ರಾಮ ಜಗದೀಶ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಸಿನಿಮಾದ ಬಜೆಟ್‌ 5 ರಿಂದ 10 ಕೋಟಿ ಎನ್ನಲಾಗಿದೆ. ಆದರೆ ಈ ಚಿತ್ರ ಅಪಾರ ಜನಮನ್ನಣೆ ಗಳಿಸಿದ್ದು, ಚಿತ್ರಮಂದಿರದಲ್ಲಿಯೇ 60ಕ್ಕೂ ಹೆಚ್ಚು ಕೋಟಿ ಗಳಿಸಿರುವುದಾಗಿ ವರದಿಯಾಗಿದೆ.  

ಪೋಕ್ಸೋ ಕಾಯ್ದೆಯ ದುರ್ಬಳಕೆ ಕುರಿತು ಆಗಾಗ ಮಾತುಗಳು ಕೇಳಿಬರುತ್ತಿರುತ್ತವೆ. ಇದೀಗ ಪೋಕ್ಸೋ ಕಾಯ್ದೆ ದುರ್ಬಳಕೆ ಕುರಿತ ಕತೆ ಹೊಂದಿರುವ ‘ಕೋರ್ಟ್‌’ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಮೂಲತಃ ತೆಲುಗು ಭಾಷೆಯ ಈ ಸಿನಿಮಾ ಕನ್ನಡದಲ್ಲಿಯೂ ಲಭ್ಯವಿದೆ.

ಕಡಿಮೆ ಬಜೆಟ್, ಹೆಚ್ಚು ಗಳಿಕೆ: ರಾಮ ಜಗದೀಶ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಸಿನಿಮಾದ ಬಜೆಟ್‌ 5 ರಿಂದ 10 ಕೋಟಿ ಎನ್ನಲಾಗಿದೆ. ಆದರೆ ಈ ಚಿತ್ರ ಅಪಾರ ಜನಮನ್ನಣೆ ಗಳಿಸಿದ್ದು, ಚಿತ್ರಮಂದಿರದಲ್ಲಿಯೇ 60ಕ್ಕೂ ಹೆಚ್ಚು ಕೋಟಿ ಗಳಿಸಿರುವುದಾಗಿ ವರದಿಯಾಗಿದೆ. ಇದೀಗ ಓಟಿಟಿಯಲ್ಲಿ ಟ್ರೆಂಡ್‌ ಆಗಿದೆ. ನಿರ್ದೇಶಕರು ನಿಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಒಂದು ಕಾಲ್ಪನಿಕ ಕತೆ ಹೆಣೆದಿದ್ದಾರೆ. ವ್ಯವಸ್ಥೆಯಲ್ಲಿ ಪೋಕ್ಸೋ ಹೇಗೆ ದುರ್ಬಳಕೆ ಆಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಒಳ್ಳೆಯ ಸ್ಕ್ರಿಪ್ಟ್‌ ಇದ್ದರೆ ಕಡಿಮೆ ಬಜೆಟ್‌ನ ಸಿನಿಮಾ ದೊಡ್ಡದಾಗಿ ಗೆಲ್ಲಬಹುದು ಎಂಬುದು ಈ ಸಿನಿಮಾ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ‘ಬಳಗಂ’ ಎಂಬ ಉತ್ತಮ ಚಿತ್ರದಲ್ಲಿ ನಟಿಸಿದ್ದ ಪ್ರಿಯದರ್ಶಿ ಪುಲಿಕೊಂಡ ‘ಕೋರ್ಟ್’ ಮೂಲಕ ಮತ್ತೊಂದು ಸಿನಿಮಾ ನೀಡಿದ್ದಾರೆ.

ಏನು ಕತೆ: ಸಿನಿಮಾ ಆರಂಭದಲ್ಲಿ ಒಬ್ಬ ಹುಡುಗ ಪೋಕ್ಸೋ ಕಾಯ್ದೆಯಡಿಯಲ್ಲಿ ಬಂಧಿತನಾಗಿರುತ್ತಾನೆ. ಅವನು ಏನು ಅಪರಾಧ ಮಾಡಿರುತ್ತಾನೆ, ನಿಜವಾಗಿಯೂ ಅಪರಾಧ ಮಾಡಿದ್ದಾನೆಯೇ ಎಂಬುದು ಮುಂದೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಇದು ತಂದೆ, ತಾಯಿ ಹಾಗೂ ಮಕ್ಕಳ ಬಾಂಧವ್ಯ ಮತ್ತು ನಿಜವಾದ ಲಾಯರ್ ಒಬ್ಬನ ಹೋರಾಟದ ಕತೆಯನ್ನು ಸಾರುವ ಕೋರ್ಟ್‌ ರೂಮ್‌ ಡ್ರಾಮಾ.

ಸಮಾಜಕ್ಕೆ ಉತ್ತಮ ಸಂದೇಶ ನೀಡದ ಜಾಹೀರಾತುಗಳನ್ನು ತಿರಸ್ಕರಿಸಿದ ಸಮಂತಾ

ಒಳ್ಳೆಯ ಚಿತ್ರಕ್ಕೆ ಬೆಂಬಲಿಸಿ ಮಾದರಿಯಾದ ನಾಣಿ: ಸೂಪರ್‌ಸ್ಟಾರ್‌ಗಳು ದೊಡ್ಡ ಬಜೆಟ್‌ನ ಸಿನಿಮಾ ಮಾಡುವುದು ಮಾತ್ರವಲ್ಲ, ಕಡಿಮೆ ಬಜೆಟ್‌ನ ಚಿತ್ರಕ್ಕೆ ಬೆಂಬಲವನ್ನೂ ಸೂಚಿಸಬೇಕು ಎಂಬುದನ್ನು ನಾಣಿ ಈ ಸಿನಿಮಾ ಮೂಲಕ ತೋರಿಸಿಕೊಟ್ಟಿದ್ದಾರೆ. ಈ ಸಿನಿಮಾ ಚೆನ್ನಾಗಿ ಎಂದು ತಿಳಿದುಕೊಂಡು ನಾಣಿ ಅದನ್ನು ಪ್ರೆಸೆಂಟ್‌ ಮಾಡಿದ್ದಾರೆ. ಆ ಮೂಲಕ ಚಿತ್ರವನ್ನು ಹೆಚ್ಚು ಜನರಿಗೆ ತಲುಪಲು ನೆರವಾಗಿದ್ದಾರೆ. ಇದೀಗ ಪೋಕ್ಸೋ ಕಾಯ್ದೆಯ ದುರ್ಬಳಕೆ ಕುರಿತು ಪ್ರೇಕ್ಷಕರು ಮಾತನಾಡುವಂತಾಗಿದೆ.