ತೆಲುಗು ಚಿತ್ರರಂಗದ ಖ್ಯಾತ ನೃತ್ಯ ಸಂಯೋಜಕ ಶೇಖರ್ ಮಾಸ್ಟರ್ ಪ್ರಯಾಣಿಸುತ್ತಿದ್ದ ಕಾರಿಗೆ ಮುಚ್ಚಿಂಥಲ್ ಬಳಿ ಲಾರಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರು ನುಜ್ಜುಗುಜ್ಜಾಗಿದ್ದು, ಶೇಖರ್ ಮಾಸ್ಟರ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರು ತನಿಖೆ ಚುರುಕು.

ತೆಲುಗು ಚಿತ್ರರಂಗದ(Tollywood) ಖ್ಯಾತ ನೃತ್ಯ ಸಂಯೋಜಕ(Tollywood Choreographer) ಶೇಖರ್ ಮಾಸ್ಟರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ(Shekhar Master's Car Accident) ಅಪಘಾತಕ್ಕೀಡಾದ ಆಘಾತಕಾರಿ ಘಟನೆ ಬುಧವಾರ ರಾತ್ರಿ ನಡೆದಿದೆ.

ಚಿರಂಜೀವಿ ಅವರ 'ಕಾಕಾ' ಚಿತ್ರದ ಹಾಡಿನ ಚಿತ್ರೀಕರಣ ಮುಗಿಸಿ ಹೈದ್ರಾಬಾದ್‌ಗೆ ಹಿಂತಿರುಗುತ್ತಿದ್ದ ವೇಳೆ ಮುಚ್ಚಿಂಥಲ್ ಬಳಿ ಪ್ರಯಾಣಿಸುತ್ತಿದ್ದ ವೇಳೆ ಹಣ್ಣುಗಳು ತುಂಬಿಕೊಂಡು ಹೊರಟಿದ್ದ ಲಾರಿಯೊಂದು ಕಾರಿಗೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ದುರ್ಘಟನೆಯಲ್ಲಿ ಕಾರು ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಶೇಖರ್ ಮಾಸ್ಟರ್‌ಗೆ ಸಣ್ಣಪುಟ್ಟ ಗಾಯಗಳು ಹೊರತಾಗಿ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಅವರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಅಪಾಯದಿಂದ ಪಾರಾಗಿದ್ದಾರೆ.

ಎಲ್ಲಿ ಅಪಘಾತ ಸಂಭವಿಸಿದ್ದು

ಮಹೇಶ್ವರಂ ವ್ಯಾಪ್ತಿಯ ಗೊಲ್ಲೂರಿನಲ್ಲಿ ಚಿರಂಜೀವಿ ಅವರ ಮುಂಬರುವ 'ಕಾಕಾ' ಚಿತ್ರದ ಹಾಡಿನ ಚಿತ್ರೀಕರಣದಲ್ಲಿ ತೊಡಗಿದ್ದರು. ಶೂಟಿಂಗ್ ಮುಗಿಸಿ ಹೈದ್ರಾಬಾದ್‌ಗೆ ಹಿಂತಿರುಗುತ್ತಿದ್ದರು ಈ ವೇಳೆ ಮುಚ್ಚಿಂಥಲ್ ಬಳಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜು ಆಗಿದೆ. ಅಪಘಾತದ ಬಳಿಕ ಶೇಖರ್ ಮಾಸ್ಟರ್ ಮತ್ತೊಂದು ಕಾರಿನಲ್ಲಿ ಹೈದರಾಬಾದ್‌ಗೆ ತೆರಳಿದರು ಎಂದು ವರದಿಯಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತದ ತನಿಖೆ ನಡೆಸುತ್ತಿದ್ದಾರೆ.