Asianet Suvarna News Asianet Suvarna News

'ಆವೆಂಜರ್' ಸ್ಟಾರ್ ಕ್ರಿಸ್ ಹೆಮ್ಸ್‌ವರ್ತ್‌ಗೆ ಮರೆವಿನ ಕಾಯಿಲೆ; ಸಿನಿಮಾದಿಂದ ಬ್ರೇಕ್ ಪಡೆದ ಹಾಲಿವುಡ್ ನಟ

ಮಾರ್ವೆಲ್‌ನ ಥಾರ್ ಖ್ಯಾತಿಯ ಹಾಲಿವುಡ್ ಸ್ಟಾರ್ ಕ್ರಿಸ್ ಹೆಮ್ಸ್‌ವರ್ತ್ ಮರೆವಿನ ಕಾಯಿಲೆಯಿಂದ ಬಳುತ್ತಿದ್ದಾರೆ. ಈ ಬಗ್ಗೆ ಸ್ವತಃ  ಕ್ರಿಸ್ ಹೆಮ್ಸ್‌ವರ್ತ್ ಬಹಿರಂಗ ಪಡಿಸಿದ್ದು ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆಯುವುದಾಗಿ ಹೇಳಿದ್ದಾರೆ.

Chris Hemsworth Reveals He Is At High Risk Of Alzheimer's disease sgk
Author
First Published Nov 19, 2022, 2:24 PM IST

ಮಾರ್ವೆಲ್‌ನ ಥಾರ್ ಖ್ಯಾತಿಯ ಹಾಲಿವುಡ್ ಸ್ಟಾರ್ ಕ್ರಿಸ್ ಹೆಮ್ಸ್‌ವರ್ತ್ ಅನಾರೋಗ್ಯದಿಂದ ಬಳುತ್ತಿದ್ದಾರೆ. ಈ ಬಗ್ಗೆ ಸ್ವತಃ  ಕ್ರಿಸ್ ಹೆಮ್ಸ್‌ವರ್ತ್ ಬಹಿರಂಗ ಪಡಿಸಿದ್ದು ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆಯುವುದಾಗಿ ಹೇಳಿದ್ದಾರೆ. ಸ್ಟಾರ್ ನಟ ಹೆಮ್ಸ್‌ವರ್ತ್ ಅನುವಂಶಿಕ ಆಲ್ಝೈಮರ್ ಕಾಯಿಲೆಗೆ ಒಳಗಾಗಿದ್ದಾರೆ ಎಂದು ಇತ್ತೀಚಿಗಷ್ಟೆ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದರು. ತಾಯಿ ಮತ್ತು ತಂದೆಯಿಂದ ಆಲ್ಝೈಮರ್‌ ಅನ್ನು ಅನುವಂಶಿಕವಾಗಿ ಪಡೆದಿದ್ದೇನೆ ಎಂದು ಕ್ರಿಸ್ ಹೇಳಿದರು. ಲಿಮಿಟ್‌ಲೆಸ್ ಶೋನಲ್ಲಿ ಮಾತನಾಡಿದ ಕ್ರಿಸ್ ಇದು ಪೂರ್ವ ನಿರ್ಣಯಾತ್ಮಕ ಜೀನ್ ಅಲ್ಲ. ಆದರೆ ಇದು ಬಲವಾದ ಸೂಚನೆಯಾಗಿದೆ. ಹತ್ತು ವರ್ಷಗಳ ಹಿಂದೆಯೇ ಇದು ನಿರ್ಣಾಯಕ ಎಂದು ನಾನು ಭಾವಿಸಿದ್ದೆ' ಎಂದು ಹೇಳಿದರು.   

ಆಲ್ಝೈಮರ್ನ ಬೆಳವಣಿ ಅಪಾಯವನ್ನು ಹೆಚ್ಚಿಸಬಹುದು ಎಂದು ಕ್ರಿಸ್ ಆತಂಕ ಹೊರಹಾಕಿದರು. 'ವ್ಯಾನಿಟಿ ಫೇರ್‌'ಗೆ ನೀಡಿದ ಸಂದರ್ಶನದಲ್ಲಿ ಕ್ರಿಸ್ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದರು. ಡಿಸ್ನಿ ಪ್ಲಸ್‌ನಲ್ಲಿ ಸ್ಟ್ರೀಮಿಂಗ್ ಆಗುವ ಹೊಸ ಡಾಕ್ಯುಸಿರೀಸ್‌ ಚಿತ್ರೀಕರಣದ ಸಮಯದಲ್ಲಿ ಪರೀಕ್ಷೆಗೆ  ಒಳಗಾದಾಗ ಈ ರೋಗಕ್ಕೆ ಒಳಗಾಗಿರುವುದು ತಿಳಿದು ಬಂತು ಎಂದು  39 ವರ್ಷದ ಆಸ್ಟ್ರೇಲಿಯಾ ಮೂಲದ ಖ್ಯಾತ ಹಾಲಿವುಡ್ ನಟ ಕ್ರಿಸ್ ಬಹಿರಂಗ ಪಡಿಸಿದರು.  ಇದು ಸಾವಿರ ಜನರಲ್ಲಿ ಒಬ್ಬರಿಗೆ ಅಥವಾ 10,000 ರಲ್ಲಿ ಒಬ್ಬರಿಗೆ ಬರುವುದು ಸರಿಯಾಗಿ ನನಗೆ ನೆನಪಿಲ್ಲ. ನನ್ನ ನೆನಪಿನ ಶಕ್ತಿ ಕಡಿಮೆಯಾಗುತ್ತಿದೆ ಎಂದರು. ಇನ್ನು ಈ ರೋಗ ನನಗೆ ಆಶ್ಚರ್ಯ ತಂದಿಲ್ಲ ಯಾಕೆಂದರೆ ತನ್ನ ತಾತ ಕೂಡ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಹೇಳಿದರು. 

World Alzheimers Day: ಮರೆವಿನ ಕಾಯಿಲೆ ಇರೋರ ಆರೈಕೆ ಮಾಡೋದು ಹೇಗೆ ?

ಈ ಕಾಯಿಲೆ ನನಗೆ ಸ್ವಲ್ಪ ಸಮಯ ಬ್ರೇಕ್ ತೆಗೆದುಕೊಳ್ಳುವಂತೆ ಮಾಡಿತು. ಈಗಾಗಲೇ ಸಹಿ ಹಾಕಿದ ಎಲ್ಲಾ ಪ್ರಾಜೆಕ್ಟ್ ಮುಗಿಸುತ್ತೇನೆ. ಈ ವಾರದ ನನ್ನ ಟ್ರಿಪ್ ಕೂಡ ಮುಗಿಯಲಿದೆ. ಬಳಿಕ ನಾನು ಮನೆಗೆ ಹೋಗಿ ಅಲ್ಲಿ ಸಮಯಕಳೆಯುತ್ತೇನೆ. ನನ್ನ ಮಕ್ಕಳ ಜೊತೆ ಪತ್ನಿ ಜೊತೆ ಇರುತ್ತೇನೆ ಎಂದು ಕ್ರಿಸ್ ಹೇಳಿದರು. 

ಹಾಲಿವುಡ್‌ ಮಾರ್ಕೆಟ್ ಮೇಲೆ ಕಣ್ಣಿಟ್ಟ ರಾಜಮೌಳಿ; ಮಹೇಶ್ ಬಾಬು ಚಿತ್ರಕ್ಕೆ 'ಆವೆಂಜರ್' ಸ್ಟಾರ್ ಕರೆತಂದ ನಿರ್ದೇಶಕ

ಕ್ರಿಸ್ ಹೆಮ್ಸ್‌ವರ್ತ್ ಸದ್ಯ ನ್ಯಾಷನಲ್ ಜಿಯಾಗ್ರಫಿಕ್‌ನ ಲಿಮಿಟ್‌ಲೆಸ್ ಸರಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲಿ ಈ ಮಾತುಗಳನ್ನು ಕ್ರಿಸ್ ಹೇಳಿದ್ದರು. ಆ ದೃಶ್ಯವನ್ನು ಕತ್ತರಿಸಲು ನಿರ್ಧಸಿದ್ದ ಡಿಸ್ನಿ ಪ್ಲಸ್‌ಗೆ ಕ್ರಿಸ್ ಬೇಡ ಎಂದು ಹೇಳಿರುವುದಾಗಿ ಬಹಿರಂಗ ಪಡಿಸಿದರು. 'ಇದು ಜನರು ತಮ್ಮನ್ನು ತಾವು ಉತ್ತಮವಾಗಿ ನೋಡಿಕೊಳ್ಳಲು ಪ್ರೇರಕವಾಗುತ್ತದೆ. ನಾನು ಇದನ್ನು ನಾಟಕೀಯವಾಗಿ ಬಳಸಿಕೊಳ್ಳಲು ಇಷ್ಟಪಡುವುದಿಲ್ಲ' ಎಂದು ಹೇಳಿದರು.  

ಇತ್ತೀಚಿಗಷ್ಟೆ ಕ್ರಿಸ್ ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ಅವರ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಮಹೇಶ್ ಬಾಬು ಜೊತೆ ರಾಜಮೌಳಿ ಸಿನಿಮಾ ಮಾಡುತ್ತಿದ್ದು ಆ ಸಿನಿಮಾದಲ್ಲಿ ಕ್ರಿಸ್ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಈ ಬಗ್ಗೆ ರಾಜಮೌಳಿ ಕಡೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.  

 

Follow Us:
Download App:
  • android
  • ios