ತ್ತಮ ನಟಿ ಆಸ್ಕರ್ ಪ್ರಶಸ್ತಿಗೆ ಭಾಜನರಾದ ನಟಿ ಇಮಾ ಸ್ಟೋನ್ ಅವರು ಜಿಪ್ ಕಿತ್ತೋದಂತಹ ತೆರೆದ ಶೋಲ್ಡರ್‌ನ ಲಾಂಗ್ ಗವನ್‌ನಿಂದ ಮುಜುಗರಕ್ಕೀಡಾದಂತಹ ಘಟನೆ ನಡೆದಿದೆ. 

ಲಾಸ್ ಏಂಜಲೀಸ್: ಸಿನಿಮಾ ನಟ ನಟಿಯರು ಧರಿಸುವ ಧಿರಿಸುಗಳು ಕೆಲವೊಮ್ಮೆ ಅವರಿಗೆ ಇರಿಸು ಮುರಿಸಾಗುವುದು ಸಹಜ, ಕೆಲವೊಮ್ಮೆ ಡಿಸೈನರ್‌ಗಳ ಎಡವಟ್ಟಿನಿಂದ ಬಟ್ಟೆಗಳ ಗುಣಮಟ್ಟದ ಕೊರತೆಯಿಂದ ಸಾರ್ವಜನಿಕವಾಗಿಯೇ ನಟ ನಟಿಯರು ಮುಜುಗರಕ್ಕೊಳಗಾಗುತ್ತಾರೆ. ಅದೇ ರೀತಿ ಈಗ ಉತ್ತಮ ನಟಿ ಆಸ್ಕರ್ ಪ್ರಶಸ್ತಿಗೆ ಭಾಜನರಾದ ನಟಿ ಇಮಾ ಸ್ಟೋನ್ ಅವರು ಜಿಪ್ ಕಿತ್ತೋದಂತಹ ತೆರೆದ ಶೋಲ್ಡರ್‌ನ ಲಾಂಗ್ ಗವನ್‌ನಿಂದ ಮುಜುಗರಕ್ಕೀಡಾದಂತಹ ಘಟನೆ ನಡೆದಿದೆ. 

ಇಮಾ ಸ್ಟೋನ್‌ಗೆ ಹಾಲಿವುಡ್‌ನ 'ಫೂರ್ ತಿಂಗ್‌' ಸಿನಿಮಾದ ನಟನೆಗಾಗಿ ಬೆಸ್ಟ್ ನಟಿ ಪ್ರಶಸ್ತಿ ದೊರಕಿದೆ. ಪ್ರಶಸ್ತಿ ಸ್ವೀಕರಿಸಲು ಸ್ಟೇಜ್‌ಗೆ ಬಂದ ವೇಳೆ ಹಿಂಭಾಗದಲ್ಲಿ ಜಿಪ್ ಇದ್ದ ಈ ಲಾಂಗ್ ಗವನ್ನ ಜಿಪ್ ತೆರೆದುಕೊಂಡಿದ್ದು ನಟಿ ಮುಜುಗರಕ್ಕೀಡಾಗುವಂತಾಯಿತು. ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ 90 ಆಸ್ಕರ್ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದೆ. ಇಮಾ ಸ್ಟೋನ್‌ಗೆ ಉತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಪ್ರಶಸ್ತಿ ಸ್ವೀಕರಿಸುವ ಸಮಯದಲ್ಲಿಯೇ ತಮ್ಮ ಬಟ್ಟೆಯ ಈ ಅವಾಂತರ ನಟಿಯ ಗಮನಕ್ಕೆ ಬಂದಿದೆ. 

ಆಸ್ಕರ್‌ ಅವಾರ್ಡ್‌: ಬೆಸ್ಟ್ ಕಾಸ್ಟ್ಯೂಮ್ ಪ್ರಶಸ್ತಿ ನೀಡಲು ಬೆತ್ತಲಾಗಿ ಬಂದ ರೆಸ್ಲಿಂಗ್ ಸ್ಟಾರ್ ಜಾನ್ ಸೀನಾ

ಆಸ್ಕರ್‌ನ ಉತ್ತಮ ನಟಿ ಪ್ರಶಸ್ತಿ ಸ್ವೀಕರಿಸುವ ಸಲುವಾಗಿ ನಟಿ ಇಮಾ ಸ್ಟೋನ್, ಕ್ಯಾಲಿಫೋರ್ನಿಯಾದ ಲಾಸ್ ಏಂಜಲಿಸ್‌ನ ಡೊಲ್ಬಿ ಥಿಯೇಟರ್‌ನ ರೆಡ್ ಕಾರ್ಪೆಟ್ ಮೇಲೆ ಆಗಮಿಸಿದ್ದರು. ಲೂಯಿಸ್ ವೀಟಾನ್‌ದ ಈ ಐಷಾರಾಮಿ ಬ್ರಾಂಡ್‌ನ ಲಾಂಗ್ ಗವನ್ ಇದಾದರೂ ಸಮಾರಂಭದಲ್ಲೇ ಇದರ ಜಿಪ್ ಕಳಚುವ ಮೂಲಕ ನಟಿಗೆ ಮುಜುಗರ ತಂದಿಟ್ಟಿದೆ. ಅಂದಹಾಗೆ ಈ ಐಷಾರಾಮಿ ಧಿರಿಸಿನ ಜೊತೆ ನಟಿ 30 ಕ್ಯಾರೆಟ್‌ನ ಹಳದಿ ಡೈಮಂಡ್ ನೆಕ್ಲೇಸ್‌ ಧರಿಸಿದ್ದರು.

ಅನಿವಾರ್ಯವಾಗಿ ಇದೇ ಧಿರಿಸಿನಲ್ಲಿ ಪ್ರಶಸ್ತಿ ಸ್ವೀಕರಿಸಿದ ನಟಿ, ಸಮಾರಂಭದಲ್ಲೇ ಸ್ವಲ್ಪ ಇರಿಸುಮುರಿಸಿನಿಂದಲೇ ತನ್ನ ಈ ಐಷಾರಾಮಿ ಧಿರಿಸಿನ ಜಿಪ್ ಕಳಚಿದ್ದನ್ನು ಹೇಳಿಕೊಂಡರು. ಓಹ್ ಬಾಯ್ ನನ್ನ ಡ್ರೆಸ್ ಹರಿದು ಹೋಗಿದೆ ನಾನು ಜಸ್ಟ್ ವೇದಿಕೆಗೆ ಬಂದಾಗ ಈ ಅವಾಂತರ ನಡೆದಿದೆ ಎಂದೆನಿಸುತ್ತಿದೆ. ಆದರೂ ನಾನು ಚೆನ್ನಾಗಿ ಕಾಣಿಸುತ್ತಿರುವೆ ಎಂದು ವಿಶ್ವಾಸದಿಂದಲೇ ಮಾತನಾಡಿದ್ದಾರೆ. ಹಾಲಿವುಡ್‌ನ 'ಪೂರ್ ತಿಂಗ್‌' ಸಿನಿಮಾದ ಬೆಲ್ಲಾ ಬ್ಯಾಕ್ಸ್ಟರ್ ಪಾತ್ರಕ್ಕಾಗಿ ಇಮಾಗೆ ಉತ್ತಮ ನಟಿ ಪ್ರಶಸ್ತಿ ಲಭಿಸಿದೆ.