ಕಾಲಿವುಡ್ ಸ್ಮಾರ್ಟ್‌ ಮ್ಯಾನ್ ಚಿಯಾನ್ ವಿಕ್ರಮ್  ತಮ್ಮ ಕುಟುಂಬದ ಜೊತೆ ಚೆನ್ನೈನ ಬೆಸೆಂಟ್ ನಗರದಲ್ಲಿ ವಾಸವಿದ್ದಾರೆ. ನವೆಂಬರ್ 30ರಂದು ವಿಕ್ರಮ್ ಮನೆ ನಂಬರ್‌ಗೆ ಕರೆ ಮಾಡಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ್ದಾರೆ. ವಿಚಾರ ತಿಳಿದ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ ವಿಕ್ರಮ್ ಎಲ್ಲಾ ಸುರಕ್ಷಿತ ಕ್ರಮಗಳನ್ನು ಕೈಗೊಂಡಿದ್ದಾರೆ.

ನಟ ಧನುಷ್, ವಿಜಯಕಾಂತ್ ಮನೇಲಿ ಬಾಂಬ್; ಇದೂ ಬೆದರಿಕೆ ಕರೆನಾ? 

ಶ್ವಾನದಳ ಹಾಗೂ ಬಾಂಬ್ ಸ್ಕ್ವಾಡ್ ಜೊತೆಗೆ ಆಗಮಿಸಿದ ಪೊಲೀಸರು ಇಡೀ ಮನೆ ಪರಿಶೀಲನೆ ಮಾಡಿದ್ದಾರೆ. ಬಾಂಬ್ ಎಲ್ಲಿಯೂ ಪತ್ತೆಯಾಗದ ಕಾರಣ ಇದು ಹುಸಿ ಬಾಂಬ್ ಕರೆ ಎಂದು ಕರೆ ಮಾಡಿದ ವ್ಯಕ್ತಯ ಹುಡುಕಾಟ ಶುರು ಮಾಡಿದ್ದಾರೆ. ಈ ಹಿಂದೆಯೂ ನಟ ವಿಜಯ್, ರಜನಿಕಾಂತ್, ಅಜಿತ್, ಸೂರ್ಯ ಅವರಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿದ್ದವು.

ತನಿಖೆ ಆರಂಭಿಸಿದ ಪೊಲೀಸರು ಬೆದರಿಕೆ ತಮಿಳುನಾಡಿನ ವೆಲ್ಲಪುರಂ ಜಿಲ್ಲೆಯಿಂದ ಎಂದು ತಿಳಿದು ಬಂದಿದೆ. ಕೆಲ ದಿನಗಳಲ್ಲಿ ವ್ಯಕ್ತಿಯ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಟಾಪ್ ಸಿನಿಮಾ ಸ್ಟಾರ್‌ಗಳಿಗೆ ಹೀಗೆ ಕರೆ ಮಾಡಿ ಬೆದರಿಕೆ ಹಾಕುವುದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರು ನಿರ್ಧರಿಸಿದ್ದಾರೆ. ಈ ಸಲ ಪತ್ತೆ ಮಾಡದೆ ಬಿಡುವುದಿಲ್ಲ ಎನ್ನಲಾಗಿದೆ.

ತಲಾ ಅಜಿತ್ ಮನೆಯಲ್ಲಿ ಬಾಂಬ್; ಬೆದರಿಕೆ ಕರೆ ಮಾಡಿದ್ಯಾರು? 

ವಿಕ್ರಮ್ ಸಿನಿಮಾ:
ರಾಜೇಶ್ ನಿರ್ದೇಶನ 'ಕಡರಾಮ್ ಕೊಂಡನ್' ಚಿತ್ರದಲ್ಲಿ ವಿಕ್ರಮ್ ಅಭಿನಯಿಸುತ್ತಿದ್ದಾರೆ. ವಿಕ್ರಮ್ ಕೈಯಲ್ಲಿರುವ ಮತ್ತೊಂದು ಹಿಟ್ ಸಿನಿಮಾ ಕೋಬ್ರಾ ಚಿತ್ರೀಕರಣ ಮುಗಿಯುತ್ತಿದ್ದಂತೆ, 'ಕಡರಾಮ್ ಕೊಂಡನ್' ಚಿತ್ರೀಕರಣ ಪ್ರಾರಂಭವಾಗಲಿದೆ. 

ಬಾಂಬ್ ಬೆದರಿಕೆ ಪತ್ರ ಬರೆದ ರಾಜಶೇಖರ್ ಅರೆಸ್ಟ್; ಈತನ ಹಿಸ್ಟರಿ ಅಂತಿಂಥದ್ದಲ್ಲ! 

ಕೋಬ್ರಾ ಚಿತ್ರದ ಬಹು ಮುಖ್ಯ ಭಾಗವನ್ನು ರಷ್ಯಾದಲ್ಲಿ ಚಿತ್ರೀಕರಣ ಮಾಡಬೇಕಿತ್ತು. ಆದರೆ ಕೊರೋನಾದಿಂದ ಸಾಧ್ಯವಾಗದ ಕಾರಣ ತಂಡ, ಸೋಂಕಿನ ಸಂಖ್ಯೆ ಕಡಿಮೆಯಾಗಲಿ ಆನಂತರ ನಿರ್ಧರಿಸೋಣ ಎಂದಿದ್ದಾರೆ.