Asianet Suvarna News Asianet Suvarna News

ವಿಶ್ವದ ಸೆಕ್ಸಿಯೆಸ್ಟ್ ಮ್ಯಾನ್ ಪಟ್ಟ ಮುಡಿಗೇರಿಸಿಕೊಂಡ ಕ್ರಿಸ್‌ ಎವಾನ್ಸ್‌

ಖ್ಯಾತ ನಟ ಕ್ರಿಸ್‌ ಎವಾನ್ಸ್‌ ವಿಶ್ವದ ಅತ್ಯಂತ ಸುಂದರ ಪುರುಷ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಪೀಪಲ್‌ ಮ್ಯಾಗಜೀನ್‌ ಬಿಡುಗಡೆ ಮಾಡಿದ ಜೀವಂತವಿರುವ ವಿಶ್ವದ ಸುಂದರ ಪುರುಷರ ಪಟ್ಟಿಯಲ್ಲಿ ಕ್ರಿಸ್‌ ಎವಾನ್ಸ್‌ಗೆ ಈ ಹಿರಿಮೆ ದಕ್ಕಿದೆ.

Captain America Fame Chris Evans is the most handsome man in the world akb
Author
First Published Nov 9, 2022, 9:22 AM IST

ಲಾಸ್‌ ಏಂಜಲೀಸ್‌: ಖ್ಯಾತ ನಟ ಕ್ರಿಸ್‌ ಎವಾನ್ಸ್‌ ವಿಶ್ವದ ಅತ್ಯಂತ ಸುಂದರ ಪುರುಷ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಪೀಪಲ್‌ ಮ್ಯಾಗಜೀನ್‌ ಬಿಡುಗಡೆ ಮಾಡಿದ ಜೀವಂತವಿರುವ ವಿಶ್ವದ ಸುಂದರ ಪುರುಷರ ಪಟ್ಟಿಯಲ್ಲಿ ಕ್ರಿಸ್‌ ಎವಾನ್ಸ್‌ಗೆ ಈ ಹಿರಿಮೆ ದಕ್ಕಿದೆ. ಸೋಮವಾರ ರಾತ್ರಿ ನಡೆದ ಸ್ಟೆಫನ್‌ ಕಾಲ್ಬರ್ಚ್‌ ಕಾರ್ಯಕ್ರಮದಲ್ಲಿ ಎವಾನ್ಸ್‌ ಹೆಸರನ್ನು ಘೋಷಣೆ ಮಾಡಲಾಗಿದೆ.

ಖ್ಯಾತ ನಟ ಕ್ರಿಸ್‌ ಎವಾನ್ಸ್‌  2022 ರ ಸೆಕ್ಸಿಯೆಸ್ಟ್ ಮ್ಯಾನ್  ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಪ್ರತಿವರ್ಷ ಓರ್ವ ಸೆಲೆಬ್ರಿಟಿಯನ್ನು ಈ ಗರಿಮೆಗೆ ಘೋಷಣೆ ಮಾಡಲಾಗುತ್ತದೆ. ಕಳೆದ ವರ್ಷ, ಇದು ಪಾಲ್ ರುಡ್ ಆಗಿತ್ತು. ಮೈಕೆಲ್ ಬಿ ಜೋರ್ಡಾನ್ (Michael B Jordan), ಡ್ವೇನ್ ಜಾನ್ಸನ್ (Dwayne Johnson), ಕ್ರಿಸ್ ಹೆಮ್ಸ್‌ವರ್ತ್(Chris Hemsworth), ಜಾನಿ ಡೆಪ್ (Johnny Depp) ಮತ್ತು ಹೆಚ್ಚಿನವರು ಸೇರಿದಂತೆ ಅನೇಕರು ಈಗಾಗಲೇ ಈ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. 

ಇವಾನ್ಸ್ ಪಾಶ್ಚಿಮಾತ್ಯ ಸಿನಿಮೋದ್ಯಮದಲ್ಲಿ ದೊಡ್ಡ ಹೆಸರು ಮಾಡಿದ್ದು, ಅವರ ಕ್ಯಾಪ್ಟನ್ ಅಮೆರಿಕಾದಲ್ಲಿನ (Captain America)  ಪಾತ್ರ ಗಮನ ಸೆಳೆದಿದೆ. ಅಲ್ಲದೇ ಅವರು ಹಲವಾರು ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ರುಸ್ಸೋ ಸಹೋದರರ, 'ದಿ ಗ್ರೇ ಮ್ಯಾನ್ ಮತ್ತು ಲೈಟ್‌ಇಯರ್' (Gray Man and Lightyear)ಸಿನಿಮಾದಲ್ಲಿಯೂ ಇವಾನ್ಸ್ ನಟಿಸಿದ್ದಾರೆ. 

ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಮಾಡೆಲಿಂಗ್‌ ದಿನಗಳ ಸಂಭಾವನೆ ಕೇಳಿದರೆ ಶಾಕ್‌ ಆಗೋದು ಗ್ಯಾರಂಟಿ

ಪೀಪಲ್ ಮ್ಯಾಗಜೀನ್ ಪ್ರಸ್ತುತಪಡಿಸಿದ '2022 ರ ಸೆಕ್ಸಿಯೆಸ್ಟ್ ಮ್ಯಾನ್ ಅಲೈವ್ ' (ಜೀವಂತವಾಗಿರುವ 2022ರ ಸುಂದರಾದ) ಎಂಬ ಬಿರುದನ್ನು ಕ್ರಿಸ್ ಇವಾನ್ಸ್ ಗಳಿಸಿದ್ದಾರೆ. ಈ ಪ್ರಶಸ್ತಿ ಬಗ್ಗೆ ಪ್ರತಿಕ್ರಿಯಿಸಿದ ಎವಾನ್ಸ್‌, ಇದರಿಂದ ನನ್ನ ತಾಯಿ ತುಂಬಾ ಸಂತೋಷವಾಗಿರುತ್ತಾರೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ನಾನು ಮಾಡುವ ಎಲ್ಲದರ ಬಗ್ಗೆ ಆಕೆ ಹೆಮ್ಮೆಪಡುತ್ತಾಳೆ, ಆದರೆ ಇದರಿಂದಂತೂ ಆಕೆ ಮತ್ತಷ್ಟು ಖುಷಿಪಟ್ಟಿರಬಹುದು ಎಂದು ಅವರು ಹೇಳಿದರು.

ಆರೆಂಜ್ ಗರ್ಲ್ ಆಗಿ ಬದಲಾದ 'ಕೆಜಿಎಫ್' ಸುಂದರಿ; ಮೌನಿ ರಾಯ್ ಹಾಟ್ ಫೋಟೋ ವೈರಲ್

Follow Us:
Download App:
  • android
  • ios