ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು, ನಟನಿಗೆ ಸಂಬಂಧಿಸಿದ ಹಲವಾರು ಜನರ ವಿಚಾರಣೆ ನಡೆಸಿದ್ದಾರೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ಕೊಲೆಯಾಗಿರುವ ಬಗ್ಗೆ ಯಾವುದೇ ಸಾಕ್ಷಿ ಸಿಗದ ಹಿನ್ನೆಲೆಯಲ್ಲಿ ಸಿಬಿಐ ಆತ್ಮಹತ್ಯೆ ಸಾಧ್ಯತೆಯ ಬಗ್ಗೆ ತನಿಖೆ ನಡೆಸುತ್ತಿದೆ.

ತನಿಖೆಯಲ್ಲಿ ಸುಶಾಂತ್ ಕೊಲೆಯಾಗಿರುವ ಬಗ್ಗೆ ಯಾವುದೇ ಸಾಕ್ಷಿ ಸಿಕ್ಕಿಲ್ಲ ಎಂದು ತನಿಖಾ ತಂಡದ ಸದಸ್ಯರು ಹೇಳಿದ್ದಾರೆ. ಜೂ. 14ರಂದು ನಟ ಮುಂಬೈನ ಬಾಂದ್ರಾ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ತಾಪ್ಸಿ ನಂತರ ರಿಯಾ ಬೆಂಬಲಕ್ಕೆ ಮತ್ತೊಬ್ಬ ಖ್ಯಾತ ನಟಿ, 'ಹೆಣ್ಣು ಮಗಳ ನೊಯಿಸಬೇಡಿ'

ಇದೀಗ ಸಿಬಿಐ ಆತ್ಮಹತ್ಯೆ ಸಾಧ್ಯತೆ ಬಗ್ಗೆ ಸ್ಪಷ್ಟತೆಗಾಗಿ ಆ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದೆ. ಇದರಲ್ಲಿ ಆತ್ಮಹತ್ಯೆ ಪ್ರೇರಣೆ ಕೇಸು ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಮುಖ ಸಂಶಯಾಸ್ಪದ ವ್ಯಕ್ತಿಗಳ ಹೇಳಿಕೆಯಾಗಲಿ, ಫೊರೆನ್ಸಿಕ್ ವರದಿಗಳಾಗಲಿ ಕೊಲೆ ನಡೆದಿರುವ ಬಗ್ಗೆ ಯಾವುದೇ ಕುರುಹು ತೋರಿಸುತ್ತಿಲ್ಲ.

ಹಾಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬ ನಿಟ್ಟಿನಲ್ಲಿ ತನಿಖೆ ಗತಿ ಬದಲಾಯಿಸಿದೆ. ಆದರೆ ಇದು ಕೊಲೆ ಎಂದು ತನಿಖೆ ನಡೆಸುವ ದೃಷ್ಟಿಕೋನವನ್ನು ಇನ್ನೂ ಸಂಪೂರ್ಣವಾಗಿ ಸಿಬಿಐ ಕೈ ಬಿಟ್ಟಿಲ್ಲ.

ರಿಯಾ & ಸುಶಾಂತ್ ಮಧ್ಯೆ ಮಹೇಶ್ ಭಟ್‌ಗೇನು ಕೆಲಸ..? ನಟಿ ಸುಚಿತ್ರಾ ಪ್ರಶ್ನೆ

ಮುಂಬೈ ಪೊಲೀಸರಿಂದ ಕೇಸು ತೆಗೆದುಕೊಂಡು ತನಿಖೆ ಆರಂಭಿಸಿದ ಸಿಬಿಐ ಮುಂಬೈನ ಬಾಂದ್ರಾ ಮನೆಯಲ್ಲಿ ಘಟನೆಯ ಮರುಸೃಷ್ಟಿ ಮಾಡಿದೆ. ರಿಯಾ ಚಕ್ರವರ್ತಿಯನ್ನೂ ಹಲವು ಬಾರಿ ವಿಚಾರಣೆಗೊಳಪಡಿಸಲಾಗಿದೆ. ನಟಿ ರಿಯಾ ಪೋಷಕರನ್ನೂ ಸಿಬಿಐ ತನಿಖೆ ನಡೆಸಿದೆ.

ಇನ್ನು ಜಾರಿ ನಿರ್ದೇಶನಾಲಯವೂ ಅಕ್ರಮ ಹಣ ವರ್ಗಾವಣೆ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದೆ. ಸುಶಾಂತ್ ತಂದೆ ಕೆಕೆ ಸಿಂಗ್ ಅಕ್ರಮ ಹಣ ವರ್ಗಾವಣೆ ಮಾಡಿರುವುದಾಗಿ ಆರೋಪಿಸಿದ್ದಾರೆ. ಇನ್ನು ಘಟನೆಯಲ್ಲಿ ಡ್ರಗ್ಸ್ ಮಾಫಿಯಾ ಸುದ್ದಿಯೂ ಕೇಳಿ ಬಂದಿದ್ದು, ಈ ನಿಟ್ಟಿನಲ್ಲಿ ಎನ್‌ಸಿಬಿ ತನಿಖೆ ನಡೆಸುತ್ತಿದೆ.