ಕೊಮೆಡಿಯನ್ ಭಾರ್ತಿ ಸಿಂಗ್ ಮತ್ತು ಆಕೆಯ ಪತಿ ಹರ್ಷ್ ಲಿಂಬಾಚಿಯಾ ಅವರಿಗೆ ಎನ್‌ಸಿಬಿ ವಿಚಾರಣೆಗೆ ಹಾಜರಾಗಲು ನೋಟಿಸ್ ಕಳುಹಿಸಿದೆ. ಇಬ್ಬರೂ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂಬ ಆರೋಪದ ಮೇಲೆ ಎನ್‌ಸಿಬಿ ಬಾಲಿವುಡ್ ಸೆಲೆಬ್ರಿಟಿ ಕಪಲ್‌ಗಳ ಮುಂಬೈ ಮನೆ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿತ್ತು.

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ನಡೆದಿದ್ದ ಎನ್‌ಸಿಬಿ ತನಿಖೆ ನಂತರ ಬಹಳಷ್ಟು ಬಾಲಿವುಡ್ ಸೆಲೆಬ್ರಿಟಿಗಳ ಮನೆಯಲ್ಲಿ ರೈಡ್ ಆಗಿದೆ. ನಟನ ಸಾವಿನ ನಂತರ ಬಾಲಿವುಡ್ ಡ್ರಗ್ಸ್ ಮಾಫಿಯಾ ಚರ್ಚೆ ಮುನ್ನೆಲೆಗೆ ಬಂದಿದ್ದು, ಬಹಳಷ್ಟು ಟಾಪ್ ಸೆಲೆಬ್ರಿಟಿಗಳನ್ನು ಈಗಾಗಲೇ ಎನ್‌ಸಿಬಿ ವಿಚಾರಣೆಗೊಳಪಡಿಸಿದೆ.

ಡ್ರಗ್ಸ್ ದಂಧೆ: ದೀಪಿಕಾ ಮ್ಯಾನೇಜರ್ ಕೆಲಸದಿಂದ ಔಟ್..!

ಈ ಹಿಂದೆ ಬಾಲಿವುಡ್ ನಟಿಯರಾದ ರಿಯಾ ಚಕ್ರವರ್ತಿ, ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ರಾಕುಲ್ ಪ್ರೀತ್ ಸಿಂಗ್, ಶ್ರದ್ಧಾ ಕಪೂರ್ ಕೂಡಾ ವಿಚಾರಣೆಗೆ ಹಾಜರಾಗಿದ್ದರು.

ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಅವರ ಮನೆಯ ಮೇಲೆಯೂ ಇತ್ತೀಚೆಗಷ್ಟೇ ಎನ್‌ಸಿಬಿ ದಾಳಿ ನಡೆಸಿತ್ತು. ವಿಚಾರಣೆಗೆ ಹಾಜರಾಗಲು ತಿಳಿಸಿದ್ದರೂ, ದೀಪಿಕಾ ಮ್ಯಾನೇಜರ್ ಮಾತ್ರ ಹಠಾತ್ತನೆ ತಪ್ಪಿಸಿಕೊಂಡಿದ್ದರು.