ಸುಕುಮಾರ್ ನಿರ್ದೇಶನದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ 'ಪುಷ್ಪ' ಚಿತ್ರದ ರೊಮ್ಯಾಂಟಿಕ್ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ.

ಸುಕುಮಾರ್ (Sukumar) ನಿರ್ದೇಶನದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಹಾಗೂ ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ 'ಪುಷ್ಪ' (Pushpa) ಚಿತ್ರದ ರೊಮ್ಯಾಂಟಿಕ್ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ. 'ಪುಷ್ಪ' ಚಿತ್ರದಲ್ಲಿ ರೊಮ್ಯಾಂಟಿಕ್ ದೃಶ್ಯಗಳು ಭಾರೀ ವಿವಾದ ಸೃಷ್ಟಿಸಿದ್ದು, ಈ ಸಿನಿಮಾದಲ್ಲಿ ನಾಯಕ, ನಾಯಕಿಯ ಎದೆಯನ್ನು ಮುಟ್ಟುವ ದೃಶ್ಯವಿದೆ. ಅದನ್ನು ನೋಡಿದ ಪ್ರೇಕ್ಷಕರು ಈ ದೃಶ್ಯ ಸಿನಿಮಾಗೆ ಅವಶ್ಯಕತೆ ಇರಲಿಲ್ಲ ಎಂದು ಹೇಳಿದ್ದು, ಹಾಗಾಗಿ ಆ ದೃಶ್ಯವನ್ನೇ ಚಿತ್ರತಂಡ ಚಿತ್ರದಿಂದ ಟ್ರಿಮ್ ಮಾಡಿದೆ.

ಹೌದು! 'ಪುಷ್ಪ' ಸಿನಿಮಾದಲ್ಲಿ ಪುಷ್ಪರಾಜ್ (ಅಲ್ಲು ಅರ್ಜುನ್) ಹಾಗೂ ಶ್ರೀವಲ್ಲಿ (ರಶ್ಮಿಕಾ ಮಂದಣ್ಣ) ನಡುವೆ ಕಾರಿನಲ್ಲಿ ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯವು ವಿವಾದಕ್ಕೀಡಾಗಿದ್ದು, ಇದು ಕುಟುಂಬದ ಜತೆ ಚಿತ್ರ ನೋಡಲು ಆಗಮಿಸುವ ಸಿನಿಪ್ರೇಕ್ಷಕರಿಗೆ ಇಷ್ಟವಾಗದೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಫುಲ್ ಚರ್ಚೆಯಾಗಿತ್ತು. ಇದರಿಂದಾಗಿ ಸುಮಾರು ಮೂರು ತಾಸಿನ ಸಿನಿಮಾದಿಂದ ವಿವಾದಾತ್ಮಕ ಸೀನ್‌ನ್ನು ಚಿತ್ರತಂಡ ಡಿಲೀಟ್ ಮಾಡಿದೆ. ಹಾಗೂ 'ಪುಷ್ಪ' ಚಿತ್ರ ಬಿಡುಗಡೆಯಾದ ಎರಡು ದಿನಗಳಲ್ಲೇ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿಗೂ ಹೆಚ್ಚು ಹಣವನ್ನು ಕೆಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.

Pushpa Bangalore Press meet: ತೆಲುಗು ಮಾತಾಡಿ ಕನ್ನಡನೇ ಬರ್ತಿಲ್ಲ ಎಂದ ರಶ್ಮಿಕಾ

ಇತ್ತೀಚೆಗೆ ನಡೆದ 'ಪುಷ್ಪ' ಚಿತ್ರದ ಪ್ರೆಸ್‌ಮೀಟ್‌ನಲ್ಲಿ ಮಾತನಾಡಿದ ಅಲ್ಲು ಅರ್ಜುನ್, 18 ವರ್ಷ ಇದ್ದಾಗ ನಾನು ಬೆಂಗಳೂರಿಗೆ ಬಂದಿದ್ದೆ. ಆಗ ನನ್ನ ಸಿನಿಮಾ ರಿಲೀಸ್ ಆಗುತ್ತೆ ಅಂತ ನಾನು ಅನ್ಕೊಂಡಿರಲಿಲ್ಲ. ಈಗ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಧನಂಜಯ್ ಸಿನಿಮಾದಲ್ಲಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್. ಕನ್ನಡದಿಂದ ಚಿತ್ರರಂಗಕ್ಕೆ ಬಂದ ರಶ್ಮಿಕಾ ಇವತ್ತು ದೇಶಾದ್ಯಂತ ಹೆಸರು ಮಾಡಿದ್ದಾರೆ. ಇದು ಕನ್ನಡಿಗರಿಗೆ ಹೆಮ್ಮೆ ವಿಚಾರ ಎಂದಿದ್ದಾರೆ. ಈ‌ ಸಿನಿಮಾಗೆ ಡಬ್ಬಿಂಗ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ. ದೇವಿ ಶ್ರೀ ಪ್ರಸಾದ್ ಅದ್ಭುತವಾದ ಮ್ಯೂಸಿಕ್ ಕೊಟ್ಟಿದ್ದಾರೆ. ಕರ್ನಾಟಕದಲ್ಲಿರೋ ನನ್ನ ಅಭಿಮಾನಿಗಳಿಗೆ ಧನ್ಯವಾದಗಳು ಎಂದಿದ್ದಾರೆ.



ತೆಲುಗು ಮಾತಾಡಿ ಮಾತಾಡಿ ನನಗೆ ಕನ್ನಡವೇ ಬರುತ್ತಿಲ್ಲ ಹಾಗೂ ನಮ್ಮೂರಿಗೆ ಬಂದು ತುಂಬಾ ಖುಷಿಯಾಗುತ್ತಿದೆ. 17ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾ ತುಂಬಾ ಚೆನ್ನಾಗಿ ಮಾಡಿದ್ದೇವೆ. ಶ್ರೀವಲ್ಲಿ ಪಾತ್ರ ನನಗೆ ತುಂಬಾ ಸ್ಪೆಷಲ್. ಪುಷ್ಪ' ಸಿನಿಮಾ ನಾರ್ಮಲ್ ಸ್ಟೋರಿ ಅಲ್ಲ. ಮುಖ್ಯವಾಗಿ ನಾನು ಅಲ್ಲು ಅರ್ಜುನ್ ಸರ್ ಜೊತೆ ನಟಿಸಿದ್ದು ತುಂಬಾ ಖುಷಿ ಕೊಟ್ಟಿದೆ. ಅಲ್ಲು ಅರ್ಜುನ್ ಸರ್‌ಗೆ ಇರುವ ಹೆಸರಿಗೆ ನಾನು ಫುಲ್ ಫಿಲ್ ಮಾಡುವಷ್ಟು ಕೆಲಸ ಮಾಡಿದ್ದೇನೆ. ಡಾಲಿ ಧನಂಜಯ್ ಜೊತೆ ಕೂಡ ನಟಿಸಿದ್ದೇನೆ. ಸೆಟ್‌ನಲ್ಲಿ ಅವರ ಜೊತೆ ಕನ್ನಡದಲ್ಲಿ ಮಾತನಾಡುತ್ತಿದ್ದೆ ಎಂದು ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ ಪ್ರೆಸ್‌ಮೀಟ್‌ನಲ್ಲಿ ಹೇಳಿದ್ದಾರೆ.

Pushpa Movie: ಅಭಿಮಾನಿಗಳಿಗೆ ಎಮೋಷನಲ್ ಪತ್ರ ಬರೆದ ಐಕಾನ್ ಸ್ಟಾರ್ ಅಲ್ಲು ಅರ್ಜುನ್

'ಪುಷ್ಪ: ದಿ ರೈಸ್' ಚಿತ್ರವನ್ನು ಮುತ್ತಂಶೆಟ್ಟಿ ಮೀಡಿಯಾ ಸಹಯೋಗದಲ್ಲಿ ಮೈತ್ರಿ ಮೂವೀ ಮೇಕರ್ಸ್ (Mythri Movie Makers) ನಿರ್ಮಿಸಿದೆ. ಮಲಯಾಳಂ ನಟ ಫಾಹದ್ ಫಾಸಿಲ್ (Fahadh Faasil) ಮುಖ್ಯ ವಿಲನ್ ಆಗಿ ನಟಿಸಿದ್ದಾರೆ. ಈಗಾಗಲೇ 'ಪುಷ್ಪ' ಸಿನಿಮಾ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಿದ್ದು, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ದೂರದ ಭಾಗಗಳಲ್ಲಿ ಕೆಂಪು ಚಂದನದ ಕಳ್ಳಸಾಗಣೆಯ ಕುರಿತಾದ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದೆ. ವಿಶೇಷವಾಗಿ ತೆಲುಗಿನ ಖ್ಯಾತ ನಟಿ ಸಮಂತಾ (Samantha) ಈ ಚಿತ್ರದ ಐಟಂ ಸಾಂಗ್‌ನಲ್ಲಿ ಅಭಿನಯಿಸಿದ್ದು ಇದು ಚಿತ್ರದ ಸ್ಪೆಷಲ್‌ ಅಟ್ರ್ಯಾಕ್ಷನ್‌ ಆಗಿದೆ.