ಕಿಚ್ಚ ಸುದೀಪ್- ಸಲ್ಮಾನ್ ಖಾನ್ ಬಹುನಿರೀಕ್ಷಿತ 'ದಬಾಂಗ್-3' ಚಿತ್ರದ ಟೈಟಲ್ ಹಾಡಿನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಅಂಶಗಳಿವೆ ಎಂದು ಹಿಂದೂಪರ ಸಂಘಟನೆಗಳು ಆರೋಪ ಮಾಡಿದ್ದು ಚಿತ್ರತಂಡ ಅದಕ್ಕೆ ಕತ್ತರಿ ಪ್ರಯೋಗ ಮಾಡಿದೆ. 

ಈ ಬಗ್ಗೆ ಸಲ್ಮಾನ್ ಖಾನ್ ಪ್ರೊಡಕ್ಷನ್ ಹೌಸ್ SKF ಟ್ವಿಟರ್'ನಲ್ಲಿ ಅಧಿಕೃತಗೊಳಿಸಿದೆ. 'ಎಲ್ಲರ ಧಾರ್ಮಿಕ ಮನೋಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಅಂತಹ ಸೀನ್‌ಗಳನ್ನು ಕಟ್ ಮಾಡಲಾಗಿದೆ' ಎಂದು ಸ್ಪಷ್ಟಪಡಿಸಿದೆ. 

 

ದಬಾಂಗ್ -3 ಟೈಟಲ್ ಟ್ರಾಕ್‌ ಬ್ಯಾಕ್‌ಗ್ರೌಂಡ್‌ನಲ್ಲಿ ಸಾಧು -ಸಂತರು ಗಿಟಾರ್ ಹಿಡಿದುಕೊಂಡು ಡ್ಯಾನ್ಸ್ ಮಾಡುತ್ತಿರುದಾಗಿ ತೋರಿಸಿದ್ದಾರೆ. ಇದನ್ನು ಪ್ರಶ್ನಿಸಿ ಹಿಂದೂ ಜನಜಾಗೃತಿ ಸಮಿತಿ ಸೆನ್ಸಾರ್ ಮಂಡಳಿಗೆ ಪತ್ರ ಬರೆದಿದ್ದರು.

'ದಬಾಂಗ್‌ 3’ ಕನ್ನಡಿಗರ ಸಿನಿಮಾ: ಸುದೀಪ್ ನನ್ನ ಸೋದರ, ಅವರೇ ಹೀರೋ' 

ದಬಾಂಗ್ -3 ನಟಿ ಸೋನಾಕ್ಷಿ ಸಿನ್ಹಾ ಸಂದರ್ಶವೊಂದರಲ್ಲಿ ಮಾತನಾಡುತ್ತಾ, 'ಯಾರ ಭಾವನೆಗಳಿಗೂ ನೋವುಂಟು ಮಾಡುವುದು ನಮ್ಮ ಉದ್ದೇಶವಲ್ಲ. ಯಾರಿಗಾದರೂ ನಮ್ಮ ಸಿನಿಮಾದಿಂದ ತೊಂದರೆ ಉಂಟಾದಲ್ಲಿ ಮಾಧ್ಯಮದ ಮುಂದೆ ಹೋಗುವ ಮುನ್ನ ನಮ್ಮ ಬಳಿಯೇ ಬನ್ನಿ' ಎಂದಿದ್ದರು.  

ಸಲ್ಲುಭಾಯ್, ಕಿಚ್ಚ ಅಭಿನಯದ ದಬಾಂಗ್ 3 ಸಿನಿಮಾ ಪ್ರಚಾರದಲ್ಲಿ BY ವಿಜಯೇಂದ್ರ ಮಿಂಚಿಂಗ್

ಡಿಸಂಬರ್ 20 ರಂದು ದಬಾಂಗ್-3 ದೇಶಾದ್ಯಂತ ತೆರೆ ಕಾಣಲಿದೆ. ಸಲ್ಮಾನ್ ಖಾನ್, ಕಿಚ್ಚ ಸುದೀಪ್, ಸೋನಾಕ್ಷಿ ಸಿನ್ಹಾ, ಅರ್ಬಜ್ ಖಾನ್, ಮಹಿ ಗಿಲ್, ತಿನ್ನು ಆನಂದ್ ನಟಿಸಿದ್ದಾರೆ.