ಟ್ವಿಟರ್‌ನಲ್ಲಿ #BoycottShahRukhKhan ಟ್ರೆಂಡ್ ಇದ್ದಕ್ಕಿದ್ದಂತೆ ನೆಟ್ಟಿಗರಿಗೆ ಯಾಕೆ ಈ ಪರಿ ಸಿಟ್ಟು ?

ಬಾಲಿವುಡ್ ನಟ ಕಿಂಗ್ ಖಾನ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದ್ದಾರೆ. ಇದೀಗ #BoycottShahRukhKhan ಟ್ರೆಂಡ್ ಆಗಿದೆ. ನಟನ ಬಹುನಿರೀಕ್ಷಿತ ಸಿನಿಮಾ ಪಠಾನ್ ಪೋಸ್ಟರ್ ಜೊತೆ ಬಾಯ್ಕಾಟ್ ಹ್ಯಾಶ್‌ಟ್ಯಾಗ್‌ಗಳು ಟ್ವಿಟರ್‌ನಲ್ಲಿ ಟ್ರೆಂಡ್ ಆಗಿವೆ. ಅಷ್ಟಕ್ಕೂ ಈ ಹಠಾತ್ ಕೋಪಕ್ಕೆ ಕಾರಣವೇನು ? ನಟನ ವಿರುದ್ಧ ಇಷ್ಟೊಂದು ವಿರೋಧ ವ್ಯಕ್ತವಾಗಿದ್ದು ಏಕೆ ?

ಪಾಕ್ ಕ್ರಿಕೆಟ್ ಆಟಗಾರರು ವಿಶ್ವದಲ್ಲೇ ಶ್ರೇಷ್ಠ ಆಟಗಾರರು ಎಂದು ಶಾರೂಖ್ ಹೇಳಿಕೆ ಕೊಟ್ಟಿದ್ದು ಈಗ ಮತ್ತೆ ಸುದ್ದಿಯಾಗಿದೆ. ಅಷ್ಟೇ ಅಲ್ಲದೆ ಅಕ್ಷಯ್ ಕುಮಾರ್, ಅಜಯ್ ದೇವಗನ್‌ನಂತಹ ನಟರು ಥಾನಾಜಿ, ಪೃಥ್ವಿರಾಜ್ ಚೌಹಾಣ್ ಕುರಿತ ಸಿನಿಮಾ ಮಾಡಿದರೆ ಶಾರೂಖ್ ಪಠಾನ್ ಸಿನಿಮಾ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ವಿಜಯ್-ಶಾರೂಖ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್: ಒಂದಾಗ್ತಿದ್ದಾರೆ ಸೂಪರ್ ಸ್ಟಾರ್ಸ್

ಈ ಹಠಾತ್ ಟ್ರೆಂಡ್‌ಗೆ ಒಂದೇ ಕಾರಣ ಎನ್ನುವುದಕ್ಕಿಂತ ಬಹಳಷ್ಟು ಕಾರಣಗಳನ್ನು ಇಟ್ಟುಕೊಂಡು ಈಗ ಟ್ರೆಂಡ್ ಆಗುತ್ತಿದ್ದಾರೆ ಶಾರೂಖ್. ಪಠಾನ್ ಸಿನಿಮಾ, ಹಳೆಯ ಸಂದರ್ಶನಗಳು, ಅವರ ಹೇಳಿಕೆಗಳನ್ನೂ ಸೇರಿಸಿ ಎಲ್ಲವನ್ನೂ ಈ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಟ್ರೋಲ್ ಮಾಡಲಾಗುತ್ತಿದೆ.

Scroll to load tweet…

ಇನ್ನೊಂದೆಡೆ ಶಾರೂಖ್ ಅಭಿಮಾನಿಗಳು ಲವ್ ಯೂ ಶಾರೂಖ್ ಕೂಡಾ ಟ್ರೆಂಡ್ ಮಾಡಿದ್ದಾರೆ. ಭಾರತದ ಚಿತ್ರರಂಗದ ಪ್ರಮುಖ ವ್ಯಕ್ತಿ ಶಾರೂಖ್ ಅವರನ್ನು ವಿದೇಶಿಗರು ಮೆಚ್ಚಿ ಹೊಗಳುತ್ತಾರೆ. ಅಷ್ಟೇ ಅಲ್ಲದೆ ನಟ ಬಡವರಿಗೆ, ಕಷ್ಟದಲ್ಲಿರುವವರಿಗೂ ನೆರವಾಗಿದ್ದಾರೆ ಎಂದು ಬೆಂಬಲಿಸಿದ್ದಾರೆ.

Scroll to load tweet…
Scroll to load tweet…