ವಿಚ್ಛೇದಿತರನ್ನು ಒಂದಾಗಿಸಿದ ಕೊರೋನಾ | ಮಕ್ಕಳಿಗಾಗಿ ಹೋಂ ಕ್ವಾರಂಟೈನ್ ಆಗಲು ಒಪ್ಪಿದ ಸೂಸಾನ್- ಹೃತಿಕ್ | ಪತ್ನಿಗೆ ಹೃದಯಪೂರ್ವಕ ಧನ್ಯವಾದ ತಿಳಿಸಿದ ಹೃತಿಕ್
ಒಂದು ಕಡೆ ಕೊರೋನಾ ವೈರಸ್ ಸಾಮಾಜಿಕ ಅಂತರವನ್ನು (ಸೋಷಿಯಲ್ ಡಿಸ್ಟೆನ್ಸಿಂಗ್) ನ್ನು ಜಾಸ್ತಿ ಮಾಡಿದರೆ ಇನ್ನೊಂದು ಕಡೆ ಸಂಬಂಧಗಳನ್ನು ಇನ್ನಷ್ಟು ಹತ್ತಿರವಾಗಿಸುತ್ತಿದೆ. ಬ್ಯಸಿ ನೆಪದಲ್ಲಿ ಮನೆಮಂದಿಯ ಜೊತೆ ಸಮಯ ಕಳೆಯಲಾಗುತ್ತಿಲ್ಲ ಎನ್ನುವವರಿಗೆ ಇದು ಒಳ್ಳೆಯ ಅವಕಾಶ. ಕೋರೋನಾ ಹೇಗೆ ಸಂಬಂಧಗಳನ್ನು ಜೋಡಿಸುತ್ತಿದೆ ಎನ್ನುವುದಕ್ಕೆ ಇದು ಬೆಸ್ಟ್ ಎಕ್ಸಾಂಪಲ್ ನೋಡಿ!
ಕಾರಣಾಂತರದಿಂದ ವಿಚ್ಛೇದನ ಪಡೆದು ದೂರವಾಗಿದ್ದ ಹೃತಿಕ್ ರೋಷನ್ - ಸುಸಾನ್ ಮಕ್ಕಳಿಗೋಸ್ಕರ ಹೋಮ್ ಕ್ವಾರಂಟೈನ್ ಆಗಲು ನಿರ್ಧರಿಸಿದ್ದಾರೆ. ಇಬ್ಬರೂ ಮಕ್ಕಳ ಜೊತೆ ಜುಹು ರೆಸಿಡೆನ್ಸ್‌ಗೆ ಶಿಫ್ಟ್ ಆಗಿದ್ದಾರೆ. ಕುಟುಂಬದ ಜೊತೆ ಸಮಯ ಕಳೆಯಲಿದ್ದಾರೆ.
ತಾಯಿ ಜೊತೆ ಮೆಗಾ ಸ್ಟಾರ್ ಸೆಲ್ಫೀ: #StayHomeಗೆ ಮನವಿ!
ಇದಕ್ಕಾಗಿ ಹೃತಿಕ್, ಸೂಸಾನ್‌ಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಸಪೋರ್ಟ್ ಮಾಡಿದ್ದಕ್ಕೆ ಧನ್ಯವಾದಗಳು. 'ಇಡೀ ದೇಶ ಲಾಕ್‌ಡೌನ್‌ನಲ್ಲಿರುವಾಗ ತಂದೆಯಾಗಿ ಮಕ್ಕಳಿಂದ ದೂರ ಇರುವುದು ಕಲ್ಪಿಸಿಕೊಳ್ಳಲು ಸಾದ್ಯವಿಲ್ಲ. ಈ ಪರಿಸ್ಥಿತಿ ಎಲ್ಲರನ್ನು ಹತ್ತಿರ ತರುತ್ತಿದೆ. ನಮ್ಮ ಮಕ್ಕಳನ್ನು ಹೋಂ ಕ್ವಾರಂಟೈನ್ ಮಾಡುವುದು ನಮ್ಮ ಜವಾಬ್ದಾರಿ' ಎಂದು ಬರೆದುಕೊಂಡಿದ್ದಾರೆ.
ಇಬ್ಬರ ನಡುವೆ ಭಿನ್ನಾಭಿಪ್ರಾಯ ಏನೇ ಇರಲಿ, ಮಕ್ಕಳ ವಿಚಾರ ಬಂದಾಗ ಹೃತಿಕ್- ಸೂಸಾನ್ ಜವಾಬ್ದಾರಿಯುತವಾಗಿ ವರ್ತಿಸುವುದನ್ನು ಆಗಾಗ ಕಾಣಬಹುದು. ' ಮಕ್ಕಳಿಗಾಗಿ ಹೋಮ್ ಕ್ವಾರಂಟೈನ್ ಆಗಲು ಒಪ್ಪಿದ್ದಕ್ಕೆ, ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು. ಹಾಗಾಗಿ ನಮ್ಮ ಮಕ್ಕಳು ನಮ್ಮಿಂದ ಡಿಸ್‌ಕನೆಕ್ಟ್ ಆಗಿಲ್ಲ' ಎಂದು ಹೃತಿಕ್ ಬರೆದುಕೊಂಡಿದ್ದಾರೆ.
