ಖ್ಯಾತ ಗಾಯಕಿ ಬಾಂಬೆ ಜಯಶ್ರೀಗೆ ಬ್ರೈನ್ ಹ್ಯಾಮರೇಜ್ ಆಗಿದ್ದು ಯುಕೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. 

ಪ್ರೀತ್ಸೇ ಅಂತ ಪ್ರಾಣ ತಿನ್ನೋ...ಕನ್ನಡದ ಜನಪ್ರಿಯ ಹಾಡಿಗೆ ಧ್ವನಿಯಾಗಿದ್ದ ಖ್ಯಾತ ಕರ್ನಾಟಿಕ್ ಗಾಯಕಿ ಬಾಂಬೆ ಜಯಶ್ರೀ ಅವರಿಗೆ ಬ್ರೈನ್ ಹ್ಯಾಮರೇಜ್ ಆಗಿದ್ದು ಚಿಕಿತ್ಸೆಗೆ ಒಳಗಾಗಿದ್ದಾರೆ. ಯುಕೆಯಲ್ಲಿ ಬಾಂಬೆ ಜಯಶ್ರೀ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಲಂಡನ್ ಪ್ರವಾಸದಲ್ಲಿದ್ದ ಗಾಯಕಿ ಬಾಂಬ್ ಜಯಶ್ರೀ ಅವರಿಗೆ ರಕ್ತನಾಳ ಸಮಸ್ಯೆಯಿಂದ ಬಳಲುತ್ತಿದ್ದರು. ತಕ್ಷಣ ಆಸ್ಪತ್ರೆಗೆ ಧಾವಿಸಿ ಪರೀಕ್ಷೆ ಮಾಡಿದ ಬಳಿಕ ಬ್ರೈನ್ ಹ್ಯಾಮರೇಜ್ ಗೊತ್ತಾಗಿದೆ. ತಕ್ಷಣ ಶಸ್ತ್ರ ಚಿಕಿತ್ಸೆಗೆ ಒಳಲಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಖ್ಯಾತ ಗಾಯಕಿ ಜಯಶ್ರೀ ಅವರ ಕುಟುಂಬದವರು ಹೇಳಿಕೆ ನೀಡಿದ್ದು, ಲಂಡನ್‌ ಪ್ರವಾಸದಲ್ಲಿ ಇದ್ದಾಗ ತೀವ್ರ ಆನಾರೋಗ್ಯ ಕಾಡಿದ್ದು ಶಸ್ತ್ರ ಚಿಕಿತ್ಸೆಗೆ ಉಳಗಾಗಿದ್ದಾರೆ. ಸಂಗೀತ ಕಾರ್ಯಕ್ರಮಗಳಿಗಾಗಿ ಲಂಡನ್‌ಗೆ ತೆರಳಿದ್ದರು' ಎಂದು ಹೇಳಿದ್ದಾರೆ. ಯುಕೆನಲ್ಲಿ ಅವರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು ಶೀಘ್ರದಲ್ಲೇ ಚೇತರಿಸಿಕೊಳ್ಳಲಿದ್ದಾರೆ. ಕೆಲವು ದಿನಗಳು ವಿಶ್ರಾಂತಿ ಪಡೆಯಬೇಕಿದೆ. ಖಾಸಗಿತನ ಗೌರವಿಸಿ' ಎಂದು ಕೇಳಿಕೊಂಡಿದ್ದಾರೆ. 

ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ತಪ್ಪು ಮಾಹಿತಿಗಳ ಬಗ್ಗೆ ನಿರ್ಲಕ್ಷಿಸುವಂತೆ ಅವರು ಮನವಿ ಮಾಡಿದ್ದಾರೆ. ಇಂದು ಸಂಜೆ (ಮಾರ್ಚ್ 24) ಲಂಡನ್‌ನ ವಿಶ್ವವಿದ್ಯಾನಿಲಯವೊಂದರಲ್ಲಿ ಸಂಗೀತ ಕಾರ್ಯಕ್ರಮ ನೀಡಬೇಕಿತ್ತು. ಆದರೆ ದಿಢೀರ್ ಆನಾರೋಗ್ಯದ ಕಾರಣ ಚಿಕಿತ್ಸೆಗೆ ಒಳಗಾಗಿದ್ದಾರೆ. 

ಸೋನು ನಿಗಮ್ ತಂದೆ ಮನೆಯಲ್ಲಿ 72 ಲಕ್ಷ ದರೋಡೆ : ಮಾಜಿ ಚಾಲಕ ಬಂಧನ

ಖ್ಯಾತ ಗಾಯಕಿ ಜಯಶ್ರೀ ಅನೇಕ ಭಾಷೆಗಳಲ್ಲಿ ಹಾಡಿದ್ದಾರೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಲಂ ಮತ್ತು ಹಿಂದಿ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಕನ್ನಡದಲ್ಲಿ ಎಕ್ಸ್ ಕ್ಯೂಸ್ ಮಿ ಸಿನಿಮಾದ ಸೂಪರ್ ಹಿಟ್ ಪ್ರೀತ್ಸೆ ಅಂತ ಪ್ರಾಣ ತಿನ್ನೋ ಹಾಡಿಗೆ ಧ್ವನಿಯಾಗಿದ್ದಾರೆ. ಜೊತೆ ಜೊತೆಯಲಿ ಸಿನಿಮಾ ಸುಮ್ಮನೆ ಸುಮ್ಮನೆ....ಹಾಡು ಸೇರಿದಂತೆ ಅನೇಕ ಹಾಡಗಳಿಗೆ ಧ್ವನಿ ನೀಡಿದ್ದಾರೆ. ಬಾಂಬಿ ಜಯಶ್ರೀ ಬೇಗ ಗುಣುಮುಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.