Asianet Suvarna News Asianet Suvarna News

Fun Video: ಚಂದನ್‌ಗೆ ಆ್ಯಪಲ್, ನಿವೇದಿತಾಗೆ ಕಹಿ ಹಾಗಲಕಾಯಿ..!

  • ಗಂಡನ ಜೊತೆ ಗೇಮ್ ಆಡಲು ಹೋಗಿ ಕಹಿ ತಿಂದ ನಿವೇದಿತಾ
  • ಚಂದನ್ ಆ್ಯಪಲ್ ತಿಂದರೆ ನಿವೇದಿತಾಗೆ ಹಾಗಲಕಾಯಿ
Chandan Shetty Niveditha gowda fun game video see how she had Bitter guard dpl
Author
Bangalore, First Published Jan 15, 2022, 11:17 AM IST

ಸೋಷಿಯಲ್ ಮೀಡಿಯಾದಲ್ಲಿ ಕಪಲ್ ಫನ್‌ ಮಾಡಲು ಸಾಕಷ್ಟು ರೀಲ್ಸ್, ವಿಡಿಯೋಗಳಿವೆ. ಫಿಲ್ಟರ್, ಸಾಂಗ್ ಬಳಸಿಕೊಂಡು ಬಹಳಷ್ಟು ಜನರು ವಿಡಿಯೋಗಳನ್ನು ಮಾಡಿ ಶೇರ್ ಮಾಡುತ್ತಾರೆ. ಇತ್ತೀಚೆಗೆ ಬಾತ್‌ಟವಲ್ ಪ್ರಾಂಕ್ ಮಾಡಿ ಗಂಡನಿಗೆ ಶಾಕ್ ಕೊಟ್ಟ ನಿವೇದಿತಾ ಗೌಡ ಈ ಬಾರಿ ಕಹಿ ತಿನ್ನುವಂತಾಗಿದೆ. ಹೌದು. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡರ ಗೇಮ್ ಟೈಂ ಫನ್ನಿಯಾಗಿದ್ದು, ವಿಡಿಯೋ ಮಜವಾಗಿ ಮೂಡಿ ಬಂದಿದೆ. ಚಂದನ್ ಹಾಗೂ ನಿವೇದಿತಾ ಇಬ್ಬರೂ ಗೇಮ್ ಸಖತ್ ಎಂಜಾಯ್ ಮಾಡಿದ್ದಾರೆ. ಕಳೆದ ಬಾರಿ ನಿವೇದಿತಾ ರಾಕ್ ಮಾಡಿದ್ದಾರೆ ಈ ವಿಡಿಯೋದಲ್ಲಿ ಚಂದನ್ ರಾಕ್ ಮಾಡಿದ್ದಾರೆ.

ಮಕ್ಕಳಿಂದ ಹಿರಿಯರೂ ಇಷ್ಟಪಡುವ ಹ್ಯಾಂಡ್ ಸಿಗ್ನಲ್ ಗೇಮ್ ನಿವೇದಿತಾ(Niveditha Gowda) ಹಾಗೂ ಚಂದನ್(Chandan Shetty) ಟ್ರೈ ಮಾಡಿದ್ದಾರೆ. ಕತ್ತರಿ, ಪೇಪರ್, ಕಲ್ಲು ಎಂಬ ಆಪ್ಶನ್‌ಗಳಿರೋ ಗೇಮ್‌ನಲ್ಲಿ ಪ್ರತಿಯೊಂದಕ್ಕೂ ಹ್ಯಾಂಡ್ ಸಿಗ್ನಲ್ ಇದೆ. ಕಲ್ಲು ಎಲ್ಲಕ್ಕಿಂತ ಬಲಿಷ್ಠ. ಸಖತ್ ಫನ್ನಿ & ಸಿಂಪಲ್ ಆಗಿರುವ ಈ ಗೇಮ್ ಎಲ್ಲರಿಗೂ ಬಿಡುವಿನ ವೇಳೆಯ ಫನ್. ಇದನ್ನೇ ನಿವೇದಿತಾ ಹಾಗೂ ಚಂದನ್ ಆಡಿದ್ದಾರೆ. ಇವರ ಗೇಮ್‌ನಲ್ಲಿ ಸೋತವರು ಒಂದು ಬೈಟ್ ಹಾಗಲಕಾಯಿ ತಿನ್ನಬೇಕು, ಗೆದ್ದವರಿಗೆ ಒಂದು ಬೈಟ್ ಆ್ಯಪಲ್.

ಕ್ಯಾಮೆರಾ ಮುಂದೆ ಬಾತ್ ಟವಲ್ ಬಿಚ್ಚಿದ ನಿವೇದಿತಾ, ಚಂದನ್ ಶೆಟ್ಟಿ ಶಾಕ್

ಚಂದನ್ ಮುಂದೆ ಆ್ಯಪಲ್ ತಟ್ಟೆ ಇದ್ದರೆ ನಿವೇದಿತಾ ಗೌಡ ಮುಂದೆ ಹಾಗಲಕಾಯಿ ಇಡಲಾಗಿತ್ತು. ಪಾಪಾ ನಿವೇದಿತಾಗೆ ಆ್ಯಪಲ್ ಸವಿಯುವ ಛಾನ್ಸ್ ಸಿಗಲೇ ಇಲ್ಲ. ಪ್ರತಿಬಾರಿ ಚಂದನ್ ಗೆಲ್ಲುತ್ತಲೇ ಇದ್ದರು. ನಿವೇದಿತಾ ಸೋಲುತ್ತಲೇ ಇದ್ದರು. ಕಷ್ಟಪಟ್ಟು ಸೋತಾಗಾ ನಿವೇದಿತಾ ಹಾಗಲಕಾಯಿ ತಿನ್ನುವ ದೃಶ್ಯ ಇನ್ನಷ್ಟು ಫನ್ನಿಯಾಗಿದೆ. ಬದುಕು ನಿಜಕ್ಕೂ ಎಲ್ಲರಿಗೂ ಸಮಾನ ಎಂದಾರೆ ನಾನು ಒಮ್ಮೆಯಾದರೂ ಗೆಲ್ಲಬೇಕಿತ್ತು ಎಂದು ಕ್ಯಾಪ್ಶನ್ ಕೊಟ್ಟು ನಿವೇದಿತಾ ವಿಡಿಯೋವನ್ನು ಶೇರ್ ಮಾಡಿದ್ದಾರೆ.

ನಿವೇದಿತಾ ಹಾಗೂ ಚಂದನ್ ಶೆಟ್ಟಿ ಪೋಸ್ಟ್‌ಗೆ ಬಹಳಷ್ಟು ಜನರು ಕಮೆಂಟ್ ಮಾಡಿದ್ದು, ಕೆಲವರು ಜೋಡಿಯ ಫನ್ ಗೇಮ್‌ಗಳನ್ನು ನೋಡಿ ಎಂಜಾಯ್ ಮಾಡಿದ್ದಾರೆ. ಮದುವೆ ಆದರೂ ಮಕ್ಕಳ ತರ ಆಡಿಕೊಂಡು ಖುಷಿ ಖುಷಿಯಾಗಿ ಇದ್ದಿರಿ ಯಾವಾಗಲೂ ಹೀಗೆ ಇರಿ ಎಂದು ಒಬ್ಬರು ಕಮೆಂಟಿಸಿದರೆ, ಇನ್ನೊಬ್ಬರು ಸರಿಯಾಗಿ ಇದಾವೆ ಚೈಲ್ಡ್ ಚಪಾತಿ ಎಂದಿದ್ದಾರೆ. ಇನ್ನೂ ಕೆಲವರು ಚಂದನ್ ಆಪಲ್ ತಿನ್ನುತ್ತಿದ್ದಾರೆ ಆದರೆ ನಿವೇದಿತಾ ಹಾಗಲ ಕಾಯಿ ಮೆಲ್ಲಗೆ ತಿನ್ನುವುದನ್ನು ಗಮನಿಸಿ ಅಣ್ಣ ತಿಂದಿರೋದು ಕಾಣ್ತಾ ಇದೆ ಅಕ್ಕ ತಿಂತಾ ಇರೋದೇ ಕಾಣ್ತಾ ಇಲ್ಲ ಎಂದಿದ್ದಾರೆ. ಇನ್ನು ಒಬ್ಬರು ಹೀಗೊಂದು Nibba And Nibbi ಲವ್ ಸ್ಟೋರಿ ಎಂದರೆ ಇನ್ನೋ ಕೆಲವರು ಕ್ಯೂಟ್ ಕಪಲ್ ಎಂದು ಪ್ರೀತಿ ತೋರಿಸಿದ್ದಾರೆ.

ನಿವೇದಿತಾ ಕೈಯಲ್ಲಿ ಏಟು ತಿಂದ ಚಂದನ್ ಶೆಟ್ಟಿ

ಬಾತ್ ಟವಲ್ ಪ್ರಾಂಕ್

ಇದೀಗ ನಿವೇದಿತಾ ಗೌಡ ಪ್ರಾಂಕ್ ಮಾಡೋಕೆ ಹೋಗಿ ಗಂಡನಿಗೆ ಶಾಕ್ ಕೊಟ್ಟಿದ್ದಾರೆ. ಹೌದು. ನಿವೇದಿತಾ ಅವತಾರ ನೋಡಿ ಚಂದನ್ ಶೆಟ್ಟಿ ಹೌಹಾರಿಬಿದ್ದಿದ್ದಾರೆ. ಪತ್ನಿ ಇದೇನು ಮಾಡ್ತಿದ್ದಾಳೆ ಅಂತ ಶಾಕ್ ಆಗಿ ಚಂದನ್ ಕೊಟ್ಟ ರಿಯಾಕ್ಷನ್ ಹಾಗೂ ಇದಕ್ಕೆ ನಿವೇದಿತಾ ರಿಯಾಕ್ಷನ್ ಸಖತ್ ಫನ್ನಿಯಾಗಿದೆ. ಈ ರೀತಿಯ ವಿಡಿಯೋಗಳು ಇದೇ ಮೊದಲೇನಲ್ಲ, ಇಂಥವು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಲೇ ಇರುತ್ತವೆ. ಆದರೆ ಬಿಗ್ ಬಾಸ್ ಜೋಡಿಯ ವರ್ಷನ್ ಇದು.

"

ಕ್ಯಾಮೆರಾವನ್ನಿಟ್ಟು ನಿವೇದಿತಾ ಗೌಡ ಬಾತ್ ಟವಲ್ ಸುತ್ತಿಕೊಳ್ಳುತ್ತಾರೆ. ಪಕ್ಕದಲ್ಲೇ ಇದ್ದ ಸೋಫಾದಲ್ಲಿ ಚಂದನ್ ಶೆಟ್ಟಿ ಲ್ಯಾಪ್‌ಟಾಪ್‌ನಲ್ಲಿ ಬ್ಯುಸಿಯಾಗಿರುತ್ತಾರೆ. ಇದೇ ವೇಳೆ ನಿವೇದಿತಾ ವಿಡಿಯೋ ಆರಂಭಿಸಿ ಚಕ್ಕಂತ ಟವಲ್ ದೇಹದಿಂದ ತೆಗೆಯುತ್ತಾರೆ. ಅವತಾರ ನೋಡಿದ ಚಂದನ್ ಅಯ್ಯೋ ಹೆಂಡ್ತಿ ಇದೇನ್ ಮಾಡ್ತಿದ್ದಾಳೆ ಎಂದು ಶಾಕ್ ಆಗಿ ಹೆಂಡತಿಯನ್ನು ತಬ್ಬಿ ಕ್ಯಾಮೆರಾದಿಂದ ಸರಿಸಿದ್ದಾರೆ. ಆದರೆ ನಿವೇದಿತಾ ಬಾತ್ ಟವಲ್ ಒಳಗೆ ಡ್ರೆಸ್ ಧರಿಸಿದ್ದು ನೋಡಿ ನಿರಾಳರಾಗುತ್ತಾರೆ ಚಂದನ್ ಶೆಟ್ಟಿ.

Follow Us:
Download App:
  • android
  • ios