ಕಂಗನಾರ ಚಂದ್ರಮುಖಿ 2 ಟ್ರೈಲರ್ ರಿಲೀಸ್​: ಜವಾನ್​ಗೆ ಕೊಡಲಿದೆಯೇ ಠಕ್ಕರ್​?

 ನಟಿ ಕಂಗನಾ ರಣಾವತ್​ ಅವರ ಚಂದ್ರಮುಖು-2 ಟ್ರೈಲರ್​ ಬಿಡುಗಡೆಯಾಗಿದೆ. ವಾರದ ಅಂತರದಲ್ಲಿ ಬಿಡುಗಡೆಯಾಗಲಿರುವ ಜವಾನ್​ ಚಿತ್ರಕ್ಕೆ ಇದು ಸವಾಲು ಒಡ್ಡಲಿದೆಯೇ ಎನ್ನುವುದು ಈಗಿರುವ ಪ್ರಶ್ನೆ. 
 

Chandramukhi 2 trailer Kangana Ranaut looks beautiful suc

ಪಿ. ವಾಸು ನಿರ್ದೇಶನದ ತಮಿಳು ಚಿತ್ರ ಚಂದ್ರಮುಖಿ 2 ಟ್ರೈಲರ್ (Chandramukhi 2) ಬಿಡುಗಡೆಯಾಗಿದೆ. ಈ ಚಿತ್ರವು 2005 ರ ಬ್ಲಾಕ್ ಬಸ್ಟರ್ ಚಂದ್ರಮುಖಿಯ ಮುಂದುವರಿದ ಭಾಗವಾಗಿದೆ. ಟ್ರೈಲರ್‌ನಲ್ಲಿ ಕಂಗನಾ ರಣಾವತ್ ತುಂಬಾ ಪ್ರಭಾವಶಾಲಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕಂಗನಾ ಡ್ಯಾನ್ಸರ್ ಚಂದ್ರಮುಖಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಘವ ಲಾರೆನ್ಸ್ ರಾಜಾ ವೆಟ್ಟೈಯನ್ ರಾಜಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಟ್ರೈಲರ್​ನಲ್ಲಿ ಚಂದ್ರಮುಖಿ 2 ಟ್ರೈಲರ್​ನಲ್ಲಿ ದೊಡ್ಡ ಕುಟುಂಬವು ಮಹಲುಗಳಲ್ಲಿ ತಂಗುವುದನ್ನು ನೋಡಬಹುದು. ರಾಜಾಧಿ ರಾಜ, ರಾಜ ಗಂಭೀರ ಎಂಬ ಘೋಷಣೆಯೊಂದಿಗೆ ಆರಂಭವಾಗುವ ಟ್ರೈಲರ್​ನಲ್ಲಿ ದೊಡ್ಡ ಅವಿಭಕ್ತ ಕುಟುಂಬವೊಂದು ದೊಡ್ಡ ಬಂಗಲೆಗೆ ಬಂದು ಸಮಸ್ಯೆಗೆ ಸಿಲುಕುವುದು, ಆ ಬಂಗಲೆಯೆ ಒಂದು ಕೋಣೆಗೆ ಯಾರಿಗೂ ಪ್ರವೇಶಿಸದಂತೆ ಸೂಚಿಸುವುದು ಕಂಡು ಬರುತ್ತದೆ.

 ಅಲ್ಲಿ ಚಂದ್ರಮುಖಿಯ ಮನೆ ಎಂದು ನಂಬಲಾದ ಸೌತ್ ಬ್ಲಾಕ್‌ನಿಂದ ತಪ್ಪಿಸಿಕೊಳ್ಳಲು ಅವರಿಗೆ ಸೂಚನೆ ನೀಡಲಾಗುತ್ತದೆ. ಈ ಜನರು ಈ ಮೂಲೆಯನ್ನು ತಲುಪಿದಾಗ ಏನಾಗುತ್ತದೆ ಎನ್ನುವುದು ಚಿತ್ರದ ಕುತೂಹಲ. ಚಿತ್ರವು ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಸೆಪ್ಟೆಂಬರ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಶಾರುಖ್ ಅವರ ಜವಾನ್ ಚಿತ್ರ ಇದಕ್ಕೂ ಒಂದು ವಾರ ಮುಂಚಿತವಾಗಿ ಸೆಪ್ಟೆಂಬರ್ 7 ರಂದು ಬಿಡುಗಡೆಯಾಗಲಿದೆ. ಹೀಗಿರುವಾಗ ಚಿತ್ರ ಜವಾನನಿಗೆ (Jawan) ಎಷ್ಟು ಸವಾಲೊಡ್ಡುತ್ತದೆ ಎಂಬ ಬಗ್ಗೆ ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. 

ಬಟ್ಟೆ ಇಲ್ದೇ ನಟಿಸುವಿರಾ ಎಂಬ ಪ್ರಶ್ನೆಗೆ ನಟಿ ನಿಲೀಮಾ ಕೊಟ್ಟ ಉತ್ತರ ಕೇಳಿ ಫ್ಯಾನ್ಸ್ ಶಾಕ್​!

ಈಗ ಬಿಡುಗಡೆಯಾಗಿರುವ ಟ್ರೈಲರ್​ನಲ್ಲಿ,  ಕಂಗನಾ (Kangana Ranaut) ಅವರು ರಾಜನ ಆಸ್ಥಾನದಲ್ಲಿ ನರ್ತಕಿಯ ಪಾತ್ರಧಾರಿಯಾಗಿ ಕಾಣಿಸುತ್ತಾರೆ. ರಾಘವ ಲಾರೆನ್ಸ್ ಒಮ್ಮೆ ರೌಡಿಗಳ ಜೊತೆ ಫೈಟ್​ ಮಾಡುವ ಹಾಗೂ ಇನ್ನೊಮ್ಮೆ ರಾಜನಂತೆ ಮೆರೆಯುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಕಂಗನಾ ನೋಟ ಮತ್ತು ರಾಘವ ಲಾರೆನ್ಸ್ ಅವರ ಎರಡು ಅವತಾರಗಳಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಚಂದ್ರಮುಖಿ 2 ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ  ಕಂಗನಾ ಅವರು, ಇದು ಹಣಕ್ಕೆ ಮೌಲ್ಯದ ಮನರಂಜನೆಯ ಚಿತ್ರ ಎಂದು ಹೇಳಿದ್ದಾರೆ. ಚಿತ್ರದಲ್ಲಿ ಸ್ವಲ್ಪ ಆ್ಯಕ್ಷನ್, ಕಾಮಿಡಿ, ಹಾರರ್, ರೊಮ್ಯಾನ್ಸ್ ಇದ್ದು, ಮ್ಯೂಸಿಕ ಕೂಡ ಚೆನ್ನಾಗಿದೆ.  ಮೊದಲ ಬಾರಿಗೆ ಇಂತಹ ಪಾತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಭಾಗವಾಗಿರುವುದಕ್ಕೆ ಖುಷಿಯಾಗುತ್ತಿದೆ ಎಂದಿದ್ದಾರೆ.

ಪಿ.ವಾಸು (P.Vasu) ನಿರ್ದೇಶನದ ಚಂದ್ರಮುಖಿ 2 ಚಿತ್ರದಲ್ಲಿ ಕಂಗನಾ ರಣಾವತ್ ಮತ್ತು ರಾಘವ ಲಾರೆನ್ಸ್ ಜೊತೆ ವಡಿವೇಲು, ರಾಧಿಕಾ ಶರತ್‌ಕುಮಾರ್, ಲಕ್ಷ್ಮಿ ಮೆನನ್, ಮಿಥುನ್ ಶ್ಯಾಮ್, ಮಹಿಮಾ ನಂಬಿಯಾರ್, ರಾವ್ ರಮೇಶ್, ವಿಘ್ನೇಶ್, ರವಿ ಮರಿಯಾ, ಸುರೇಶ್ ಮೆನನ್, ಟಿ.ಎಂ. ಕಾರ್ತಿಕ್ ಮತ್ತು ಸುಭಿಕ್ಷಾ ಕೃಷ್ಣನ್ ನಟಿಸಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ನಟಿ ತನುಶ್ರೀ ದತ್ತಾ ಪದೇ ಪದೇ ನನ್ನನ್ನ ರೇಪ್​ ಮಾಡಿದ್ಲು: ರಾಖಿ ಸಾವಂತ್​ ಶಾಕಿಂಗ್​ ವಿಡಿಯೋ

Latest Videos
Follow Us:
Download App:
  • android
  • ios