ಸಾಹಿತ್ಯ, ಸಂಗೀತ, ದೃಶ್ಯ ಒಳಗೊಂಡಿದ್ದೇ ಸಿನಿಮಾ. ಕ್ರಿಯಾಶೀಲತೆಯಿಂದ ಬಳಸಿಕೊಂಡರೆ ಇದರಂತ ಇನ್ನೊಂದು ಅದ್ಭುತವಾದ ಮಾಧ್ಯಮವಿಲ್ಲ ಎಂದಿದ್ದರು ಕಲಾವಿದ ಎಂಎಫ್ ಹುಸೈನ್.

ಕಲಾವಿದ ಹುಸೈನ್ ರೋಡ್ ನಂ. 12, ಬಂಜರಾ ಹಿಲ್ಸ್ನಲ್ಲಿ ಆರಂಭಿಸಿದ್ದ ಮ್ಯೂಸಿಯಂ ಸಿನಿಮಾ ಘರ್ ಇದಕ್ಕೊಂದು ಸುಂದರ ಉದಾಹರಣೆಯಾಗಿತ್ತು. ಇದರಲ್ಲಿ ಆರ್ಟ್ ವರ್ಕ್, ಪುಸ್ತಕ, ಸಿಡಿಗಳೂ ತುಂಬಿದ್ದವು.

BJP ಸೇರಿದ ಬೆಂಗಾಲಿ ಬ್ಯೂಟಿ: ನಟಿಯ ಹಾಟ್ ಫೋಟೋಸ್ ವೈರಲ್

1999ರಲ್ಲಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಉದ್ಘಾಟಿಸಿದ್ದ ಈ ಸುಂದರವಾದ ಮ್ಯೂಸಿಯಂ ನೆಲಸಮವಾಗಿ ಈಗ ವಾಣಿಜ್ಯ ಕಟ್ಟಡವೊಂದು ತಲೆ ಎತ್ತಲು ಸಜ್ಜಾಗಿದೆ.

ಈ ಮೂಲಕ ಹೈದರಾಬಾದ್ನೊಂದಿಗೆ ಹುಸೈನ್ಗಿದ್ದ ಸಂಬಂಧದ ಕೊಂಡಿಯೂ ಕಳಚಿದಂತಾಗಿದೆ. ಹಳೆಯ ನಗರದಲ್ಲಿ ಬರಿಗಾಲಲ್ಲಿ ನಡೆದು, ಇರಾನಿ ಚಹಾದ ಸವಿ ಪಡೆಯುತ್ತಿದ್ದ ಹುಸೈನ್ಗೆ ಹೈದರಾಬಾದ್ ಜೊತೆಗೆ ಗಾಢ ಸಂಬಂಧವಿತ್ತು.

ನೋಡೋಕೆ ಬಲೂನ್‌ ಆದರೆ ಇದು ಪಕ್ಕಾ ಆಟಂ ಬಾಂಬ್‌; ಪ್ರಿಯಾಂಕಾ ಚೋಪ್ರಾ ಟ್ರೋಲ್!

ಆದರೆ ಈ ಕಟ್ಟಡ ನೆಲಸಮವಾಗುವುದರೊಂದಿಗೆ ಅದೂ ಇಲ್ಲದಾಗಿದೆ. ಹುಸೈನ್ ಅವರ ಕುಟುಂಬ ಕಳೆದ ವರ್ಷವಷ್ಟೇ ಈ ಕಟ್ಟಡವನ್ನು ಮಾರಾಟ ಮಾಡಿದ್ದರು. ಇಲ್ಲಿದ್ದ ಕಲೆಕ್ಷನ್ಗಳನ್ನು ಹುಸೈನ್ ಅವರು ಲಂಡನ್ನಲ್ಲಿ ತೀರಿಕೊಂಡಾಗ 2011ರಲ್ಲಿ ಮುಂಬೈಗೆ ಶಿಫ್ಟ್ ಮಾಡಲಾಗಿತ್ತು.

ಈ ಕಟ್ಟಡದ ವಿಶೇಷವೆಂದರೆ ಆ ಗೋಡೆಗಳ ತುಂಬೆಲ್ಲ ಹುಸೈನ್ ಅವರ ಕೈಚಳಕವಿತ್ತು. ಗೋಡೆಯ ತುಂಬಾ ಅವರೇ ಬ್ರಶ್ ಹಿಡಿದು ಬಣ್ಣ ತುಂಬಿದ್ದರು. ದಾದಾ ಸಾಹೇಬ್ ಫಾಲ್ಕೆ, ಟಬು, ಮಾಧುರಿ ದೀಕ್ಷಿತ್ ಸೇರಿ ಹಲವರಿಗಾಗಿ ಡೆಡಿಕೇಟ್ ಮಾಡಲಾಗಿದ್ದ ಫೋಟೋಗ್ರಾಫ್ಗಳಿದ್ದವು.
ಇದರಲ್ಲಿ ಬೀಟ್ಲಿ ಅವರ ಡಿಜಿಟಲ್ ಆಲ್ಬಂ, ಎಆರ್ ರಹಮಾನ್, ಮಾರ್ತ ಗ್ರಹಂ ಅವರ ಆಲ್ಬಂಗಳೂ ಇದ್ದವು.

ಸಂಬಂಧಿಕರ ಮದುವೆಯಲ್ಲಿ ಆರಾಧ್ಯ ಬಚ್ಚನ್ ಡ್ಯಾನ್ಸ್: ಸ್ಟಾರ್ ಆಗೋದು ಗ್ಯಾರಂಟಿ

50 ಜನರು ಕೂರುವ ಸೌಂದರ್ಯ ಟಾಕೀಸ್ ಎಂಬ ಚಿತ್ರಮಂದಿರವೂ ಇತ್ತು. ಇದರಲ್ಲಿ ಆಧುನಿಕ ಸೌಂಡ್ ಸಿಸ್ಟಮ್ ಅಳವಡಿಸಲಾಗಿತ್ತು.
ಅಲ್ಲಿದ್ದ ಗ್ರಂಥಾಲಯದಲ್ಲಿ 2 ಸಾವಿರ ಪುಸ್ತಕಗಳಿದ್ದವು. ಸಿನಿಮಾ, ಸಂಗೀತ, ನೃತ್ಯ, ವಿಜ್ಞಾನ, ತಂತ್ರಜ್ಞಾನಕಕ್ಎ ಸಂಬಂಧಿಸಿದ ಪುಸ್ತಕ ಸಂಗ್ರಹವಿತ್ತು.