Asianet Suvarna News Asianet Suvarna News

Vijay Birthday; ಜೋಸೆಫ್ ವಿಜಯ್ ಇಳಯದಳಪತಿಯಾದ ರೋಚಕ ಕಥೆ

10ನೇ ವಯಸ್ಸಿಗೆ ದಾಖಲೆ ಮುರಿದ ಬಾಲಕ, ಸೂಪರ್‌ಸ್ಟಾರ್‌ ದಳಪತಿ ವಿಜಯ್‌ಗೆ ಇಂದು (ಜೂನ್ 22) 48 ನೇ ಜನ್ಮ ದಿನದ ಸಂಭ್ರಮ. ಬಾಲ ನಟನಾಗಿ ಸಿನಿಮಾರಂಗ ಪ್ರವೇಶ ಮಾಡಿದ ನಟ ವಿಜಯ್ ಇಂದು ದೊಡ್ಡ ಸ್ಟಾರ್ ನಟನಾಗಿ ಹೊರಹೊಮ್ಮಿದ್ದಾರೆ.    

Child artist to stardom interesting film journey of thalapathy vijay sgk
Author
Bengaluru, First Published Jun 22, 2022, 3:26 PM IST

10ನೇ ವಯಸ್ಸಿಗೆ ದಾಖಲೆ ಮುರಿದ ಬಾಲಕ, ಸೂಪರ್‌ಸ್ಟಾರ್‌ ದಳಪತಿ ವಿಜಯ್‌ಗೆ (Thalapathy Vija) ಇಂದು (ಜೂನ್ 22) 48 ನೇ ಜನ್ಮ ದಿನದ (Birthday) ಸಂಭ್ರಮ. ವಿಜಯ್‌ಗೆ ಅಭಿಮಾನಿಗಳು, ಸಿನಿ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ವಿಜಯ್ ಪೋಟೋ, ವಿಡಿಯೋ ಶೇರ್ ಮಾಡಿ ವಿಶ್ ಮಾಡುತ್ತಿದ್ದಾರೆ. ಬಾಲ ನಟನಾಗಿ ಸಿನಿಮಾರಂಗ ಪ್ರವೇಶ ಮಾಡಿದ ನಟ ವಿಜಯ್ ಇಂದು ದೊಡ್ಡ ಸ್ಟಾರ್ ನಟನಾಗಿ ಹೊರಹೊಮ್ಮಿದ್ದಾರೆ.    

ಜೋಸೆಫ್ ವಿಜಯ್ ಚಂದ್ರಶೇಖರ್ ಆಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟವರು ಇಂದು ದಳಪತಿ ವಿಜಯ್ ಆಗಿ ಮೆರೆಯುತ್ತಿದ್ದಾರೆ. ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ತಮಿಳುನಾಡು ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲೂ ಅಭಿಮನಿಗಳನ್ನು ಸಂಪಾದಿಸಿದ್ದಾರೆ.  ಕಡಿಮೆ ಸಮಯದಲ್ಲಿ ವಿಜಯ್ ಸ್ಟಾರ್ಗಳ ಪಟ್ಟಿಯಲ್ಲಿ ಸ್ಪರ್ಧಿಸಿದ್ದಾರೆ.  ಇಂದು, ಅವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿ, ಸೂಪರ್ ಸ್ಟಾರ್‌ ಆಗಿರುವ ವಿಜಯ್ ಅವರ ಸ್ಟಾರ್ಡಮ್ ಅನ್ನು ನೋಡೋಣ.

ಹೆಚ್ಚು ಸಂಭಾವನೆ ಪಡೆಯುವ ನಟ

ದಳಪತಿ ವಿಜಯ್ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. 65 ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಅವುಗಳಲ್ಲಿ ಹೆಚ್ಚಿನ ಚಿತ್ರಗಳು ಬ್ಲಾಕ್ಬಸ್ಟರ್ ಹಿಟ್‌ ಆಗಿವೆ. 

ಬಾಲ್ಯದಲ್ಲೇ ಸ್ಟಾರ್ 

ವಿಜಯ್ ತನ್ನ 10 ನೇ ವಯಸ್ಸಿನಲ್ಲಿ ವೆಟ್ರಿ ಸಿನಿಮಾ ಮೂಲಕ ಬಾಲ ಕಲಾವಿದರಾಗಿ ಸಿನಿಮಾ ರಂಗ ಪ್ರವೇಶ ಮಾಡಿದರು. ಈ ಸಿನಿಮಾಗೆ ವಿಜಯ್ ತಂದೆ ಚಂದ್ರಶೇಖರ್ ಆಕ್ಷನ್ ಕಟ್ ಹೇಳಿದ್ದರು. 1992 ರಲ್ಲಿ ವಿಜಯ್,  ತಂದೆ ನಿರ್ಮಿಸಿದ ಚಲನಚಿತ್ರ ನಾಲಯ ತೀರ್ಪು ಚಿತ್ರದಲ್ಲಿ ನಾಯಕನಾಗಿ ತೆರೆಮೇಲೆ ಮಿಂಚಿದರು.  

ವಿಜಯ್ ಗೆದ್ದ ಪ್ರಶಸ್ತಿಗಳು 

ವಿಜಯ ಅವರು ಕಡಿಮೆ ಸಮಾರಂಭಗಳಿಗೆ ಹಾಜರಾಗುತ್ತಾರೆ ಆದರೂ ಕೂಡ ವಿಜಯ್ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಸ್ಟಾರ್ ಇಂಡಿಯಾ ಪ್ರಶಸ್ತಿ ಸೇರಿ  ಎಂಟು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ತಮಿಳುನಾಡು ಸರ್ಕಾರದಿಂದ ಮೂರು ತಮಿಳುನಾಡಿನ ಪ್ರತಿಷ್ಠಿತ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು SIIMA ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ  ಖ್ಯಾತಿ

ಕೆಲವೇ ಕೆಲವು ದಕ್ಷಿಣ ನಟರಲ್ಲಿ ವಿಜಯ್ ಅವರು ಫೋರ್ಬ್ಸ್ ಇಂಡಿಯಾ ಸೆಲೆಬ್ರಿಟಿ 100 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಒಮ್ಮೆ ಮಾತ್ರವಲ್ಲ ಅವರ ಗಳಿಕೆ, ಸ್ಟಾರ್‌ಡಮ್ ಮತ್ತು ಪ್ಯಾನ್-ಇಂಡಿಯನ್ ಸ್ಥಾನಮಾನದ ಆಧಾರದ ಮೇಲೆ  ಹಲವು ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದಾರೆ.  

ಇಳಯತಳಪತಿ ಹೆಸರು ಬಂದಿದ್ದು ಹೇಗೆ?

2010 ರ ಸಂದರ್ಶನವೊಂದರಲ್ಲಿ, ವಿಜಯ್ ಅವರು ರಜನಿಕಾಂತ್ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡರು ಮತ್ತು ವಿಜಯ್ ಸಿನಿಮಾಗೆ ಎಂಟ್ರಿ ಕೊಡುವ ಸಮಯದಲ್ಲಿ ದಳಪತಿಯ ಬಿಡುಗಡೆಯಾಗುತ್ತಿತ್ತು. ಆ ಸಮಯದಲ್ಲಿ ಯಾರೋ  ಇಳಯತಳಪತಿ ಎಂದು ಕರೆದಂತಾಯಿತು. ಬಳಿಕ ಆ ಹೆಸರು ಅಂಟಿಕೊಂಡಿತು ಎಂದಿದ್ದಾರೆ. 

Vijay Birthday; ಬಾಸ್ ಆದ ವಿಜಯ್, ಹೊಸ ಸಿನಿಮಾದ ಟೈಟಲ್, ಫಸ್ಟ್ ಲುಕ್ ರಿಲೀಸ್

ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಸ್ಟಾರ್

ಗೂಗಲ್ ಮತ್ತು ಟ್ವಿಟರ್ ಎರಡರಿಂದಲೂ ವಿಜಯ್ ಅವರ ಜನಪ್ರಿಯತೆಯನ್ನು ಕಾಣಬಹುದು. ಹಲವಾರು ಬಾರಿ ಅತಿ ಹೆಚ್ಚು ಹುಡುಕಲ್ಪಟ್ಟ ಮತ್ತು ಹೆಚ್ಚು ಟ್ವೀಟ್ ಆದ ನಟ ಎಂದು ದಾಖಲಿಸಲಾಗಿದೆ.

ಬ್ಲಾಕ್‌ಬಸ್ಟರ್ ದಾಖಲೆಗಳು

ತಮಿಳು ಸಿನಿಮಾರಂಗದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಮೊದಲ ಸಿನಿಮಾ ವಿಜಯ್ ನಟನೆಯ ಗಿಲ್ಲಿ. 50 ಕೋಟಿಗಳನ್ನು ಗಳಿಸುವ ಮೂಲಕ ಸಾರ್ವಕಾಲಿಕ ದಾಖಲೆ ಮಾಡಿತ್ತು. ಇನ್ನು ಗಿಲ್ಲಿ ಚಿತ್ರವು ಕೇರಳದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಬೇರೆ ಭಾಷೆಯ ಸಿನಿಮಾ ಆಗಿತ್ತು. ಈ ಚಿತ್ರವು ಮಲೇಷಿಯಾದ ಮಾರುಕಟ್ಟೆಯಲ್ಲಿ ಸುಮಾರು 500,000 ಡಾಲರ್‌ಗಳನ್ನು ಗಳಿಸಿತು, ಇದು ಮೊದಲ MGR ಅಥವಾ ರಜನಿಕಾಂತ್ ಅಲ್ಲದ ಈ ಸಾಧನೆಯನ್ನು ಸಾಧಿಸಿದ ಚಿತ್ರವಾಯಿತು.

ಎಂ ಎಸ್ ಧೋನಿ ಮೊದಲ ಸಿನಿಮಾದಲ್ಲಿ ದಳಪತಿ ವಿಜಯ್ ಹೀರೋ

ಸಾಮಾಜಿಕ ಕಾರ್ಯ

ಜುಲೈ 2009 ರಲ್ಲಿ ಅಧಿಕೃತವಾಗಿ ಪ್ರಾರಂಭವಾದ ವಿಜಯ್ ಮಕ್ಕಳ್ ಇಯಕ್ಕಮ್ (ವಿಜಯ್ ಪೀಪಲ್ ಆರ್ಗನೈಸೇಶನ್) ಎಂಬ ಸಮಾಜ ಕಲ್ಯಾಣ ಸಂಸ್ಥೆಯನ್ನು ಸ್ಥಾಪಿಸಿದರು.

ಪೊಲಿಟಿಕಲ್‌ ಹೀರೋ

ವಿಜಯ್ ಕೇವಲ ತೆರೆಯ ಮೇಲೆ ಹೀರೋ ಅಲ್ಲ ತೆರೆಯ ಹಿಂದೆಯೂ ಕೂಡ ನಿಜವಾದ ಹೀರೋ. ವಿಜಯ್ ರಾಜಕೀಯವಾಗಿ ಯಾವಾಗಲೂ ಸದ್ದು ಮಾಡುತ್ತಿರುತ್ತಾರೆ.  2021ರಲ್ಲಿ ಅವರ ತಂದೆಯ ರಾಜಕೀಯರ ಪಕ್ಷವಾದ VMK ಯಿಂದ ದೂರವಿದ್ದರು ಮತ್ತು ಅವರ ಪೋಷಕರ ವಿರುದ್ಧ ಪ್ರಕರಣವನ್ನು ದಾಖಲಿಸಿದರು.  ರಾಜಕೀಯವಾಗಿ ಅವರ ಹೆಸರನ್ನು ಸೇರಿಸದಂತೆ ಅಭಿಮಾನಿಗಳನ್ನು ಒತ್ತಾಯಿಸಿದ್ದಾರೆ.

Follow Us:
Download App:
  • android
  • ios