Asianet Suvarna News Asianet Suvarna News

ರೀಲ್ಸ್‌ನಲ್ಲಿ ನಿವೇದಿತಾ-ಚಂದನ್‌ ಶೆಟ್ಟಿ ಲಿಪ್‌ಲಾಕ್‌, ಮೂರೂ ಬಿಟ್ಟವರ ಹಣೆಬರಹ ನೋಡೋಕಾಗ್ತಿಲ್ಲ ಎಂದ ನೆಟ್ಟಿಗರು!

ಬಿಗ್‌ಬಾಸ್‌ ಖ್ಯಾತಿಯ ನಿವೇದಿತಾ ಗೌಡ ಹಾಗೂ ಚಂದನ್‌ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇತ್ತೀಚಿನ ವೀಡಿಯೋದಲ್ಲಿ ಇವರಿಬ್ಬರೂ ಪರಸ್ಪರ ಕಿಸ್ ಮಾಡಿದ್ದು, ಸಖತ್‌ ವೈರಲ್ ಆಗಿದೆ.

Chandan Shetty, Niveditha Gowda kisses in Instagram Reels, gets negative comments from Netizens Vin
Author
First Published Dec 4, 2023, 3:46 PM IST

ಬಿಗ್‌ಬಾಸ್‌ ಖ್ಯಾತಿಯ ನಿವೇದಿತಾ ಗೌಡ, ಗೊಂಬೆ ಎಂದೇ ಖ್ಯಾತಿ ಪಡೆದಿದ್ದಾರೆ. ತಮ್ಮ ಮುದ್ದು ಮುದ್ದಾದ ಮಾತಿನಿಂದ ಅಭಿಮಾನಿಗಳ ಮನಸ್ಸು ಗೆಲ್ಲುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಕತ್​ ಆ್ಯಕ್ಟೀವ್​ ಆಗಿರುವ ನಿವೇದಿತಾ ಆಗಾಗ ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿರುತ್ತಾರೆ. ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ ಅವರನ್ನು ಮದುವೆಯಾಗಿ ಲೈಫ್​ ಎಂಜಾಯ್​ ಮಾಡ್ತಿರೋ ಬೆಡಗಿ ದಿನನಿತ್ಯವೂ ಒಂದಿಲ್ಲೊಂದು ಪೋಸ್ಟ್​ ಮಾಡುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. 

ನಿವೇದಿತಾ ಗೌಡ, ಇನ್​ಸ್ಟಾಗ್ರಾಮ್​ನಲ್ಲಿ ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ. ಕೇವಲ ಸಿಂಗಲ್‌ ವೀಡಿಯೋ ಮಾತ್ರವಲ್ಲದೆ, ಪತಿ ಚಂದನ್‌ ಶೆಟ್ಟಿ ಜೊತೆಗೂ ನಿವೇದಿತಾ ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಾರೆ. ಹಾಗೆಯೇ ಇತ್ತೀಚಿಗೆ ನಿವೇದಿತಾ-ಚಂದನ್‌ ಗೌಡ ಮಾಡಿರೋ ವೀಡಿಯೋ ಸಖತ್‌ ವೈರಲ್ ಆಗಿದೆ.

ಸೊಂಟ ಬಳುಕಿಸೋದನ್ನು ಬಿಟ್ಟು ಕಣ್ಣಲ್ಲೇ ಡ್ಯಾನ್ಸ್‌ ಮಾಡಿದ ಬಾರ್ಬಿಡಾಲ್‌ ನಿವೇದಿತಾಗೌಡ!

ರೀಲ್ಸ್‌ನಲ್ಲೇ ಚಂದನ್‌-ನಿವೇದಿತಾ ಲಿಪ್‌ಲಾಕ್‌
ಇದರಲ್ಲಿ ಹಾಡೊಂದಕ್ಕೆ ನಿವೇದಿತಾ ಗೌಡ ಮೈ ಬಳುಕಿಸಿ ಡ್ಯಾನ್ಸ್ ಮಾಡುತ್ತಾರೆ. ಜೊತೆಗೆ ಚಂದನ್‌ ಶೆಟ್ಟಿಗೆ ಲಿಪ್‌ಕಿಸ್ ಸಹ ಮಾಡುತ್ತಾರೆ. ವೈರಲ್ ಆಗಿರೋ ಈ ವೀಡಿಯೋ ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು, 'ಚಂದನ್ ಶೆಟ್ಟಿ ಪಾಪ ಗುರು' ಎಂದಿದ್ದಾರೆ. ಇನ್ನೊಬ್ಬರು, 'ಶಿ ಈಸ್ ಸೋ ರೋಮ್ಯಾಂಟಿಕ್' ಎಂದಿದ್ದಾರೆ. ಮತ್ತೊಬ್ಬರು, 'ನಿವೇದಿತ ಹಾಗೂ ಚಂದನ್ ಸಮಾಜಕ್ಕೆ ಏನು ಹೇಳಕ್ಕೆ ಹೊರಟಿದ್ದೀರಾ ಅನ್ನೋದು ಸ್ವಲ್ಪ ಕ್ಲಾರಿಟಿ ಕೊಡಿ' ಎಂದು ಕಾಮೆಂಟ್ ಮಾಡಿದ್ದಾರೆ.

ಟ್ರೋಲ್ ಆದರೂ ತಲೆಕೆಡಿಸಿಕೊಳ್ಳದ ನಿವೇದಿತಾ
ಮತ್ತೊಬ್ಬ ಬಳಕೆದಾರರು, 'ಹೇ ಚೈಲ್ಡ್‌ ಮೊದಲು ಒಳ್ಳೆ ಚಡ್ಡಿ ಬಟ್ಟೆ ಅಕೊ ದುಡ್ಡು ಇಲ್ಲ ಅಂದ್ರೆ ನಂಬರ್ ಕಳಿಸು ನಾನೇ ದುಡ್ಡು ಕೊಡ್ತೀನಿ' ಎಂದು ಬೈಯ್ದಿದ್ದಾರೆ. ಮತ್ತೆ ಕೆಲವರು, 'ಕಾಮೆಂಟ್‌ ಬಾಕ್ಸ್‌ನಲ್ಲಿ ಕೆಟ್ಟದಾಗಿ ಬೈಯುವ ಅಗತ್ಯವಿಲ್ಲ ಬಿಟ್ಟು ಬಿಡಿ' ಎಂದು ತಿಳಿಸಿದ್ದಾರೆ. ನಿವೇದಿತಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡೋ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಕೆಟ್ಟದಾಗಿ ಟ್ರೋಲ್ ಆಗುತ್ತಲೇ ಇರುತ್ತವೆ. ಆದರೂ ನಿವೇದಿತಾ ಗೌಡ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಪಾಲಿಗೆ ತಾವು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ.

ರೆಡ್‌ ಸ್ಯಾರಿಯಲ್ಲಿ ನಿವೇದಿತಾ ಗೌಡ; ಎಷ್ಟು ಚೆಂದ ಕಾಣ್ತೀರಿ, ಚಡ್ಡಿ, ಸ್ಕರ್ಟ್ ಬಿಟ್ಬಿಟ್ಟು ಸೀರೆನೆ ಉಟ್ಕೊಳ್ಳಿ ಎಂದ ನೆಟ್ಟಿಗರು!

ನಿವೇದಿತಾ ಗಂಡ ಚಂದನ್​ ಶೆಟ್ಟಿ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. 'ಎಲ್ರ ಕಾಲೆಳೆಯುತ್ತೆ ಕಾಲ' ಸಿನಿಮಾದ ಮೂಲಕ ಸಂಗೀತ ನಿರ್ದೇಶಕ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದವರು ಇವರು. ಇದೀಗ ಹೀರೊ ಪಟ್ಟಕ್ಕೆ ಏರಿದ್ದಾರೆ. ಸದ್ಯ ಯಾವುದೂ ಚಿತ್ರ ರಿಲೀಸ್​ ಆಗಿಲ್ಲ. ಆದರೆ ಈಗಲೇ ಮೂರನೇ ಸಿನಿಮಾಗೆ ಹೀರೋ ಆಗಿ ಸೆಲೆಕ್ಟ್ ಆಗಿದ್ದಾರೆ.  'ಎಲ್ರ ಕಾಲೆಳೆಯುತ್ತೆ ಕಾಲ', 'ಸೂತ್ರಧಾರಿ' ಸಿನಿಮಾಗಳ ನಂತರ ಈಗ ಹೊಸದೊಂದು ಸಿನಿಮಾದಲ್ಲಿ ಅವರು ಹೀರೋ ಆಗಿ ನಟಿಸುತ್ತಿದ್ದು, ಕಳೆದ ವರ ಮಹಾಲಕ್ಷ್ಮೀ ಹಬ್ಬದಂದು ಅವರ ಹೊಸ ಸಿನಿಮಾದ ಟೈಟಲ್ ಘೋಷಣೆ ಆಗಿದೆ.

Follow Us:
Download App:
  • android
  • ios