ಚೊಚ್ಚಲ ಬಾರಿಗೆ ಕಾನ್ಸ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಮೂಲಕ ವಿಶ್ವದ ಗಮನ ಸೆಳೆದಿರುವ ನಟಿ ಪೂಜಾ ಹೆಗ್ಡೆ ರ್ಯಾಂಪ್ ವಾಕ್ ಮಾಡುವ ಮೊದಲು ತನ್ನ ಎಲ್ಲಾ ಬಟ್ಟೆ ಮತ್ತು ಮೇಕಪ್ ಕಿಟ್ ಕಳೆದುಕೊಂಡಿರುವ ಬಗ್ಗೆ ಪೂಜಾ ಬಹಿರಂಗ ಪಡಿಸಿದ್ದಾರೆ.

ಪ್ರತಿಷ್ಠಿತ ಕಾನ್ಸ್ ಚಿತ್ರೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಈ ಬಾರಿ ಕಾನ್ಸ್ ನಲ್ಲಿ(Cannes 202) ಭಾರತೀಯ ಸೆಲೆಬ್ರಿಟಿಗಳು ಮಿಂಚುತ್ತಿದ್ದಾರೆ. 75ನೇ ಕಾನ್ಸ್ ಚಿತ್ರೋತ್ಸವದಲ್ಲಿ ಭಾರತೀಯ ನಟಿಮಣಿಯರು ರಂಗು ಹೆಚ್ಚಿಸಿದ್ದಾರೆ. ಮೇ 17ರಿಂದ ಪ್ರಾರಂಭವಾಗಿರುವ ಚಿತ್ರೋತ್ಸವದಲ್ಲಿ ದೀಪಿಕಾ ಪಡುಕೋಣೆ ಜ್ಯೂರಿಯಾಗಿ ಭಾರತದಿಂದ ಆಯ್ಕೆಯಾಗಿದ್ದಾರೆ. ಸೆಲೆಬ್ರಿಟಿಗಳು ತರಹೇವಾರಿ ಉಡುಗೆಯಲ್ಲಿ ಮಿಂಚುತ್ತಿದ್ದಾರೆ. ಅಂದಹಾಗೆ ಈ ಬಾರಿ ಕಾನ್ಸ್ ಚಿತ್ರೋತ್ಸವಕ್ಕೆ ಭಾಗಿಯಾದ ನಟಿಮಣಿಯರಲ್ಲಿ ನಟಿ ಪೂಜಾ ಹೆಗ್ಡೆ(Pooja Hegde) ಕೂಡ ಒಬ್ಬರು. ಅದ್ದೂರಿ ಗೌನ್ ನಲ್ಲಿ ಮಿಂಚುವ ಮೂಲಕ ನಟಿ ಪೂಜಾ ಹೆಗ್ಡೆ ಮೊದಲ ಬಾರಿಗೆ ಕಾನ್ಸ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು.

ಅಂದಹಾಗೆ ಚೊಚ್ಚಲ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಮೂಲಕ ವಿಶ್ವದ ಗಮನ ಸೆಳೆದಿರುವ ನಟಿ ಪೂಜಾ ಹೆಗ್ಡೆ ರ್ಯಾಂಪ್ ವಾಕ್ ಮಾಡುವ ಮೊದಲು ತನ್ನ ಎಲ್ಲಾ ಬಟ್ಟೆ ಮತ್ತು ಮೇಕಪ್ ಕಿಟ್ ಕಳೆದುಕೊಂಡಿರುವ ಬಗ್ಗೆ ಪೂಜಾ ಬಹಿರಂಗ ಪಡಿಸಿದ್ದಾರೆ. ಫಿಲ್ಮ್ ಕಂಪ್ಯಾನಿಯನ್ ಜೊತೆ ಮಾತನಾಡಿದ ಪೂಜಾ, 'ನಾವು ನಮ್ಮ ಕೂದಲಿನ ವಸ್ತುಗಳು, ಮೇಕಪ ಮತ್ತು ಬಟ್ಟೆಗಳನ್ನು ಕಳೆದುಕೊಂಡಿದ್ದೇವೆ. ಅದೃಷ್ಟವಶಾತ್ ನಾನು ಭಾರತದಿಂದ ಒಂದೆರಡು ನೈಜ ಆಭರಣಗಳನ್ನು ತಂದಿದ್ದೆ. ಅದನ್ನ ನಾನು ನನ್ನ ಕೈಯಲ್ಲೆ ಹಿಡಿದುಕೊಂಡಿದ್ದೆ. ಹಾಗಾಗಿ ಅವು ಮಾತ್ರ ನಮ್ಮ ಬಳಿ ಇವೆ' ಎಂದಿದ್ದಾರೆ.

'ನಾನು ಅತ್ತಿಲ್ಲ ಯಾಕಂದರೆ ಅದಕ್ಕೂ ಸಮಯ ವಿರಲಿಲ್ಲ. ಬಹುಶಃನನ್ನ ಮ್ಯಾನೇಜರ್ ನನಗಿಂತ ಹೆಚ್ಚು ಭಯಭೀತರಾಗಿದ್ದರು ಎಂದು ನಾನು ಭಾವಿಸುತ್ತೇನೆ. ಬಳಿಕ ನಾನು ಸರಿ ಪರ್ವಾಗಿಲ್ಲ, ಕಾರಲ್ಲಿ ಹೋಗೋಣ ಕೆಲವು ಬಟ್ಟೆಗಳ ಫಿಟ್ಟಿಂಗ್ ಮಾಡಿಸೋಣ, ನಾನು ಯಾವ ಬಟ್ಟೆ ಎಂದು ಹೇಳುತ್ತೇನೆ ಎಂದು ಹೇಳಿದೆ' ಅಂತ ಪೂಜಾ ಹೇಳಿದ್ದಾರೆ.

Cannes 2022: ದೀಪಿಕಾ ಪಡುಕೋಣೆ ಧರಿಸಿದ್ದು ಬರೋಬ್ಬರಿ 3.8 ಕೋಟಿ ರೂ. ಬೆಲೆಯ ನೆಕ್ಲೇಸ್ !

'ಬಳಿಕ ನನ್ನ ತಂಡ ಓಡಿ ಹೋಗಿ ಕೆಲವು ಕೂದಲಿನ ಸ್ಟೈಲಿಶ್ ಉತ್ಪನ್ನ, ಹೊಸ ಮೇಕಪ್ ಕಿಟ್ ಎಲ್ಲವನ್ನು ತಂದರು. ಸಮಯಕ್ಕೆ ಸರಿಯಾಗಿ ಎಲ್ಲವನ್ನು ಹೊಂದಿಸಿಕೊಂಡೆವು. ಇದು ತುಂಬಾ ಕ್ರೇಜಿಯಾಗಿತ್ತು. ನಾವು ಊಟ ಮಾಡಿಲ್ಲ, ಬೆಳಗ್ಗೆಯ ತಿಂಡಿ ಕೂಡ ತಿಂದಿಲ್ಲ. ರಾತ್ರಿ ರೆಡ್ ಕಾರ್ಪೆಡ್ ಆದ ಬಳಿಕವಷ್ಟೆ ನಾನು ಮೊದಲ ಊಟ ಸವಿದೆ. ತುಂಬಾ ಹೆಕ್ಟಿಕ್ ಆಗಿತ್ತು. ನನ್ನ ಹೇರ್ ಸ್ಟೈಲಿಸ್ಟ್ ಗೆ ಫುಡ್ ಪಾಯಸನಿಂಗ್ ಆಗಿತ್ತು. ಆದರೂ ನನ್ನ ಹೇರ್ ಸ್ಟೈಲ್ ಮಾಡಿದರು. ನನ್ನ ಬಳಿ ಅದ್ಭುತವಾದ ತಂಡವಿದೆ. ಹಾಗಾಗಿ ಇಂದು ನಾನು ಇಲ್ಲಿ ಇದ್ದೀನಿ' ಎಂದು ಪೂಜಾ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಮೊದಲು ಅನುಭವಿಸಿದ ಕಷ್ಟದ ಬಗ್ಗೆ ಬಹಿರಂಗ ಪಡಿಸಿದ್ದಾರೆ.

Cannes 2022; ಕಪ್ಪು-ಬಿಳಿ ಗೌನ್‌ನಲ್ಲಿ ಮಿಂಚಿದ ನಟಿ ತಮನ್ನಾ

ಪೂಜಾ ಫ್ರಾನ್ಸ್‌ ಪ್ರವಾಸಕ್ಕೆಂದು ತೆಗೆದುಕೊಂಡು ಹೊರಟ ಬ್ಯಾಗ್ ಗಳು ಭಾರತದಲ್ಲೇ ಉಳಿದುಕೊಂಡಿವೆ. ಕೇವಲ ಒಂದೇ ಒಂದು ಬ್ಯಾಕ್ ಚೆಕ್ ಆಗಿ ಹೋಗಿದೆ. ಇಷ್ಟೆಲ್ಲ ಕಷ್ಟಗಳ ನಡುವೆಯೂ ಪೂಜಾ ರೆಡ್ ಕಾರ್ಪೆಟ್ ನಲ್ಲಿ ವಾಕ್ ಮಾಡಿ ವಿಶ್ವದ ಗಮನ ಸೆಳೆದಿದ್ದಾರೆ.