ಉತ್ತರ ಪ್ರದೇಶದಲ್ಲಿ ಒಂದು ವಿಚಿತ್ರ ಪ್ರಕರಣ. ಅಲ್ಲಿನ ಮಹಿಳೆಯೊಬ್ಬಳು ಗಂಡನಿಂದ ವಿಚ್ಛೇದನ ಕೊಡಿಸಿ ಎಂದು ಕೋರ್ಟ್ ಮೆಟ್ಟಿಲು ಏರಿದ್ದಾಳೆ. ಅದಕ್ಕೆ ಕಾರಣ ಆಕೆಯ ಗಂಡ ಬೋಳುತಲೆಯವನು ಎನ್ನೋದು. 

ಮದುವೆಗಿಂತ ಮುಂಚೆ ಈ ವಿಷಯವನ್ನು ಗಂಡ ಮುಚ್ಚಿಟ್ಟಿದ್ದನು. ಮದುವೆಯಾಗಿ ವರ್ಷದ ಬಳಿಕ ಈ ಸತ್ಯ ಹೊರಬಿದ್ದಿದೆ. ಮದುವೆ ನಂತರ ಈಗ ಗಂಡ ಸದಾ ವಿಗ್ ಇಲ್ಲದೆ ಓಡಾಡುತ್ತಿರುತ್ತಾನಂತೆ. ಇದು ಪತ್ನಿಗೆ ಬಹಳವೇ ಇರಸುಮುರಿಸು ತಂದಿದೆ. ಹೀಗಾಗಿ ಪತ್ನಿ ಕೋರ್ಟ್ ಮೆಟ್ಟಿಲೇರಿದ್ದಾಳೆ.

ಬೊಕ್ಕ ತಲೆ ಮರೆ ಮಾಚಿದ ಗಂಡನಿಂದ ಡಿವೋರ್ಸ್ ಕೊಡಿಸಿ

'ನನ್ನ ಗಂಡ ಬೋಳು ತಲೆಯವನು ಅಂತ ನನಗೆ ಒಂದು ವರ್ಷ ಗೊತ್ತೇ ಆಗಲಿಲ್ಲ. ಯಾವಾಗಲೂ ಅವರು ವಿಗ್ ತೆಗೆದಿರಲಿಲ್ಲ. ಆತನ ಕುಟುಂಬಸ್ಥರಿಗೆ ಈ ವಿಷಯ ತಿಳಿದಿತ್ತು. ಆದರೆ ಯಾರೂ ಕೂಡ ನನಗೆ ಹೇಳಿರಲಿಲ್ಲ. ನನ್ನ ಸ್ನೇಹಿತರ ಮುಂದೆ ನನಗೆ ಈ ವಿಷಯ ಮುಜುಗರವಾಯ್ತು, ನನಗೆ ಅವನ ಜೊತೆ ಬಾಳಲು ಸಾಧ್ಯವಿಲ್ಲ,' ಎಂದು ಪತ್ನಿ ಹೇಳಿಕೆ ನೀಡಿದ್ದಾಳೆ. ಗಂಡ ಹೆಂಡತಿ ಸಾಮರಸ್ಯದಿಂದ ಇರುವಂತೆ ಮಾಡಲು ಫ್ಯಾಮಿಲಿ ಕೌನ್ಸೆಲಿಂಗ್ ಸೆಂಟರ್ ಆದಷ್ಟು ಪ್ರಯತ್ನಪಟ್ಟಿದೆ. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. 'ಇನ್ನು ಒಂದು ದಿನಾಂಕವನ್ನು ನೀಡಲಾಗಿದೆ, ಆಗಲಾದರೂ ದಂಪತಿ ಸರಿ ಹೋಗಬಹುದು' ಎಂದು ಫ್ಯಾಮಿಲಿ ಕೌನ್ಸೆಲಿಂಗ್ ಸೆಂಟರ್ ಹೇಳಿದೆ.

ಮಗನ ಜನನದ ನಂತರ ಸ್ನೇಹಿತರ ಜೊತೆ ಕರೀನಾ ಪಾರ್ಟಿ ಫೋಟೋ ವೈರಲ್‌! ...

ಈ ಘಟನೆಗೆ ಬಾಲಿವುಡ್ ನಟಿ ಯಾಮಿ ಗೌತಮ್ ಪ್ರತಿಕ್ರಿಯೆ ನೀಡಲು ಕಾರಣವೇನು? ಯಾಕೆಂದರೆ ಆಕೆ ಹಿಂದಿನ ವರ್ಷ ನಟಿಸಿದ ಒಂದು ಫಿಲಂ ಸುಮಾರಾಗಿ ಇದೇ ಕಥೆಯನ್ನು ಹೊಂದಿದೆ. ಇದೇ ರೀತಿಯ ಪತ್ನಿಯ ಪಾತ್ರವನ್ನು ಸೂಪರ್ ಹಿಟ್ ಸಿನಿಮಾ 'ಬಾಲ'ದಲ್ಲಿ ಯಾಮಿ ಗೌತಮ್ ನಿಭಾಯಿಸಿದ್ದರು. ಈ ನ್ಯೂಸ್ ಶೇರ್ ಮಾಡಿರುವ ಯಾಮಿ ಗೌತಮ್, 'ಓಹ್ ಮೈ ಗಾಡ್' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಈ ಟ್ವೀಟ್‌ಗೆ 'ಬಾಲ' ನಿರ್ದೇಶಕ ಅಮರ್ ಕೌಶಿಕ್‌ನ್ನು ಟ್ಯಾಗ್ ಮಾಡಿದ್ದಾರೆ. 

'ಬಾಲ' ಸಿನಿಮಾದಲ್ಲಿ ಯಾಮಿ ಗೌತಮ್ ಅವರು ಟಿಕ್‌ಟಾಕ್ ಸ್ಟಾರ್ ಪಾತ್ರ ಮಾಡಿದ್ದರು. ಆಕೆ ಸೇಲ್ಸ್‌ಮ್ಯಾನ್ ಆಯುಷ್ಮಾನ್‌ನ್ನು ಪ್ರೀತಿ ಮಾಡುತ್ತಾಳೆ. ಮದುವೆ ಆಗುವವರೆಗೂ ಆಯುಷ್ಮಾನ್ ಬೋಳು ತಲೆ ವಿಚಾರವನ್ನು ಮುಚ್ಚಿಡುತ್ತಾನೆ. ಆಮೇಲೆ ಈ ವಿಷಯ ತಿಳಿದಾಗ ಯಾಮಿ ವಿಚ್ಛೇದನದ ಮೊರೆ ಹೋಗುತ್ತಾರೆ. ಆನಂತರ ತಾನು ಏನು ಅನ್ನೋದನ್ನು ಆಯುಷ್ಮಾನ್ ಅರ್ಥ ಮಾಡಿಕೊಳ್ತಾರೆ. ನಂತರ ಅವರು ಈ ವಿಚಾರಕ್ಕೆ ಸಂಬಂಧಿಸಿ ಮೋಟಿವೇಶನಲ್ ಸ್ಪೀಕರ್ ಆಗಿ ಅನೇಕರಿಗೆ ಪ್ರೇರಣೆ ನೀಡುತ್ತಾರೆ.

 

 

ನಟಿ ಕೃತಿ ಶೆಟ್ಟಿ ಟ್ರೆಂಡ್ : ವೈರಲ್ ಆಗ್ತಿರೋ ದಾವಣಿ ಹುಡುಗಿ ಇವಳೇ ...

ಬಾಲಾ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸದ್ದು ಮಾಡಿತ್ತು. ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ ಯಾಮಿ, ಬೊಕ್ಕತಲೆ ಇರುವ ವ್ಯಕ್ತಿಗಳು ತುಂಬಾ ಕೂಲ್ ಆಗಿರುತ್ತಾರೆ ಎಂದಿದ್ದರು. "ನಿಜ ಜೀವನದಲ್ಲಿ ಬೊಕ್ಕತಲೆ ಇರುವ ವ್ಯಕ್ತಿಯನ್ನು ಮದುವೆಯಾಗುತ್ತೀರಾ?" ಎಂದು ಪತ್ರಕರ್ತರು ಕೇಳಿದಾಗ, "ಯಾಕಾಗಬಾರದು? ನನ್ನ ದೃಷ್ಟಿಯಲ್ಲಿ ಬೊಕ್ಕತಲೆ ಇರುವ ವ್ಯಕ್ತಿಗಳು ತುಂಬಾ ಕೂಲ್ ಆಗಿ ಇರುತ್ತಾರೆ. ನಾನು ಮೊದಲು ಈ ಸಿನಿಮಾವನ್ನು ತೆರೆಗೆ ತರಲು ಕಾರಣ, ಯಾರೇ ಆಗಲಿ ಮೊದಲು ತಮ್ಮನ್ನು ತಾವು ಪ್ರೀತಿಸಬೇಕು. ಆ ಬಳಿಕ ಬೇರೆಯವರಿಂದ ಪ್ರೀತಿಯನ್ನು ನಿರೀಕ್ಷಿಸಬೇಕು" ಎಂದಿದ್ದರು. 

ಹರ್ಷನ ಎದೆ ಮೇಲೆ ಭುವಿ! ಈ ಜೋಡಿಯನ್ನು ಯಾರೂ ಬೇರೆ ಮಾಡೋಕಾಗಲ್ಲ ...