Asianet Suvarna News Asianet Suvarna News

ಸಮಂತಾ ಸ್ಟೈಲಿಸ್ಟ್ ಪ್ರೀತಂಗೆ ಜೀವ ಬೆದರಿಕೆ: ನಾಗ್‌ಗೆ ಟಾಂಗ್ ಕೊಟ್ಟ ಸಮಂತಾ ಗೆಳೆಯ

  • ಸಮಂತಾ ಜತೆ ಸ್ಟೈಲಿಸ್ಟ್‌ ಪ್ರೀತಂ ಸಂಬಂಧ ವದಂತಿ: ಜೀವ ಬೆದರಿಕೆ
  • ಜಾಲತಾಣಗಳಲ್ಲಿ ಜುಕಾಲ್ಕರ್‌ಗೆ ಕೊಲೆ ಬೆದರಿಕೆ
  • ನಾಗಚೈತನ್ಯ ಅಭಿಮಾನಿಗಳಿಂದ ಅವಹೇಳನಕಾರಿ ಟೀಕೆ
Death threats to Samanthas stylist Pritam Jukalkar after rumors say he is the reason for split between couple dpl
Author
Bangalore, First Published Oct 12, 2021, 9:57 AM IST
  • Facebook
  • Twitter
  • Whatsapp

ಹೈದರಾಬಾದ್‌(ಅ.12): ನಟ ನಾಗಚೈತನ್ಯ ಮತ್ತು ಸಮಂತಾ ವೈವಾಹಿಕ ಸಂಬಂಧ ಮುರಿದುಕೊಳ್ಳುತ್ತಿರುವುದಾಗಿ ಘೋಷಿಸಿದ ಬೆನ್ನಲ್ಲೇ, ಇದಕ್ಕೆ ಸಮಂತಾ ಕಾರಣ ಎಂಬ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿದ್ದವು. ಇದೀಗ ಇಬ್ಬರ ಸಂಬಂಧ ಮುರಿದುಬೀಳಲು, ಸಮಂತಾರ ಸ್ಟೈಲಿಸ್ಟ್‌ ಪ್ರೀತಂ ಜುಕಾಲ್ಕರ್‌ ಎಂಬ ವದಂತಿ ಹಬ್ಬಿದ್ದು, ಅದರ ಬೆನ್ನಲ್ಲೇ ಪ್ರೀತಂಗೆ ಸಾಮಾಜಿಕ ಜಾಲತಾಣಗಳ ಮೂಲಕ ಜೀವ ಬೆದರಿಕೆ ಕರೆ ಬರತೊಡಗಿದೆ.

ನಾಗಚೈತನ್ಯ ಅವರ ಅಭಿಮಾನಿಗಳಿಂದ ಯೂಟ್ಯೂಬ್‌ ಸೇರಿದಂತೆ ಇನ್ನಿತರ ಜಾಲತಾಣಗಳಲ್ಲಿ ಕೊಲೆ ಬೆದರಿಕೆಗಳು ಬರುತ್ತಿವೆ. ಜತೆಗೆ ತನ್ನನ್ನು ಅವಹೇಳನ ಮಾಡಲಾಗುತ್ತಿದೆ. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ ಎಂದು ಪ್ರೀತಂ ನೋವು ತೋಡಿಕೊಂಡಿದ್ದಾರೆ.

ಡಿಸೈನರ್ ಜೊತೆ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ರಾ ಸಮಂತಾ? ವಿಚ್ಚೇದನೆಗೆ ಇದೇ ಕಾರಣ ?

ಜುಕಾಲ್ಕರ್‌ ಅವರು ಸಮಂತಾ ಅವರ ಸ್ಟೈಲಿಸ್ಟ್‌ ಅಷ್ಟೇ ಅಲ್ಲದೆ ಅವರ ಆತ್ಮೀಯ ಗೆಳೆಯ ಸಹ ಹೌದು. ಈ ಹಿನ್ನೆಲೆಯಲ್ಲಿ ಅವರು ಆತ್ಮೀಯವಾಗಿರುವ ಫೋಟೋಗಳಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಈ ಇಬ್ಬರ ಮಧ್ಯೆ ಸಂಬಂಧವಿದೆ ಎಂಬ ಗಾಳಿಸುದ್ದಿಗಳು ಹರಿದಾಡುತ್ತಿವೆ.

Death threats to Samanthas stylist Pritam Jukalkar after rumors say he is the reason for split between couple dpl

ಇನ್ನು ಈ ಬೆಳವಣಿಗೆಗಳ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿದ ಜುಕಾಲ್ಕರ್‌ ಅವರು, ‘ನಾಗಚೈತನ್ಯ ಅವರೇ ಈ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ನನ್ನ ಮತ್ತು ಸಮಂತಾ ಅವರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಗಾಳಿ ಸುದ್ದಿಗಳಿಗೆ ತಿಲಾಂಜಲಿ ಹಾಡಬೇಕು’ ಎಂದರು.

ಮೋಸಗಾರರು ಎಂದಿದ್ದು ಸಮಂತಾಗಲ್ಲ..! ನನ್ ಲೈಫ್ ಬಗ್ಗೆ ನನ್ನ ಮಾತು ಎಂದ ಸಿದ್ಧಾರ್ಥ್

ಸಮಂತಾ ಅವರನ್ನು ನಾನು ಜೀಜಿ(ಸೋದರಿ) ಎಂದು ಕರೆಯುತ್ತೇನೆ. ಅಲ್ಲದೆ ನನಗೆ ಹಲವು ವರ್ಷಗಳಿಂದ ಗೊತ್ತಿರುವ ನಾಗಚೈತನ್ಯ ಅವರಿಗೆ, ನನ್ನ ಮತ್ತು ಸಮಂತಾ ಅವರ ಸಂಬಂಧದ ಬಗ್ಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ನನ್ನ ಮತ್ತು ಸಮಂತಾ ಅವರ ಬಗ್ಗೆ ಟ್ರೋಲ್‌ ಮತ್ತು ಈ ರೀತಿಯ ಅವಹೇಳನ ಮಾಡಬಾರದು ಎಂದು ನಾಗಚೈತನ್ಯ ಹೇಳಬೇಕು ಎಂದರು.

Follow Us:
Download App:
  • android
  • ios