Asianet Suvarna News Asianet Suvarna News

ನಟಿ ಅಪರ್ಣಾ ಆತ್ಮಹತ್ಯೆಗೆ ಟ್ವಿಸ್ಟ್​: ಸಾಯುವ ಮುನ್ನ ಏನಾಗಿತ್ತು? ಮೂರು ವರ್ಷದ ಕಂದ ನುಡಿದಳು ಸಾಕ್ಷಿ!

ಖ್ಯಾತ ಮಲಯಾಳಂ ನಟಿ ಅಪರ್ಣಾ ನಾಯರ್​ ಅವರು ಆಗಸ್ಟ್​ 31ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನ ಮುನ್ನ ನಡೆದ ಘಟನೆ ಕುರಿತು ಮಗಳು ಹೇಳಿದ್ದೇನು?
 

Daughter statement of  Famous Malayalam actress Aparna Nair death suc
Author
First Published Sep 5, 2023, 1:30 PM IST

ಮಲಯಾಳಂನ ಖ್ಯಾತ ನಟಿ ಅಪರ್ಣಾ ಪಿ.ನಾಯರ್ ಕಳೆದ ಆಗಸ್ಟ್​ 31ರಂದು  ತಿರುವನಂತಪುರಂನ ಕರಮಾನದಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇವರ ಸಾವಿನ ರಹಸ್ಯ ನಿಗೂಢವಾಗಿತ್ತು. ಕೇರಳದ ಕರಮಾನದ ಖಾಸಗಿ ಆಸ್ಪತ್ರೆಯಲ್ಲಿ ಸ್ವಾಗತಕಾರಿಣಿಯಾಗಿದ್ದ ಅಪರ್ಣಾ ಎರಡು ವಾರಗಳ ಹಿಂಷ್ಟೇ ರಾಜೀನಾಮೆ ನೀಡಿದ್ದರು. ಬಳಿಕ ಈ ಘಟನೆ ಸಂಭವಿಸಿತ್ತು. ಸಾಯುವ ಹಿಂದಿನ ದಿನವಷ್ಟೇ  ತಮ್ಮ  ಮಗಳ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ವಾರದ ಹಿಂದೆ ಪತಿ ಸಂಜಿತ್‌ ಜೊತೆಗೆ ತೆಗೆಸಿದ ಫೋಟೋ ಹಂಚಿಕೊಂಡಿದ್ದ ಅಪರ್ಣಾ 'ಇವರು ನನ್ನ ಶಕ್ತಿ' ಎಂದು ಬರೆದುಕೊಂಡಿದ್ದರು. ಇವರಿಗೆ 31 ವರ್ಷ ವಯಸ್ಸಾಗಿತ್ತು. ನಟಿ  ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಸಾವು ಸಿನಿ ಇಂಡಸ್ಟ್ರಿಗೆ ಬಹಳ ಆಘಾತ ತಂದಿತ್ತು.   ಆಗಸ್ಟ್​ 31ರ ಸಂಜೆ 7 ಗಂಟೆ ಸುಮಾರಿಗೆ ನಟಿ ಅಪರ್ಣಾ (Aparna Nair) ತನ್ನ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅಪರ್ಣಾಳನ್ನು ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಮೃತಪಟ್ಟಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಸಾವಿನ ಬಗ್ಗೆ ಕಿಲ್ಲಿಪಾಲಂನ ಖಾಸಗಿ ಆಸ್ಪತ್ರೆ ಸ್ಪಷ್ಟನೆ ನೀಡಿತು ಎಂದು ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದರು. 

ಕರಮಾನ ಪೊಲೀಸರು ಕಾರಣ ಹುಡುಕಿದಾಗ, ಕೌಟುಂಬಿಕ ಸಮಸ್ಯೆಯಿಂದ ಸಾವಿನ ಹಾದಿ ಹಿಡಿದಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿತ್ತು.  ಸಾವಿಗೂ ಕೆಲವೇ ಗಂಟೆಗಳಿಗೂ ಮುನ್ನ ಅಪರ್ಣಾ, ತನ್ನ ತಾಯಿಗೆ ವಿಡಿಯೋ ಕಾಲ್​ ಮಾಡಿ, ಕುಟುಂಬದಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿದ್ದರಂತೆ. ಗಂಡನ ಕುಡಿತದ ಚಟದಿಂದ ಮಾನಸಿಕವಾಗಿ ಮಗಳು ತೊಂದರೆಗೆ ಒಳಗಾಗಿದ್ದಳು. ಆದಷ್ಟು ಬೇಗ ಈ ಸ್ಥಳವನ್ನು ತೊರೆಯುತ್ತೇನೆ ಎಂದು ಹೇಳಿದ್ದಳು. ಫೋನ್​ನಲ್ಲಿ ಮಾತನಾಡುವಾಗ ಅಪರ್ಣಾ ಅಳುತ್ತಿದ್ದಳು ಎಂದು ಆಕೆಯ ತಾಯಿ ತಿಳಿಸಿದ್ದರು. ತಾಯಿ ನೀಡಿದ್ದ ಹೇಳಿಕೆಯ ಮೇರೆಗೆ ಅಪರ್ಣಾ ಅವರ ಆತ್ಮಹತ್ಯೆಯ ಹಿಂದೆ ಪತಿಯೇ ಕಾರಣ ಎನ್ನಲಾಗಿತ್ತು.

ನಟಿ ಅಪರ್ಣಾ ನಿಗೂಢ ಸಾವಿನ ರಹಸ್ಯ ಬಯಲು: 'ಗಂಡನೇ ಶಕ್ತಿ' ಬರಹದ ರಹಸ್ಯವೇನು?

ಆದರೆ ಇದೀಗ ಕೇಸ್​ ಕುತೂಹಲದ ತಿರುವು ಪಡೆದುಕೊಂಡಿದೆ. ಅಪರ್ಣಾ ಅವರ ಮೂರು ವರ್ಷದ ಮಗಳು ಈಗ ಅಮ್ಮನ ಸಾವಿಗೆ ಸಾಕ್ಷಿಯಾಗಿದ್ದಾಳೆ. ಪೊಲೀಸರು ಪತಿ ಸಂಜಿತ್​ (Sanjith) ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಅವರು ಅಪರ್ಣಾಗೆ ಕುಡಿಯುವ ಚಟವಿತ್ತು. ವಿಪರೀತ ಕುಡಿದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ. ಅದೇ ದಿನ ಬೆಳಗ್ಗೆ ಅಟ್ಟುಕಾಲ್​ ದೇವಸ್ಥಾನಕ್ಕೆ ನಾವಿಬ್ಬರೂ ಭೇಟಿ ನೀಡಿದ್ದೆವು. ರಾತ್ರಿ ಓಣಂ ಆಚರಣೆಗೆ ಸಕಲ ಸಿದ್ಧತೆಯೂ ನಡೆದಿತ್ತು.  ಆದರೆ, ಅಪರ್ಣಾ ಮದ್ಯ ಸೇವಿಸುತ್ತಿದ್ದಳು. ಇದನ್ನು ನೋಡಿ ನಾನು ಪ್ರಶ್ನಿಸಿದೆ. ಈ ಸಂದರ್ಭದಲ್ಲಿ  ಇಬ್ಬರ ನಡುವೆ ಜಗಳ ನಡೆದಿತ್ತು. ಜಗಳ ನಡೆದ ಸಂದರ್ಭದಲ್ಲಿ ನಾನು ಮಗಳನ್ನು ಕರೆದುಕೊಂಡು ಮನೆಯಿಂದ ಹೊರ ಹೋದೆ. ಅಷ್ಟರಲ್ಲಿಯೇ ನನಗೆ ಅಪರ್ಣಾ ಕರೆ ಮಾಡಿ  ಆತ್ಮಹತ್ಯೆಗೆ ಯತ್ನಿಸುತ್ತಿರುವುದಾಗಿ ತಿಳಿಸಿದರು. ಮನೆಗೆ ಬರುವಷ್ಟರಲ್ಲಿ  ಆಕೆ ಮೃತಪಟ್ಟಿದ್ದಳು ಎಂದು ಸಂಜಯ್​ ಹೇಳಿದ್ದಾರೆ.

ಇದೇ ವೇಳೆ ಮೂರು ವರ್ಷದ ಮಗಳು ಕೂಡ ಪೊಲೀಸರಿಗೆ ಸಾಕ್ಷಿ ನೀಡಿದ್ದಾಳೆ. ಅಪ್ಪ-ಅಮ್ಮ ಜಗಳ ಆಡುತ್ತಿದ್ದ ಸಂದರ್ಭದಲ್ಲಿ  ಅಪ್ಪನ  ತಲೆಗೆ ಅಮ್ಮ  ಬಾಟಲಿಯಿಂದ ಹೊಡೆದಿರುವುದನ್ನು ತಾನು ನೋಡಿದುದಾಗಿ ಮಗಳು  ಪೊಲೀಸರಿಗೆ ತಿಳಿಸಿದ್ದಾಳೆ. ಇದರ ನಡುವೆಯೇ ಅಪರ್ಣಾ ತವರು ಮನೆಯವರು ಅಪರ್ಣಾ ಪತಿಯೇ ಸಾವಿಗೆ ಕಾರಣ ಎನ್ನುತ್ತಿದ್ದಾರೆ. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

'ಜವಾನ್'​ ಚಿತ್ರ ವೀಕ್ಷಣೆಗೆ ಬರ್ತಿದ್ದಾರೆ 36 ಗರ್ಲ್​ಫ್ರೆಂಡ್ಸ್​, 72 ಎಕ್ಸ್​ ಲವರ್ಸ್​: ಏನಿದು ವಿಷ್ಯ?
 
 

Follow Us:
Download App:
  • android
  • ios