Asianet Suvarna News Asianet Suvarna News

ವಿವಾದಕ್ಕೆ ಗುರಿಯಾಗಿ ತಿರಸ್ಕಾರಕ್ಕೂ ಒಳಗಾಗಿದ್ದ ಹಿಂದಿ ಚಿತ್ರವೇ 'OTT'ಯಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಸಿನಿಮಾ!

ಒಟಿಟಿ ಸಕ್ಸಸ್ ಮಾನದಂಡ ಹೆಚ್ಚಿನ ವೀಕ್ಷಣೆಯೇ ಆಗಿದ್ದರೆ, ಖಂಡಿತವಾಗಿಯೂ ಒಟಿಟಿ ಸಾಮ್ರಾಜ್ಯದಲ್ಲಿ ಬವಾಲ್ ದೊಡ್ಡ ಸಕ್ಸಸ್ ಕಂಡಿದೆ ಎಂದೇ ಹೇಳಬೇಕು. ಏಕೆಂದರೆ, 2023ರಲ್ಲಿ ಪ್ರದರ್ಶನ ಕಂಡ ಎಲ್ಲಾ ಚಿತ್ರಗಳಲ್ಲಿ ಈ ಚಿತ್ರವನ್ನೇ ಜನರು ಅಥವಾ ಸಿನಿಮಾ ಪ್ರೇಕ್ಷಕರು ಹೆಚ್ಚು ನೋಡಿದ್ದಾರೆ.

Controversial bollywood film is most watched hindi film on OTT in the year 2023
Author
First Published Jan 17, 2024, 11:15 PM IST | Last Updated Jan 17, 2024, 11:22 PM IST

ಕಳೆದ ವರ್ಷ, ಅಂದರೆ 2023ರಲ್ಲಿ ಒಟಿಟಿ (OTT)ಯಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಹಿಂದಿ ಚಿತ್ರ ಯಾವುದು ಎಂಬುದಕ್ಕೆ ಉತ್ತರ ಸಿಕ್ಕಿದೆ. ಹಲವರು ಅಂದುಕೊಂಡಂತೆ ಆರ್ಚಿಸ್ (Archies) ಆಗಲೀ, ಲಸ್ಟ್ (Lust Stories 2)ಆಗಲೀ ಅಥವಾ ಮಿಷನ್ ಮಜ್ನು (Mission Majnu) ಆಗಲೀ ಅಲ್ಲ, ಬದಲಿಗೆ ಬೇರೊಂದು ಸಿನಿಮಾ. ಅದನ್ನು ಯಾರೂ ಊಹಿಸಲೂ ಅಸಾಧ್ಯ. ಏಕೆಂದರೆ, ಅದೊಂದು ವಿವಾದಾತ್ಮಕ ಚಿತ್ರವಾಗಿದ್ದು, ತಿರಸ್ಕಾರಕ್ಕೆ ಗುರಿಯಾಗಿತ್ತು.

ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ಲಾಟ್‌ಫಾರಂ ಒಂದರ ಸರ್ವೇ ಪ್ರಕಾರ, ಭಾರತದಲ್ಲಿ ಒಟಿಟಿ ಮೂಲಕ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ಹಿಂದಿ ಚಿತ್ರದಲ್ಲಿ ನಂ 1 ಸ್ಥಾನದಲ್ಲಿರುವುದು ಯಾವುದು ಎಂಬುದು ಇದೀಗ ಜಗಜ್ಜಾಹೀರಾಗಿದೆ. ಶಾಹಿದ್ ಕಪೂರ್ ನಟನೆಯ 'ಬ್ಲಡಿ ಡ್ಯಾಡಿ' ಚಿತ್ರವು ಎರಡನೇ ಸ್ಥಾನ ಪಡೆದರೆ, ಮೂರನೆಯ ಸ್ಥಾನವನ್ನು ಮನೋಜ್ ಬಾಜಪೇಯಿ ಹಾಗೂ ಶರ್ಮಿಳಾ ಟಾಗೋರ್ ಜೋಡಿಯ ''ಗುಲ್‌ಮೊಹರ್' ಚಿತ್ರ ಬಾಚಿಕೊಂಡಿದೆ. ಹಾಗಿದ್ದರೆ ಮೊದಲ ಸ್ಥಾನ ಪಡೆದ ಚಿತ್ರ ಯಾವುದು?

ಒಟಿಟಿ ವೇದಿಕೆಯಲ್ಲಿ ಮೊದಲ ಸ್ಥಾನ ಪಡೆದ ಸಿನಿಮಾ, ಜಾಹ್ನವಿ ಕಪೂರ್ (Janhvi Kapoor) ಹಾಗೂ ವರುಣ್ ಧವನ್ (Varun Dhawan)ಜೋಡಿಯ 'ಬವಾಲ್'. ಬಿಡುಗಡೆಗು ಮೊದಲೇ ಸಾಕಷ್ಟು ವಿವಾದಕ್ಕೆ ತುತ್ತಾಗಿದ್ದ ಬವಾಲ್ (Bawaal)ಚಿತ್ರವು ಒಟಿಟಿಯಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದುಕೊಂಡಿರುವ ಸಿನಿಮಾ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಮೊದಲು ಥಿಯೇಟರ್‌ನಲ್ಲಿ ಬಿಡುಗಡೆ ಕಂಡ ಈ ಸಿನಿಮಾ, ತನ್ನ ಸೂಕ್ಷ್ಮತೆಯಿಲ್ಲದ ಸಬ್ಜೆಕ್ಟ್‌ ಮೂಲಕ ಹಲವರಿಗೆ ಕೋಪ ಕೆರಳಿಸಿತ್ತು. ಇದೊಂದು ಅಧಿಕ ಪ್ರಸಂಗಗ ಕಥೆ ಒಳಗೊಂಡ ಸಿನಿಮಾ ಎಂದು ಹಲವರು ಟೀಕಿಸಿದ್ದರು. 

Controversial bollywood film is most watched hindi film on OTT in the year 2023

ಹಾಗಿದ್ದರೆ ಈ ಸಿನಿಮಾದಲ್ಲಿ ಅಂತಹುದು ಏನಿತ್ತು ಗೊತ್ತಾ? ಬವಾಲ್ ಚಿತ್ರದ ಕಥೆ ಅಡಾಲ್ಫ್ ಹಿಟ್ಲರ್ (Adolf Hitler) ಮತ್ತು ಹೋಲೋಕಾಸ್ಟ್ (Holocaust) ಸ್ಟೋರಿಯಾಗಿದ್ದು ಬಹಳಷ್ಟು ವಿವಾದಾತ್ಮಕ ವಿಷಯಗಳನ್ನು ಒಳಗೊಂಡಿತ್ತು. ಈ ಕಾರಣಕ್ಕೆ ಅದು ಚಿತ್ರಮಂದಿರದಲ್ಲಿ ನೋಡಿದ ಪ್ರೇಕ್ಷಕರಿಂದ ಟೀಕೆಗೆ ಗುರಿಯಾಗಿ ತಿರಸ್ಕಾರಕ್ಕೆ ಒಳಗಾಗಿತ್ತು. ಆದರೆ, ಅದೇ ಚಿತ್ರ ಒಟಿಟಿ ಫ್ಲಾಟ್‌ ಫಾರಂನಲ್ಲಿ ಬಂದು ಸೂಪರ್ ಹಿಟ್ ಎನಿಸಿಕೊಂಡಿದೆ ಎನ್ನಬಹುದು. 

Controversial bollywood film is most watched hindi film on OTT in the year 2023

ಒಟಿಟಿ ಸಕ್ಸಸ್ ಮಾನದಂಡ ಹೆಚ್ಚಿನ ವೀಕ್ಷಣೆಯೇ ಆಗಿದ್ದರೆ, ಖಂಡಿತವಾಗಿಯೂ ಒಟಿಟಿ ಸಾಮ್ರಾಜ್ಯದಲ್ಲಿ ಬವಾಲ್ ದೊಡ್ಡ ಸಕ್ಸಸ್ ಕಂಡಿದೆ ಎಂದೇ ಹೇಳಬೇಕು. ಏಕೆಂದರೆ, 2023ರಲ್ಲಿ ಪ್ರದರ್ಶನ ಕಂಡ ಎಲ್ಲಾ ಚಿತ್ರಗಳಲ್ಲಿ ಈ ಚಿತ್ರವನ್ನೇ ಜನರು ಅಥವಾ ಸಿನಿಮಾ ಪ್ರೇಕ್ಷಕರು ಹೆಚ್ಚು ನೋಡಿದ್ದಾರೆ ಎಂದರೆ, ಅದನ್ನು ಜನರು ಇಷ್ಟಪಟ್ಟು ನೋಡಿದ್ದಾರೆ ಎಂತಲೇ ಭಾವಿಸಬಹುದೇ? 

ಸಂಗೀತಾ ವಿರುದ್ಧ ಯಾಕೆ ರಾಕ್ಷಸನಂತೆ ರೋಷಾವೇಶ ತಾಳಿದ್ರು ವರ್ತೂರು ಸಂತೋಷ್!

ಗೊತ್ತಿಲ್ಲ ಎನ್ನವುದು ಉತ್ತರವಾದರೆ, ಹಾಗಿದ್ದರೆ ಕಡಿಮೆ ಜನರು ನೋಡಿದರೆ ಅದು ಉತ್ತಮ ಚಿತ್ರವೇ ಎಂಬ ಪ್ರಶ್ನೆ ಕೇಳಲೇಬೇಕಾಗುತ್ತದೆ. ಹೀಗಾಗಿ, ಬವಾಲ್ ಚಿತ್ರವು ಒಟಿಟಿ ಯಲ್ಲಿ ಸೂಪರ್ ಹಿಟ್ ಆಗಿದೆ ಎಂತಲೇ ಹೇಳಬೇಕಾಗುತ್ತದೆ. ವಿವಾದ ಏನೇ ಇದ್ದರೂ ಜನರಂತೂ ಸಿನಿಮಾ ನೋಡಿದ್ದಾರೆ, ಸಿನಿಮಾ ನಿರ್ಮಾಪಕರ ಉದ್ದೇಶವಂತೂ ಈಡೇರಿದೆ ಎನ್ನಬಹುದು!.

ಕುಂಬಾರನಹಳ್ಳಿಯಲ್ಲಿ ಸುತ್ತಾಡಿದ ದುನಿಯಾ ವಿಜಯ್; ಹುಟ್ಟುಹಬ್ಬದ ಹೊಸ್ತಿಲಲ್ಲಿ ಖುಷಿ ಧಮಾಕಾ!

Latest Videos
Follow Us:
Download App:
  • android
  • ios