Asianet Suvarna News Asianet Suvarna News

ಬ್ರಿಡ್ಜ್‌ರ್ಟೋನ್ ಸೀಸನ್ 3 ಬೆತ್ತಲೆ ಸೀನ್ ಲೀಕ್, ನಟಿಯ ರೋಮ್ಯಾನ್ಸ್‌ಗೆ ಹೌಹಾರಿದ ಫ್ಯಾನ್ಸ್!

ರೋಮ್ಯಾಂಟಿಕ್ ಟೆಲಿವಿಶನ್ ಸೀರಿಸ್ ಬ್ರಿಡ್ಜ್‌ಟೊರ್ನ್ ಸೀಸನ್ 3ರ ಎರಡನೇ ಪಾರ್ಟ್ ಬಿಡುಗಡೆಯಾಗಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಸೀರಿಸ್‌ನ  ರೋಮ್ಯಾಂಟಿಕ್ ಸೀನ್ ಲೀಕ್ ಆಗಿದೆ. ನಟಿ ನಿಕೋಲಾ ಬೆತ್ತಲೆ ಸೀನ್‌‌ಗೆ ಪ್ರೇಕ್ಷಕರು ಬೆಚ್ಚಿ ಬಿದ್ದಿದ್ದಾರೆ. 
 

Bridgerton season 3 actress Nicola Coughlan romantic nude scene leak on social media
Author
First Published Jun 14, 2024, 7:24 PM IST

ನ್ಯೂಯಾರ್ಕ್(ಜೂ.14) ಜನಪ್ರಿಯ ರೋಮ್ಯಾಂಟಿಕ್ ಟೆಲಿವಿಶನ್ ಸೀರಿಸನ್ ಬ್ರಿಡ್ಜ್‌ಟೋರ್ನ್ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಮೊದಲ ಆವೃತ್ತಿ 2020ರಲ್ಲಿ ಬಿಡುಗಡೆಯಾಗಿದ್ದರೆ, ಇದೀಗ ಮೂರನೇ ಆವೃತ್ತಿಯಲ್ಲಿ ಎರಡನೇ ಪಾರ್ಟ್ ಬಿಡುಗಡೆಗೆ ಸಜ್ಜಾಗಿದೆ. ಸೀರಿಸ್‌ನ ಟ್ರೇಲರ್ ಭಾರಿ ಕುತೂಹಲ ಮೂಡಿಸಿತ್ತು. ಜೂನ್ 13ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪಾರ್ಟ್ 2 ಬಿಡುಗಡೆ ಮಾಡಲಾಗಿದೆ.  ಇದರ ಬೆನ್ನಲ್ಲೇ ಚಿತ್ರದಲ್ಲಿನ ನಟಿಯ ಬೆತ್ತಲೆ ಸೀನ್ ಸಾಮಾಜಿಕ ಮಾಧ್ಯಮಗಳಲ್ಲಿ ಲೀಕ್ ಆಗಿದೆ. ನಟಿ ನಿಕೋಲಾ ಕೋಲನ್ ಬೆತ್ತಲಾಗಿ ನಟಿಸಿದ ಈ ಸೀನ್‌ಗೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ನಟ ಲ್ಯೂಕ್ ನ್ಯೂಟನ್ ಜೊತೆಗೆ ನಿಕೋಲಾ ಬೆತ್ತಲಾಗಿ ನಟೆಸಿದ್ದಾರೆ. ಈ ಕುರಿತು ಕೆಲ ವೇದಿಕೆಗಳಲ್ಲಿ ಹೇಳಿಕೆ ನೀಡಿದ್ದರು. ಇದೀಗ ಸೀರಿಸ್ ಪಾರ್ಟ್ ನಗ್ನ ಸೀನ್ ಲೀಕ್ ಆಗಿದೆ. ಈ ದೃಶ್ಯದಲ್ಲಿ ನಟಿ ನಿಕೋಲಾ ಹಾಗೂ ನಟ ಲ್ಯೂಕ್ ಇಬ್ಬರು ಬೆತ್ತಲಾಗಿದ್ದಾರೆ. ಪರಿಚಯ, ಸ್ನೇಹ, ಪ್ರೀತಿ ಗಾಢವಾಗಿ ಸಮುಧುರ ಕ್ಷಣದ  ಉತ್ತುಂಗತೆ ಕುರಿತ ಈ ದೃಶ್ಯ ಪ್ರೀತಿಸುವ ಜೋಡಿಗಳಿಗೆ ಮತ್ತಷ್ಟು ಮುದ ನೀಡಿದೆ. ಬಾಲ್ಯದ ಗೆಳೆತನ ಮುಂದೆ ಪ್ರೀತಿಯಾಗಿ ರೋಮ್ಯಾನ್ಸ್ ಆಗಿ ಬದಲಾಗುವ ಈ ದೃಶ್ಯ ಹಲವರಿಗೆ ಮುದ ನೀಡಿದರೆ ಮತ್ತೆ ಕೆಲವರಿಗೆ ಇರಿಸುಮುರಿಸು ತಂದಿದೆ.

Rege-Jean Page: ಜಗತ್ತಿನ ಅತಿ ಹ್ಯಾಂಡ್​ಸಮ್​ ಚಿತ್ರನಟ ಇವರೇ ನೋಡಿ...

ಈ ಸೀರಿಸ್‌ನಲ್ಲಿರುವ ಅತ್ಯಂತ ಬೋಲ್ಡ್ ಸೀನ್ ಇದಾಗಿದೆ. ರೆಡಿಟ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಈ ದೃಶ್ಯಗಳು ಲೀಕ್ ಆಗಿದೆ. ಈ ದೃಶ್ಯಕ್ಕೆ ಪರ ವಿರೋಧಗಳು ವ್ಯಕ್ತವಾಗಿದೆ. ಇದಕ್ಕಿಂತ ಪೊರ್ನ್ ಸಿನಿಮಾ ತೆಗೆಯಬಹುದಿತ್ತಾ ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ. ಪ್ರೀತಿ, ಮೋಸ, ರೋಮ್ಯಾಂಟಿಕ್ ಸೀನ್ ಬೆತ್ತಲಾಗದೇ ತೆಗೆಯಲು ಸಾಧ್ಯವಿಲ್ಲವೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇದೇ ವೇಳೆ ಹಲವರು ಸೀರಿಸ್ ತಪ್ಪದೇ ನೋಡುವುದಾಗಿ ಹೇಳಿದ್ದಾರೆ. 

ಬ್ರಿಡ್ಜ್‌ಟೊರ್ನ್ ಸೀಸನ್ 3ಯಲ್ಲಿ ಹಲವು ಕುತೂಹಲಗಳಿವೆ. ನಗ್ನ ದೃಶ್ಯ ಮಾತ್ರವಲ್ಲ, ರೋಚಕವಾಗಿ ಕತೆ ಹಾಗೂ ದೃಶ್ಯಗಳನ್ನು ಹೆಣೆಯಲಾಗಿದೆ. ಈ ಹೀಗಾಗಿ ಸೀಸನ್ 3 ಕೂಡ ಹಿಂದಿನಂತೆ ಸೂಪರ್ ಹಿಟ್ ಆಗಲಿದೆ ಅನ್ನೋದು ಸೀರಿಸ್ ತಂಡದ ವಿಶ್ವಾಸವಾಗಿದೆ.  ಅಮೆರಿಕದ ಐತಿಹಾಸಿಕ ರೋಮ್ಯಾನ್ಸ್ ಕತೆಯನ್ನು ಆಧಾರವಾಗಿಟ್ಟುಕೊಂಡು 2020ರಲ್ಲಿ ಕ್ರಿಸ್ ವ್ಯಾನ್ ಡಸೆನ್ ಈ ಸೀರಿಸ್ ನಿರ್ದೇಶನ ಆರಂಭಿಸಿದರು. ನೆಟ್‌ಫ್ಲಿಕ್ಸ್‌ನಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತ್ತು. 

ಇಬ್ಬರ ಜೊತೆ ರೋಮ್ಯಾನ್ಸ್, 'ಚಾಲೆಂಜರ್ಸ್' ಹಾಟ್ ಸೀನ್ ಸೋಶಿಯಲ್ ಮಿಡಿಯಾದಲ್ಲಿ ಲೀಕ್!

ಕೊರೋನಾ, ವಿಶ್ವದ ಹಲವು ಭಾಗದಲ್ಲಿ ಲಾಕ್‌ಡೌನ್ ವೇಳೆ ತೆರೆಕಂಡ ಈ ನೆಟ್‌ಫ್ಲಿಕ್ಸ್ ಸೀರಿಸ್‌ಗೆ ಎಲ್ಲಿಲ್ಲದ ಜನಪ್ರಿಯತೆ ಸಿಕ್ಕಿತ್ತು. 2022ರಲ್ಲಿ ಎರಡನೇ ಆವತ್ತಿ ಬಿಡುಗಡೆಯಾಗಿತ್ತು. ಇದೀಗ 3ನೇ ಆವೃತ್ತಿ ಬಿಡುಗಡೆಯಾಗಿದೆ. ಸದ್ಯ ಮೂರನೇ ಆವೃತ್ತಿ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿದೆ.


 

 

 

Latest Videos
Follow Us:
Download App:
  • android
  • ios