Asianet Suvarna News Asianet Suvarna News

ಮಿಸ್​ ಯೂನಿವರ್ಸ್​ ಕಿರೀಟಕ್ಕೆ ಕ್ಷಣಗಣನೆ: ಅಮೆರಿಕದಲ್ಲಿ ಕನ್ನಡತಿ ದಿವಿತಾ

ಭಾರತೀಯರು  ಅತಿ ಕುತೂಹಲದಿಂದ ಕಾಯುತ್ತಿರುವ ಮಿಸ್​ ಯೂನಿವರ್ಸ್​-2022ಗೆ ಕ್ಷಣಗಣನೆ ಆರಂಭವಾಗಿದ್ದು, ಕನ್ನಡತಿ ದಿವಿತಾರತ್ತ ಎಲ್ಲರ ಚಿತ್ತ ನೆಟ್ಟಿದೆ. 
 

Countdown to Miss Universe crown Kannadiga Divita Rai is in America
Author
First Published Jan 14, 2023, 11:37 PM IST

ಕಳೆದ ಆಗಸ್ಟ್​ನಲ್ಲಿ ನಡೆದಿದ್ದ ಮಿಸ್ ದಿವಾ ಯುನಿವರ್ಸ್ 2022ರ ಸೌಂದರ್ಯ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡದ ಬಂಟ್ವಾಳ ಮೂಲದ 23 ವರ್ಷದ ದಿವಿತಾ ರೈ ಕಿರೀಟ ಮುಡಿಲಿಗೇರಿಸಿಕೊಂಡಿದ್ದರು. 2021ರ ಮಿಸ್‌ ಯುನಿವರ್ಸ್ ಹರ್ನಾಜ್‌ ಸಂಧು ಅವರು  ವೈಭವೋಪೇತ ಸಮಾರಂಭದಲ್ಲಿ  ದಿವಿತಾ  ಅವರಿಗೆ ಕಿರೀಟ ಹಾಕಿದ್ದರು. ಇಂದು ದಿವಿತಾ ಅಮೆರಿಕಕ್ಕೆ ಹಾರಿದ್ದಾರೆ. ಇನ್ನು ಕೆಲವೇ ಕ್ಷಣಗಳಲ್ಲಿ ಅಲ್ಲಿ ಭುವನ ಸುಂದರಿ (Miss Universe) ಸ್ಪರ್ಧೆ ನಡೆಯಲಿದ್ದು, ಕಿರೀಟ ತೊಡಗಿಸಿಕೊಳ್ಳಲು ಎಲ್ಲ ದೇಶಗಳ ಸುಂದರಿಯರ ಜೊತೆ ಭಾರತದ ಈ ಸುಂದರಿ, ಕನ್ನಡತಿ ದಿವಿತಾ ಕಾತರರಾಗಿ ಕಾಯುತ್ತಿದ್ದಾರೆ. ಅಮೆರಿಕದ ನ್ಯೂ ಒರ್ಲಾನ್ಸೋದಲ್ಲಿ (New Orleans) ಈ ಸ್ಪರ್ಧೆ ಇಂದು ಆರಂಭವಾಗಿದೆ. ಇದಾಗಲೇ ಹಲವು ರೌಂಡ್ಸ್​ಗಳು ನಡೆದಿದ್ದು, ಸ್ಪರ್ಧೆಯ ಅಂತಿಮ ಸುತ್ತು ನಡೆಯುತ್ತಿದೆ.  ಕೆಲವೇ ಕ್ಷಣಗಳಲ್ಲಿ ಭುವನ ಸುಂದರಿಯ ಘೋಷಣೆಯಾಗಲಿದೆ. ಇದಾಗಲೇ  84 ದೇಶಗಳ ಸುಂದರಿಯರು (Beauties) ಅಮೆರಿಕಕ್ಕೆ ಧಾವಿಸಿದ್ದು, ಕಿರೀಟದ ಕನಸು ಹೊತ್ತುಕೊಂಡಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ಲಿವಾ ಮಿಸ್‌ ದಿವಾ ಯೂನಿವರ್ಸ್‌ 2022 ಕಿರೀಟ (Liva Miss Diva Universe) ಗೆದ್ದು ಬೆಂಗಳೂರಿಗೆ ಭೇಟಿ ನೀಡಿದ್ದ  ದಿವಿತಾ, 'ನನಗೆ ಮಿಸ್‌ ಯೂನಿವರ್ಸ್‌ ಕಿರೀಟ ಬಿಟ್ರೆ ಸದ್ಯ ಏನೂ ಕಾಣುತ್ತಿಲ್ಲ, ಇದೇ ನನ್ನ ಕನಸು, ಈಗ ಅದನ್ನು ಬಿಟ್ಟು   ಬೇರೇನೂ ಯೋಚಿಸುತ್ತಿಲ್ಲ' ಎಂದಿದ್ದರು. ಈಗ ಅವರ ಕನಸು ಈಡೇರುವ ಸಮಯ ಬಂದಿದೆ. ಕ್ಷಣಗಣನೆ ಆರಂಭವಾಗಿದೆ. ಇಡೀ ಭಾರತ ಅವರ ಗೆಲುವಿಗಾಗಿ ಕಾಯುತ್ತಿದ್ದರೆ, ವಿಶೇಷವಾಗಿ ಕರ್ನಾಟಕದ ಮಂದಿಯ ಲಕ್ಷ್ಯ ಅತ್ತ ನೆಟ್ಟಿದೆ. 

3 ತಿಂಗಳು ದುಬೈನಲ್ಲಿ ಬಾರ್‌ ಡ್ಯಾನ್ಸರ್‌ ಆಗಿದ್ದ ಕಿರುತೆರೆ ನಟಿ ಚಿತ್ರಾಲ್ ರಂಗಸ್ವಾಮಿ; ರೋಚಕ ಸಾಧನೆ ಕಥೆ ವೈರಲ್

ದಿವಿತಾ ರೈ ಮಿಸ್‌ ಯೂನಿವರ್ಸ್‌ ಅಂಗಳದಲ್ಲಿ ನಡೆದ ರಾಷ್ಟ್ರೀಯ ಉಡುಪು ಸುತ್ತಿನಲ್ಲಿ ಚಿನ್ನದ ಪಕ್ಷಿ (Golden Bird) ಥೀಮ್‌ನ ಉಡುಪು ಧರಿಸಿ ಕಂಗೊಳಿಸಿದ್ದರು. ಚಿನ್ನದ ಪಕ್ಷಿಯಂಥ ರೆಕ್ಕೆಗಳನ್ನು ವಿನ್ಯಾಸಗೊಳಿಸಿದ್ದ ಈ ಉಡುಪು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಥೇಟ್​ ಪರಿಯಂತೆ ಕಾಣಿಸುತ್ತಿದ್ದ ಈ ಸುಂದರಿಗೆ ಲಕ್ಷಾಂತರ ಮಂದಿ ಮನಸೋತಿದ್ದರು. ಈ ಕಾಸ್ಟ್ಯೂಮ್​ ಅನ್ನು  ಫ್ಯಾಷನ್‌ ಡಿಸೈನರ್‌ (Fashion Designer) ಅಭಿಷೇಕ್‌ ಶರ್ಮ ವಿನ್ಯಾಸಗೊಳಿಸಿದ್ದರು. ಮಧ್ಯಪ್ರದೇಶದ ಚಂದೇರಿಯ ಸಿಲ್ಕ್ ಟಿಶ್ಯೂನಿಂದ ವಿನ್ಯಾಸಗೊಂಡಿತ್ತು  ಈ  ಲೆಹೆಂಗಾ. ಚಿನ್ನ ಪಕ್ಷಿಯು ಭಾರತದ ಸಾಂಸ್ಕೃತಿಕ ಸಂಪತ್ತನ್ನು ಪ್ರತಿನಿಧಿಸುವ ಕಾರಣ ದಿವಿತಾ ರೈಗೆ ಈ ಡ್ರೆಸ್​ ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದ್ದರು. 

ಅಂದಹಾಗೆ ದಿವಿತಾ ಅವರ ಕುಟುಂಬದ ಬಗ್ಗೆ ಹೇಳುವುದಾದರೆ, ಅವರ ತಂದೆ ಸರ್ಕಾರಿ ನೌಕರಿಯಲ್ಲಿ ಇದ್ದುದರಿಂದ ಅವರಿಗೆ ಮೇಲಿಂದ ಮೇಲೆ ವರ್ಗಾವಣೆ ಆಗುತ್ತಿತ್ತು. ಆದ್ದರಿಂದ ದಿವಿತಾ ದೇಶದ ವಿವಿಧ ನಗರಗಳಲ್ಲಿ  ವಿದ್ಯಾಭ್ಯಾಸ ಮಾಡಿದ್ದಾರೆ. ಸದ್ಯ ಮುಂಬೈನಲ್ಲಿ (Mumbai) ನೆಲೆಸಿದ್ದಾರೆ. ಇವರು ಆರ್ಕಿಟೆಕ್ಟ್‌ ಓದಿದ್ದು, ಮಾಡೆಲ್‌ ವೃತ್ತಿ ಕೈಗೊಂಡಿದ್ದಾರೆ. ಮಾತ್ರವಲ್ಲದೇ  ಬ್ಯಾಡ್ಮಿಂಟನ್‌, ಬಾಸ್ಕೆಟ್‌ಬಾಲ್‌, ಪೈಂಟಿಂಗ್​ನಲ್ಲಿಯೂ ಅಪಾರ  ಆಸಕ್ತಿ ಉಳ್ಳವರು. ಸಂಗೀತ ಕೇಳುವುದು, ಪುಸ್ತಕ ಓದುವುದು ತಮ್ಮ ಹವ್ಯಾಸ ಎಂದು ಹೇಳಿಕೊಂಡಿದ್ದಾರೆ. 

ರಾಖಿ ಸಾವಂತ್​ ಮೈಸೂರಿನ ಸೊಸೆಯೇ! ಅಂತೂ ಮದ್ವೆ ಗಲಾಟೆಗೆ ಬಿತ್ತು ಬ್ರೇಕ್​...

ದಿವಿತಾ ಅವರು, 2021ರಲ್ಲಿ ಕ್ಯಾನ್ಸರ್‌ (Cancer) ಚಿಕಿತ್ಸೆ ಪಡೆಯಲು ಹಣಕಾಸಿನ ತೊಂದರೆ ಅನುಭವಿಸುತ್ತಿದ್ದ ಮಕ್ಕಳಿಗಾಗಿ ನಿಧಿ ಸಂಗ್ರಹಿಸಿ  ಅವರ ಚಿಕಿತ್ಸೆಗೆ ನೆರವಾಗಿದ್ದರು.  ಬಾಯಿಯ ಸ್ವಚ್ಛತೆ  ಅರಿವು ಮೂಡಿಸಲು ಡೆಂಟಲ್ ಕಿಟ್‌ಗಳನ್ನು ವಿತರಿಸಿದ್ದರು. 2021ರಲ್ಲಿ ಭುವನ ಸುಂದರಿ ಟೈಟಲ್ ಅನ್ನು ಭಾರತದವರೇ ಆದ ಹರ್ನಾಜ್ ಸಂಧು ಗೆದ್ದಿದ್ದರು. ಈ ಬಾರಿ ದಿವಿತಾ ರೈಗೆ (Divitha Rai) ಅಂಥದ್ದೊಂದು ಕಿರೀಟ ಗೆಲ್ಲುವ ಅವಕಾಶ ಸಿಕ್ಕಿದೆ. ಈ ಬಾರಿಯ ಭುವನ ಸುಂದರಿ ಕಿರೀಟ ಯಾರ ಪಾಲಾಗುತ್ತದೆಯೋ ನಾಳೆಯವರೆಗೂ ಕಾದು ನೋಡಬೇಕು. ಈ ಸ್ಪರ್ಧೆಯಲ್ಲಿ ದಿವಿತಾ ರೈ ಗೆದ್ದರೆ ಮಿಸ್‌ ಯೂನಿವರ್ಸ್ ಆದ ಭಾರತದ ಮೂರನೇಯವರು ಎಂಬ ಹೆಗ್ಗಳಿಕೆಗೆ ದಿವಿತಾರೈ ಪಾತ್ರರಾಗಲಿದ್ದಾರೆ.

Follow Us:
Download App:
  • android
  • ios