣೆ ಬಾಲಿವುಡ್‌ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಮತ್ತೆ ದಕ್ಷಿಣಭಾರತ ಸಿನಿಮಾದಲ್ಲಿ ನಟಿಸಬೇಕೆಂಬುದು ಅಭಿಮಾನಿಗಳು ಆಸೆಯಾಗಿದ್ದು ಅದಕ್ಕೀಗ ಕಾಲ ಕೂಡಿ ಬಂದಿದೆ. 

ಕೊನೆಗೂ ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ!

ತಮಿಳು ಚಿತ್ರರಂಗದ ಹೆಸರಾಂತ ಫಿಲ್ಮ್‌ ಪ್ರೊಡಕ್ಷನ್‌ ಕಂಪನಿ 'ವೈಜಯಂತಿ ಫಿಲ್ಮ್‌' ಇಂದು 50 ವರ್ಷ ಪೂರೈಸಿದೆ. ಇದರ ಪ್ರಯುಕ್ತ ತಮ್ಮ ಮುಂದೆ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ.

ದೀಪಿಕಾ ಪೋಸ್ಟ:

ವೈಜ್ಞಾನಿಕ ಕತೆಯುಳ್ಳ ಸಿನಿಮಾ ಇದಾಗಿದ್ದು ಸೂಪರ್ ಸ್ಟಾರ್ ಪ್ರಭಾಸ್‌ ಜೊತೆ ದೀಪಿಕಾಪಡುಕೋಣೆ ಅಭಿನಯಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ಸ್ವತಃ ದೀಪಿಕಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.  #ದೀಪಿಕಾಪ್ರಭಾಸ್‌ ಕಾಂಬಿನೇಷನ್‌ನನ್ನು ತೆರೆಮೇಲೆ ಅದ್ಭುತವಾಗಿ ತೋರಿಸಲು ಆಕ್ಷನ್ ಕಟ್ ಹೇಳಲಿದ್ದಾರೆ ಮಹಾನಟಿ ನಿರ್ದೇಶಕ ನಾಗ ಅಶ್ವಿನ್‌ . ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಪಂಚ ಭಾಷೆಯಲ್ಲಿ ರಿಲೀಸ್‌ ಆಗಲಿದೆ.

 

ನಾಗ್‌ ಆಶ್ವಿನ್:

ಚಿತ್ರದ ಬಗ್ಗೆ ಮಾಹಿತಿ ಹೊರ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಬಗ್ಗೆ ನಿರ್ದೇಶಕ ನಾಗ್‌ ಮಾತನಾಡಿದ್ದಾರೆ. 'ಈ ಪಾತ್ರವನ್ನು ಈ ಹಿಂದೆ ಯಾವ ಸ್ಟಾರ್ ನಟರೂ ಅಭಿನಯಿಸಿರಲಿಲ್ಲ. ಈ ಕತೆಯನ್ನು ಒಪ್ಪಿಕೊಂಡ ದೀಪಿಕಾಗೆ ಬಿಗ್ ಥ್ಯಾಂಕ್ಸ್.  ದೀಪಿಕಾ- ಪ್ರಭಾಸ್‌ ಪಾತ್ರ ಎಲ್ಲರ ಗಮನ ಸೆಳೆಯುತ್ತದೆ. ಈ ಇಬ್ಬರೂ ಕಲಾವಿದರನ್ನು ಸಿನಿ ಪ್ರೇಕ್ಷಕರು ಅತಿ ಹೆಚ್ಚು ಪ್ರೀತಿಸುವುದರಿಂದ ಸಿನಿಮಾ ಖಂಡಿತ ಕ್ಲಿಕ್‌ ಆಗುತ್ತದೆ' ಎಂದಿದ್ದಾರೆ.